More

    ‘ನಿಜವಾದ ಹೋರಾಟಗಾರರ ಕೊಂದ ಬ್ರಿಟಿಷರನ್ನು ಬಿಟ್ಟದ್ದೇಕೆ? ಚರ್ಚಿಲ್‌ನನ್ನು ಹೀರೋ ಮಾಡಿದ್ದೇಕೆ? ನೆಹರೂ ಪತ್ರ ಓದಿದ್ದೀರಾ? ತಪ್ಪು ನನ್ನದಾ?’

    ನವದೆಹಲಿ: 1947ರಲ್ಲಿ ನಮಗೆ ಸಿಕ್ಕಿದ್ದು ಭಿಕ್ಷೆ, 2014ರಲ್ಲಿ (ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ) ಸಿಕ್ಕಿದ್ದೇ ನಿಜವಾದ ಸ್ವಾತಂತ್ರ್ಯ ಎಂದು ಹೇಳುವ ಮೂಲಕ ಭಾರಿ ವಿವಾದ ಸೃಷ್ಟಿಸಿರುವ ನಟಿ ಕಂಗನಾ ರಣಾವತ್‌ ತಮ್ಮ ಮಾತಿನ ಚಾಟಿಯನ್ನು ಮುಂದುವರೆಸಿದ್ದಾರೆ.

    ಇವರ ಈ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿ ಅವರಿಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್‌ ಪಡೆಯಬೇಕು ಎಂಬ ಕೂಗು ಒಂದು ವರ್ಗದಿಂದ ಕೇಳಿಬರುತ್ತಿದೆ. ಮಾತ್ರವಲ್ಲದೇ ಕಂಗನಾ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ ಎಂದು ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

    ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ನಟಿ, ತಾವು ಏಕೆ ಆ ರೀತಿ ಹೇಳಿಕೆ ನೀಡಿದ್ದೇವೆ ಎಂಬ ಬಗ್ಗೆ ಟೀಕಾಕಾರರಿಗೆ ಉತ್ತರಿಸಿದ್ದಾರೆ.

    ‘ನಿಜವಾಗಿ ಸ್ವಾತಂತ್ರ್ಯ ತಂದುಕೊಟ್ಟವರು ಹುತಾತ್ಮರಾದರು. ಬ್ರಿಟಿಷರ ವಿರುದ್ಧ ಹೋರಾಡಿದವರನ್ನು ಕೊಲೆ ಮಾಡಿದ, ಭಾರತಕ್ಕೆ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಬಲಿಕೊಟ್ಟ ನಾಯಕರು ಹಾಗೂ ಲಕ್ಷಾಂತರ ಸಾರ್ವಜನಿಕರನ್ನು ಕೊಂದವರ ಸಾವಿಗೆ ಕಾರಣವಾಗಿರುವ ಬ್ರಿಟಿಷರ ವಿರುದ್ಧ ಯಾವುದೇ ಕೇಸ್‌ ದಾಖಲು ಮಾಡದೇ, ಎಲ್ಲಾ ಸಾಧ್ಯತೆಗಳು ಇದ್ದರೂ ಅವರನ್ನು ಆಗ ಏಕೆ ಸುಮ್ಮನೆ ಬಿಡಲಾಯಿತು ಎಂಬ ಬಗ್ಗೆ ಎಂದಾದರೂ ಯೋಚನೆ ಮಾಡಿರುವಿರಾ? ಅಂದು ಸಿಕ್ಕಿದ್ದು ಭಿಕ್ಷೆ ಎಂದ ನನ್ನ ಮಾತಿಗೆ ನಿಜವಾದ ಸ್ವಾತಂತ್ರ್ಯ ಹೋರಾಟಗಾರರಿಗೆ ನಾನು ಅವಮಾನ ಮಾಡುತ್ತಿದ್ದೇನೆ ಎನ್ನುತ್ತಿದ್ದೀರಲ್ಲಾ… ಅಂದಿನ ಸರ್ಕಾರ ಬ್ರಿಟಿಷರನ್ನು ಸುಮ್ಮನೇ ಬಿಟ್ಟಿದ್ದೇಕೆ ಎಂದು ಪ್ರಶ್ನಿಸಿಕೊಂಡಿದ್ದೀರಾ? ಇದು ನೈಜ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿರುವ ಅವಮಾನವಲ್ಲವೆ ಎಂದು ಪ್ರಶ್ನಿಸಿದ್ದಾರೆ.

    ಭಾರತದಲ್ಲಿ ನಡೆಸಿದ ಅಸಂಖ್ಯ ಕ್ರೌರ್ಯಕ್ಕೆ, ನಮ್ಮ ಸಂಪತ್ತು ಲೂಟಿ ಹೊಡೆದಿದ್ದಕ್ಕೆ, ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ಹತ್ಯೆ ಮಾಡಿದ್ದಕ್ಕೆ, ದೇಶವನ್ನು ವಿಭಜನೆ ಮಾಡಿದ್ದಕ್ಕೆ ಬ್ರಿಟಿಷರನ್ನು ಹೊಣೆ ಮಾಡದೇ ಇದ್ದದ್ದು ಏಕೆ? ಎರಡನೇ ಮಹಾಯುದ್ಧದ ಬಳಿಕ ಬ್ರಿಟಿಷರು ಸ್ವಲ್ಪ ವಿಶ್ರಾಂತಿ ಪಡೆದುಕೊಂಡು ಭಾರತ ಬಿಟ್ಟುಹೋದರು. ಆ ಸಂದರ್ಭದಲ್ಲಿ ವಿನ್‌ಸ್ಟನ್‌ ಚರ್ಚಿಲ್‌ನನ್ನು ಎರಡನೇ ಮಹಾಯದ್ಧದ ಹೀರೋ ಎಂದೇ ಹೇಳಲಾಯಿತು. ಈತ ಬಂಗಾಳದ ಕ್ಷಾಮಕ್ಕೆ ಕಾರಣನಾದವ. ಇವನು ಮಾಡಿದ ಈ ಘೋರ ಅಪರಾಧಕ್ಕೆ ಸ್ವಾತಂತ್ರ್ಯಾನಂತರ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತೇ? ಏಕೆ ಈ ರೀತಿ ಮಾಡಲಿಲ್ಲ? ಆಗಿನ ಸರ್ಕಾರ ಕಣ್ಮುಚ್ಚಿ ಕುಳಿತುಕೊಂಡದ್ದೇಕೆ ಎಂದು ಎಂದಾದರೂ ಯೋಚನೆ ಮಾಡಿರುವಿರಾ ಎಂದು ನಟಿ ಪ್ರಶ್ನಿಸಿದ್ದಾರೆ.

    ಈ ಕುರಿತು ಬಿಬಿಸಿಯಲ್ಲಿ ಬಂದ ಲೇಖನವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿರುವ ನಟಿ, ‘ಇದು 2015ರಲ್ಲಿ ಬಿಬಿಸಿ ಪ್ರಕಟಿಸಿದ್ದ ಲೇಖನ. ಭಾರತದಲ್ಲಿ ನಡೆದ ಘಟನಾವಳಿಗಳಿಗೆ ಬ್ರಿಟನ್‌ ಯಾವುದೇ ಪರಿಹಾರ ನೀಡಬೇಕಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಇದೇಕೆ ಈ ರೀತಿ ಎಂದು ಯೋಚನೆ ಮಾಡಿದ್ದೀರಾ? ಈ ಬಿಳಿ ಮೂತಿಯ ವಸಾಹತುಗಾರರು ಮತ್ತು ಅವರ ಪರ ಅನುಕಂಪ ಹೊಂದಿದವವರು ಇಂಥ ಅವಿವೇಕತನ ಮಾಡಿ ಬಚಾವ್‌ ಆಗುತ್ತಾರೆ ಎಂದರೆ ಏನರ್ಥ? ಇದಕ್ಕೆ ಕಾರಣರಾರು ಎಂದು ಯೋಚನೆ ಮಾಡಿ.

    ಸ್ವಾತಂತ್ರ್ಯ ಸಿಕ್ಕ ವರ್ಷದ ಬಳಿಕ ಆಗಿನ ಬಂಗಾಳದ ಗವರ್ನರ್‌ ಅವರನ್ನು, ಗವರ್ನರ್‌ ಜನರಲ್‌ ಆಫ್‌ ಇಂಡಿಯಾ ಆಗಿ ನೇಮಿಸಲು ಅನುಮತಿ ಕೋರಿ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ಬ್ರಿಟನ್‌ ರಾಜಮನೆತನದ ಅನುಮತಿ ಕೋರಿದ್ದರು. ಈ ಪತ್ರದ ತುಣುಕು ಕೂಡ ಇಂದಿಗೂ ಇದೆ. ಇಂಥ ಪತ್ರಗಳು ಲಭ್ಯವಿರುವಾಗ, ಭಾರತದಲ್ಲಿ ನಡೆದ ಅಪರಾಧಗಳಿಗೆ ಬ್ರಿಟಿಷರನ್ನು ಹೊಣೆ ಮಾಡಲು ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ ಎಂದಾದರೂ ಪ್ರಯತ್ನಿಸಿತ್ತು ಎಂದು ಯಾರಾದರೂ ನಂಬಲು ಸಾಧ್ಯವೇ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

    ಈ ನಡುವೆ ಕಂಗನಾ ಅವರ ಸ್ವಾತಂತ್ರ್ಯ ಕುರಿತಾಗಿ ಕಿಡಿ ಹೊತ್ತಿಸಿರುವ ಹೇಳಿಕೆ ಸರಿಯಾಗಿದೆ ಎಂದು ಮರಾಠಿ ಹಿರಿಯ ನಟ ವಿಕ್ರಮ್ ಗೋಖಲೆ ಹೇಳಿದ್ದಾರೆ. ನಾನು ಕಂಗನಾ ಹೇಳಿಕೆಯನ್ನು ಒಪ್ಪುತ್ತೇನೆ. ನಮಗೆ ಬ್ರಿಟಿಷರ ಆಳ್ವಿಕೆಯಲ್ಲಿ ಸ್ವಾತಂತ್ರ್ಯ ನೀಡಲಾಯಿತು. ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸಲಾಯಿತು ಮತ್ತು ಆ ಸಮಯದಲ್ಲಿ ದೊಡ್ಡ ನಾಯಕರು ಅವರನ್ನು ಉಳಿಸಲು ಪ್ರಯತ್ನಿಸಲಿಲ್ಲ. ಅವರು ಮೂಕ ಪ್ರೇಕ್ಷಕರಾಗಿ ಉಳಿದರು’ ಎಂದು ಹೇಳಿದ್ದಾರೆ.

    ಕಂಗನಾ ಅವರ ಇನ್‌ಸ್ಟಾಗ್ರಾಂ ಪೋಸ್ಟ್‌ ಇಲ್ಲಿದೆ ನೋಡಿ…

     
     
     
     
     
    View this post on Instagram
     
     
     
     
     
     
     
     
     
     
     

    A post shared by Kangana Thalaivii (@kanganaranaut)

    ಆಗಿಂದು ಭಿಕ್ಷೆ, ಇದು ನೈಜ ಸ್ವಾತಂತ್ರ್ಯ ಎನ್ನುವ ಮೂಲಕ ಸಂಚಲನ ಸೃಷ್ಟಿಸಿದ ಕಂಗನಾ- ಜಾಲತಾಣದಲ್ಲಿ ಬಿಸಿಬಿಸಿ ವಾತಾವರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts