More

    ಆಗಿಂದು ಭಿಕ್ಷೆ, ಇದು ನೈಜ ಸ್ವಾತಂತ್ರ್ಯ ಎನ್ನುವ ಮೂಲಕ ಸಂಚಲನ ಸೃಷ್ಟಿಸಿದ ಕಂಗನಾ- ಜಾಲತಾಣದಲ್ಲಿ ಬಿಸಿಬಿಸಿ ವಾತಾವರಣ

    ನವದೆಹಲಿ: ಒಂದೊಂದು ಹೇಳಿಕೆ ನೀಡುತ್ತಾ ಇತ್ತೀಚಿನ ದಿನಗಳಲ್ಲಿ ಸದಾ ಸುದ್ದಿಯಲ್ಲಿರುವ ನಟಿ ಎಂದರೆ ಮೊನ್ನೆಯಷ್ಟೇ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿರುವ ಕಂಗನಾ ರಣಾವತ್‌. ಇದೀಗ ಭಿಕ್ಷಾ ಸ್ವಾತಂತ್ರ್ಯ ಮತ್ತು ನೈಜ ಸ್ವಾತಂತ್ರ್ಯದ ಕುರಿತು ಮಾತನಾಡಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಖುದ್ದು ಬಿಜೆಪಿಯ ಸಂಸದರೇ ಇವರ ಹೇಳಿಕೆಯನ್ನು ವಿರೋಧಿಸಿದ್ದಾರೆ.

    ಅಷ್ಟಕ್ಕೂ ಕಂಗನಾ ಹೇಳಿದ್ದೇನೆಂದರೆ 1947ರಲ್ಲಿ ನಗೆ ಸಿಕ್ಕಿದ್ದು ಭಿಕ್ಷಾ ಸ್ವಾತಂತ್ರ್ಯ. ನಿಜವಾಗಿ ಅದು ಸ್ವಾತಂತ್ರ್ಯವಾಗಿರಲಿಲ್ಲ, ಅದು ಭಿಕ್ಷೆಯಾಗಿತ್ತು ಅಷ್ಟೇ. ಅಧರೆ 2014ರಲ್ಲಿ (ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಾಗ) ನಮಗೆ ಸಿಕ್ಕಿರುವುದು ನಿಜವಾದ ಸ್ವಾತಂತ್ರ್ಯ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ವಿರುದ್ಧ ಇದೀಗ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ಶುರುವಾಗಿದ್ದು, ಅನೇಕ ಮಂದಿ ಪುನಃ ನಟಿ ವಿರುದ್ಧ ಗರಂ ಆಗಿದ್ದಾರೆ. ಮಾತ್ರವಲ್ಲದೇ, ಬಿಜೆಪಿ ಸಂಸದ ವರುಣ್‌ ಗಾಂಧಿ ಕೂಡ ಆಕ್ರೋಶ ವ್ಯ‌ಕ್ತಪಡಿಸಿದ್ದಾರೆ.

    ಸುದ್ದಿ ವಾಹಿನಿಯೊಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಅವರು ಹೇಳಿರುವ ಈ ಹೇಳಿಕೆಯ 24 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.ಈ ಹೇಳಿಕೆ ವಿರುದ್ಧ ದೇಶ ದ್ರೋಹದ ಕೇಸು ದಾಖಲಿಸಬೇಕು ಎಂದು ಒತ್ತಾಯಗಳು ಕೂಡ ಕೇಳಿಬಂದಿವೆ. ಕೆಲವರು ಇದು ಸರಿಯಾದದ್ದು ಎಂದು ಚಪ್ಪಾಳೆ ತಟ್ಟಿದ್ದಾರೆ.

    ಇಷ್ಟೆಲ್ಲಾ ವಿವಾದ ಉಂಟಾದ ಮೇಲೆ ಮತ್ತಷ್ಟು ಸ್ಪಷ್ಟನೆ ನೀಡಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ‘ನೋಡಿ… 1857ರ ದಂಗೆ ಮೊದಲ ಸ್ವಾತಂತ್ರ್ಯ ಹೋರಾಟ. ಆದರೆ ಅದನ್ನು ಹತ್ತಿಕ್ಕಲಾಯಿತು. ಅದಾದ ನಂತರ ಬ್ರಿಟಿಷರ ದೌರ್ಜನ್ಯ ಭಾರತೀಯರ ಮೇಲೆ ಹೆಚ್ಚಿತು. ಅದಾದ ಒಂದು ಶತಮಾನದ ಬಳಿಕ ಗಾಂಧಿ ಅವರ ಭಿಕ್ಷಾ ಪಾತ್ರೆಯಲ್ಲಿ ಸ್ವಾತಂತ್ರ್ಯವನ್ನು ನಮಗೆ ನೀಡಲಾಯಿತು. ಸ್ವಾತಂತ್ರ್ಯವನ್ನು ನಾವು ಭಿಕ್ಷೆಯಾಗಿ ಪಡೆದರೆ ಅದು ಸ್ವಾತಂತ್ರ್ಯವಾಗುತ್ತದೆಯೇ? ಬ್ರಿಟಿಷರು ಕಾಂಗ್ರೆಸ್‌ ಎಂಬ ಹೆಸರನ್ನು ಬಿಟ್ಟು ಹೋದರು. ಅವರು ಬ್ರಿಟಿಷರ ಮುಂದುವರಿದಿರುವ ಭಾಗ. ದೇಶಕ್ಕೆ ನಿಜವಾದ ಸ್ವಾತಂತ್ರ್ಯ ದೊರಕಿದ್ದು 2014ರಲ್ಲಿ ಮೋದಿ ಪ್ರಧಾನಿಯಾದ ಬಳಿಕ.’ ಎಂದರು.

    ಕಂಗನಾ ಅವರ ಹೇಳಿಕೆ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ ಎಂದು ಅನೇಕ ಮಂದಿ ಕಿಡಿಕಾರಿದ್ದಾರೆ.

    ಪ್ರಯಾಣಿಕರು ಮೊಬೈಲ್‌ನಲ್ಲಿ ಹಾಡು, ವಾರ್ತೆ ಜೋರಾಗಿ ಹಾಕಿದ್ರೆ ಅರ್ಧದಲ್ಲೇ ಇಳಿಯಬೇಕಾಗತ್ತೆ ಹುಷಾರ್‌! ಇಂದಿನಿಂದಲೇ ಹೊಸ ರೂಲ್ಸ್‌

    ‘500 ಮಂದಿಯೊಂದಿಗೆ ಮಲಗಿರುವೆ- ಆರು ವರ್ಷಗಳಲ್ಲಿ 1000 ಪುರುಷರೇ ನನ್ನ ಗುರಿ’ ಎಂದು ಅನುಭವ ಬಿಚ್ಚಿಟ್ಟ ರೂಪದರ್ಶಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts