More

    ಪ್ರೇಮಲೋಕ ಹಾಡಿನ ಮರುಸೃಷ್ಟಿಗೆ ಜೂಹಿ ಚಾವ್ಲಾ ಫಿದಾ: ಹರ್ಷಿಕಾ ಪೂಣಚ್ಚ ಖುಷಿಗೆ ಪಾರವೇ ಇಲ್ಲ

    ಬೆಂಗಳೂರು: ಕ್ರೇಜಿಸ್ಟಾರ್​ ರವಿಚಂದ್ರನ್​ ಮತ್ತು ಬಾಲಿವುಡ್​ ಬ್ಯೂಟಿ ಜೂಹಿ ಚಾವ್ಲಾ ಹೆಸರು ಕೇಳಿದರೆ ಥಟ್ಟನೇ ನೆನಪಿಗೆ ಬರುವುದು ಪ್ರೇಮಲೋಕ ಸಿನಿಮಾ. 80ರ ದಶಕದಲ್ಲಿ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸುವುದರ ಜತೆಗೆ ಕನ್ನಡ ಚಿತ್ರರಂಗಕ್ಕೆ ಹೊಸ ರೂಪ ಕೊಟ್ಟ ಸಿನಿಮಾ ಅಂದರೆ ಅದು ಪ್ರೇಮಲೋಕ. ಈ ಸಿನಿಮಾದ ಆತ್ಮ ಅಂದರೆ ಅದು ಹಾಡುಗಳು. ಅದಕ್ಕೆ ಜೀವ ತುಂಬಿದ್ದು ಸಂಗೀತ ನಿರ್ದೇಶಕ ಹಂಸಲೇಖ. ಸಂಗೀತ ಪ್ರೇಮಿಗಳು ಇಂದಿಗೂ ಈ ಸಿನಿಮಾದ ಹಾಡುಗಳನ್ನು ಗುನುಗುತ್ತಲೇ ಇರುತ್ತಾರೆ.

    ಸರಿ ಈಗ್ಯಾಕೆ ಪ್ರೇಮಲೋಕ ಸಿನಿಮಾ ವಿಚಾರ ಹೇಳುತ್ತಿದ್ದೀರಾ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಮುಂದಿದೆ. ಪ್ರೇಮಲೋಕ ಸಿನಿಮಾದಲ್ಲಿ ಎಲ್ಲ ಹಾಡುಗಳು ಸೂಪರ್​ ಹಿಟ್​ ಎಂಬುದರಲ್ಲಿ ಎರಡು ಮಾತೇ ಇಲ್ಲ. ಅದರಲ್ಲೂ “ಹಲೋ ಮೈ ಲವ್ಲಿ ಲೇಡಿ ಹೂ ಆರ್​ ಯೂ” ಸಾಂಗ್​ ಮಾತ್ರ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈಗಾಗಲೂ ಮಾಡುತ್ತಿದೆ. ಇದೀಗ ಇದೇ ಸಾಂಗ್​ ಅನ್ನು ನಟಿ ಹರ್ಷಿಕಾ ಪೂಣಚ್ಚ ನಟನೆಯ ಹೊಸ ಸಿನಿಮಾ ತಾಯ್ತಾದಲ್ಲಿ ಮರುಸೃಷ್ಟಿಸಲಾಗುತ್ತಿದೆ.

    ಎರಡು ದಿನಗಳ ಹಿಂದಷ್ಟೇ ಹಾಡಿನ ಚಿತ್ರೀಕರಣಕ್ಕೆ ಸಂಬಂಧಿಸಿದ ವಿಡಿಯೋ ತುಣಕನ್ನು ಹರ್ಷಿಕಾ ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಪೋಸ್ಟ್​ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ತಾಯ್ತ ಸಿನಿಮಾ ಮೂಲಕ ಪ್ರೇಮಲೋಕ ಮರಳಿ ಬರುತ್ತಿದೆ. ಈ ಹಾಡಿನಲ್ಲಿ ನನಗೆ ಜೂಹಿ ಚಾವ್ಲಾ ಮೇಡಂ ತುಂಬಾ ಇಷ್ಟವಾದರೂ ಎಂದು ಅಡಿಬರಹ ನೀಡಿ ಜೂಹಿ ಚಾವ್ಲಾ ಅವರನ್ನು ಹರ್ಷಿಕಾ ಟ್ಯಾಗ್​ ಮಾಡಿದ್ದಾರೆ.

    ಇದೀಗ ಹರ್ಷಿಕಾ ಶೇರ್​ ಮಾಡಿಕೊಂಡಿರುವ ವಿಡಿಯೋ ನೋಡಿ ಜೂಹಿ ಚಾವ್ಲಾ ಅವರು ಪ್ರತಿಕ್ರಿಯೆ ನೀಡಿದ್ದು, ಹರ್ಷಿಕಾ ಖುಷಿಗೆ ಪಾರವೇ ಇಲ್ಲದಂತಾಗಿದೆ. ಹರ್ಷಿಕಾ ವಿಡಿಯೋಗೆ ಲವ್​ ಎಮೋಜಿ ಕಾಮೆಂಟ್​ ಮಾಡುವ ಮೂಲಕ ಜೂಹಿ ಚಾವ್ಲಾ ಹರ್ಷಿಕಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಿಂದ ಖಷಿಯಾಗಿರುವ ಹರ್ಷಿಕಾ, ನನ್ನ ವಿಡಿಯೋಗೆ ಪ್ರತಿಕ್ರಿಯಿಸುವ ಮೂಲಕ ನೀವು ಈ ದಿನವನ್ನು ನನ್ನದಾಗಿಸಿದಿರಿ ಮೇಡಂ ಎಂದಿದ್ದಾರೆ.

    ಹರ್ಷಿಕಾ ಅವರ ವಿಡಿಯೋಗೆ ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂದಿಗೂ ಈ ಹಾಡನ್ನು ಕೇಳುತ್ತಿದ್ದರೆ, ಹೊಸ ಅನುಭವವೇ ಬರುತ್ತದೆ ಎಂದು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ. ಸದ್ಯ ಜಾಲತಾಣದಲ್ಲಿ ಹಾಡಿನ ಮರುಸೃಷ್ಟಿ ವಿಡಿಯೋ ಸಂಚಲನ ಮೂಡಿಸಿದೆ.

    ‘ಕೆಜಿಎಫ್​-2 ಬಳಿಕ ಯಶ್ ಕನ್ನಡ ನಟನಾಗಿ ಉಳಿದಿಲ್ಲ, ಇನ್ಮುಂದೆ ಸಣ್ಣ ಸಿನಿಮಾಗಳಲ್ಲೂ ನಟಿಸಲ್ಲ’

    ಈ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ​ ನೀಲ್​! ಕೆಜಿಎಫ್​ ನಿರ್ದೇಶಕರ ವಿರುದ್ಧ ಅಭಿಮಾನಿಗಳ ಅಸಮಾಧಾನ

    ಉಗ್ರರ ಗುಂಡೇಟಿಗೆ ಖ್ಯಾತ ನಟಿ ಬಲಿ: ಮನೆಗೆ ಬಂದು ದಾಳಿ ಮಾಡಿದ ಭಯೋತ್ಪಾದಕರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts