More

    ನಿಂಬೆಹಣ್ಣಿನ ಬೆಡಗಿಗೆ ಹೈಕೋರ್ಟ್‌ ಪುನಃ ನೀಡಿತು ಶಾಕ್‌: 20 ಲಕ್ಷ ರೂ.ದಂಡ ಪ್ರಶ್ನಿಸಿದ್ದಕ್ಕೆ ಗರಂ

    ನವದೆಹಲಿ: ಭಾರತದಲ್ಲಿ 5ಜಿ ಅನುಷ್ಠಾನದ ಬಗ್ಗೆ ಬಾಲಿವುಡ್​ನ ಖ್ಯಾತ ನಟಿ ಜೂಹಿ ಚಾವ್ಲಾ ಅವರಿಗೆ ಇತ್ತೀಚೆಗೆ ದೆಹಲಿ ಹೈಕೋರ್ಟ್‌ 20 ಲಕ್ಷ ರೂಪಾಯಿ ದಂಡ ಹಾಕಿತ್ತು. ಅರ್ಜಿ ದೋಷಪೂರಿತವಾಗಿದ್ದು, ಪ್ರಚಾರಕ್ಕಾಗಿ ಈ ರೀತಿ ಕೇಸ್​ ದಾಖಲಿಸಲಾಗಿದೆ ಎಂದು ನ್ಯಾಯಾಲಯ ಹೇಳಿತ್ತು.

    ಜಗತ್ತಿನಾದ್ಯಂತ ಫೋನ್​ ಕಂಪೆನಿಗಳು, 5ಜಿ ನೆಟ್​ವರ್ಕ್​ ಅನುಷ್ಠಾನಗೊಳಿಸುವುದಕ್ಕೆ ಪ್ರಯತ್ನ ನಡೆಸುತ್ತಿವೆ. ಮುಂದಿನ ತಲೆಮಾರಿನ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಎದುರಾಗುವ ಸಾಧ್ಯತೆ ಎನ್ನುವುದು ಅವರ ವಾದವಾಗಿತ್ತು. ಜೂಹಿ ಚಾವ್ಲಾ ಅವರು ಈ ಬಗ್ಗೆ ಸರ್ಕಾರದ ಗಮನಕ್ಕೆ ತರಬೇಕಿತ್ತು ಸರ್ಕಾರದಿಂದ ಸಮಂಜಸ ಉತ್ತರ ಬರದಿದ್ದರೆ ನ್ಯಾಯಾಲಯಕ್ಕೆ ಬರಬೇಕಿತ್ತು ಎಂದು ಅಭಿಪ್ರಾಯಪಟ್ಟಿತ್ತು. ಹಾಗೂ ಇಂಥ ಕೇಸ್ ಹಾಕಿರುವುದು ಪ್ರಚಾರದ ಉದ್ದೇಶದಿಂದ ಎಂದು ಗರಂ ಆಗಿ 20 ಲಕ್ಷ ರೂಪಾಯಿ ದಂಡ ವಿಧಿಸಿತ್ತು.

    ಆದರೆ ಇದೀಗ ನಟಿ, ತಮಗೆ ವಿಧಿಸಲಾಗಿದ್ದ 20 ಲಕ್ಷ ರೂಪಾಯಿ ದಂಡ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದರು. ದಂಡ ವಿಧಿಸಲು ನ್ಯಾಯಾಲಯಕ್ಕೆ ಅಧಿಕಾರ ಇಲ್ಲ ಎನ್ನುವುದು ಅವರ ವಾದವಾಗಿತ್ತು. ಇದರಿಂದ ನ್ಯಾಯಮೂರ್ತಿಗಳು ನಟಿಯ ವಿರುದ್ಧ ಗರಂ ಆಗಿದ್ದಾರೆ. ನಾವು ಸಲ್ಲಿಸಿದ ದಂಡವನ್ನು ಪ್ರಶ್ನಿಸಿ ಪುನಃ ಕೋರ್ಟ್‌ಗೆ ಬಂದಿರುವುದು ನೋಡಿ ಅಚ್ಚರಿಯಾಗುತ್ತಿದೆ. ಕೋರ್ಟ್‌ ವಿಧಿಸಿರುವ ದಂಡವನ್ನು ಪಾವತಿ ಮಾಡದೇ ಅದನ್ನು ಪ್ರಶ್ನಿಸುತ್ತಿರುವ ಇಂಥ ವ್ಯಕ್ತಿಯನ್ನು ತಾನು ನೋಡಿಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

    ಕೂಡಲೇ ನಟಿ ದಂಡವನ್ನು ಕಟ್ಟುವುದಾಗಿ ಅವರ ಪರ ವಕೀಲರು ಹೇಳಿದರು. ಆಗ ನ್ಯಾಯಮೂರ್ತಿಗಳು ಒಂದೆಡೆ ದಂಡ ಜಮಾ ಮಾಡುವುದಾಗಿ ಹೇಳುತ್ತಿದ್ದೀರಿ, ಇನ್ನೊಂದೆಡೆ ಪ್ರಶ್ನಿಸುತ್ತಿದ್ದೀರಿ, ಇದು ತೀರಾ ವಿಚಿತ್ರ ಎಂದು ಹೇಳಿ, ಒಂದು ವಾರದೊಳಗೆ ದಂಡ ಕಟ್ಟುವಂತೆ ಸೂಚಿಸಿದರು.

    ದೂರುದಾರರ ವರ್ತನೆಯಿಂದ ತನಗೆ ಆಘಾತ ಉಂಟಾಗಿದೆ. ಇದು ನ್ಯಾಯಾಂಗ ನಿಂದನೆ ಆಗಿದೆ. ಈ ಮೊದಲು ಜೂಹಿ ಚಾವ್ಲಾ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸು ನೀಡಿರಲಿಲ್ಲ. ಇಲ್ಲದೇ ಇದ್ದರೆ, ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲಾಗುತ್ತಿತ್ತು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

    ವಿದ್ಯಾ ಬಾಲನ್‌ಗೆ ಭಾರತೀಯ ಸೇನೆ ಅತ್ಯುನ್ನತ ಗೌರವ: ಫೈರಿಂಗ್‌ ರೇಂಜ್‌ಗೆ ನಟಿಯ ಹೆಸರು

    ‘ಕಾಟನ್ ಪೇಟೆ ಗೇಟ್‌’, ‘ಸೀತಣ್ಣ ಪೇಟೆ ಗೇಟ್‌’ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದಿಯಲು ಬರ್ತಿದ್ದಾರೆ ಸನ್ನಿ

    ಮಂಚದ ಹಾಸಿಗೆ ಕೆಳಗೆ ಸುರಂಗ! ರಾತ್ರಿ ಎಸ್ಕೇಪ್‌ ಆಗಿ ಬೆಳಗ್ಗೆ ಬಂದ್ರೂ ಗೊತ್ತಾಗಲ್ಲ- ಇಲ್ಲಿದೆ ನೋಡಿ ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts