More

    ಪ್ರಯಾಣಿಕರು ಮೊಬೈಲ್‌ನಲ್ಲಿ ಹಾಡು, ವಾರ್ತೆ ಜೋರಾಗಿ ಹಾಕಿದ್ರೆ ಅರ್ಧದಲ್ಲೇ ಇಳಿಯಬೇಕಾಗತ್ತೆ ಹುಷಾರ್‌! ಇಂದಿನಿಂದಲೇ ಹೊಸ ರೂಲ್ಸ್‌

    ಬೆಂಗಳೂರು: ನಿಗಮದ ಬಸ್ಸುಗಳಲ್ಲಿ ಪ್ರಯಾಣಿಕರು ಮೊಬೈಲ್‌ನಲ್ಲಿ ಜೋರಾಗಿ ಹಾಡುಗಳನ್ನು ಹಾಕುವುದನ್ನು ಸಾರಿಗೆ ಇಲಾಖೆ ನಿರ್ಬಂಧಿಸಿದೆ. ಇವನ್ನೆಲ್ಲಾ ಕೇಳಲೇಬೇಕು, ನೋಡಲೇಬೇಕು ಎಂದಿದ್ದರೆ ಬೇರೆಯವರಿಗೆ ಡಿಸ್ಟರ್ಬ್‌ ಆಗದಂತೆ ಇಯರ್‌ಫೋನ್‌ ಹಾಕಿ ಕೇಳಬಹುದಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸಮರ್ಪಕ ಸುರಕ್ಷಿತ ಸಾರಿಗೆ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

    ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಮೊಬೈಲ್‌ ದೂರವಾಣಿ ಮೇಲೆ ಬಹಳಷ್ಟು ಅವಲಂಬಿತರಾಗಿದ್ದಾರೆ. ಮೊಬೈಲ್‌ ದೂರವಾಣಿ ಬಳಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಸಾರ್ವಜನಿಕರು ಬಸ್ಸಿನಲ್ಲಿ ಮೊಬೈಲ್‌ ದೂರವಾಣಿಯ ಮೂಲಕ ಜೋರಾಗಿ ಹಾಡು, ವಾರ್ತೆ, ಸಿನಿಮಾ ಇತ್ಯಾದಿ ಹಾಕುತ್ತಿದ್ದು ಇದರಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಹಾಗೂ ಬಸ್ಸಿನಲ್ಲಿ ಪ್ರಯಾಣಿಸುವ ಸಹ ಪ್ರಯಾಣಿಕರಿಗೆ ತೊಂದರೆವುಂಟಾಗುತ್ತಿರುವುದು ಕಂಡು ಬಂದಿದ್ದರಿಂದ ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್‌ನಲ್ಲಿ ದಾಖಲಾಗಿರುತ್ತದೆ.

    ಕರ್ನಾಟಕ ಮೋಟಾರು ವಾಹನಗಳ ನಿಯಮ ಉಲ್ಲಂಘಿಸಿ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಕರು ಮೊಬೈಲ್‌ ದೂರವಾಣಿ ಮೂಲಕ ಜೋರಾಗಿ ಶಬ್ದ ಹೊರಸೂಸುವಂತೆ ಹಾಡು, ವಾರ್ತೆ, ಸಿನಿಮಾ ಇತ್ಯಾದಿ ಹಾಕುವುದರಿಂದ ಶಬ್ದಮಾಲಿನ್ಯ ಉಂಟಾಗುತ್ತದೆ. ಹಾಗಾಗಿ ನಿಗಮದ ಬಸ್ಸುಗಳಲ್ಲಿ ದೂರವಾಣಿಯ ಮೂಲಕ ಜೋರಾಗಿ ಇವುಗಳ ಬಳಕೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

    ಈ ಸಂಬಂಧ ಕರ್ತವ್ಯ ನಿರತ ಚಾಲನಾ ಸಿಬ್ಬಂದಿ, ಪ್ರಯಾಣಿಕರಿಗೆ ಸೂಕ್ತ ತಿಳಿವಳಿಕೆ ನೀಡುವುದು ಹಾಗೂ ಹೆಚ್ಚಾಗಿ ಶಬ್ದ ಬರುವಂತೆ ಹಾಗೂ ಸಹ ಪ್ರಯಾಣಿಕರಿಗೆ ತೊಂದರೆಯಾಗುವಂತೆ ಮೊಬೈಲ್‌ ದೂರವಾಣಿ ಬಳಸುತ್ತಿದ್ದಲ್ಲಿ ಆ ರೀತಿ ಬಳಸದಂತೆ ವಿನಂತಿಸಬೇಕು ಎಂದು ನಿರ್ದೇಶಿಸಲಾಗಿದೆ.

    ಒಂದು ವೇಳೆ ಪ್ರಯಾಣಿಕ ವಿನಂತಿಗೆ ಮನ್ನಣೆ ನೀಡದೇ ಕರ್ನಾಟಕ ಮೋಟಾರು ವಾಹನಗಳ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಕಂಡುಬಂದಲ್ಲಿ ಅಂತಹ ಪ್ರಯಾಣಿಕರನ್ನು ನಿಯಮಾನುಸಾರ ಚಾಲಕ ಅಥವಾ ನಿರ್ವಾಹಕ ಸ್ಥಳದಲ್ಲಿಯೇ ನಿಗಮದ ಬಸ್ಸಿನಿಂದ ಇಳಿಸಬೇಕು. ಪ್ರಯಾಣಿಕನು ಇಳಿಯುವವರೆಗೂ ವಾಹನವನ್ನು ನಿಲ್ಲಿಸಬೇಕು. ಅಂತಹ ಪ್ರಯಾಣಿಕರಿಗೆ ಪ್ರಯಾಣ ದರವನ್ನು ಹಿಂತಿರುಗಿಸುವಂತಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ. ಈ ಸುತ್ತೋಲೆಯ ನಿರ್ದೇಶನಗಳು ತಕ್ಷಣದಿಂದ ಜಾರಿಗೆ ಬರಲಿದೆ.

    ‘500 ಮಂದಿಯೊಂದಿಗೆ ಮಲಗಿರುವೆ- ಆರು ವರ್ಷಗಳಲ್ಲಿ 1000 ಪುರುಷರೇ ನನ್ನ ಗುರಿ’ ಎಂದು ಅನುಭವ ಬಿಚ್ಚಿಟ್ಟ ರೂಪದರ್ಶಿ!

    ಈಗಾಗ್ಲೇ ನಾಲ್ಕು ಮಕ್ಕಳಿವೆ… ಮನೆಯಲ್ಲಿದ್ದರೆ ಇನ್ನೂ ಹೆಚ್ಚಾಗೋ ಭಯ ಎಂದ ನಟ ಸೈಫ್‌ ಅಲಿ ಖಾನ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts