More

    ಇಂಜಿನಿಯರಿಂಗ್‌ ಮುಗಿಸಿರುವಿರಾ? ಬಿಇಎಲ್‌ನಲ್ಲಿವೆ ಸಾಕಷ್ಟು ಉದ್ಯೋಗಾವಕಾಶ


    ಆಂಧ್ರಪ್ರದೇಶದ ಮಚಿಲಿಪಟ್ಟಣಂನಲ್ಲಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್​ನಲ್ಲಿ (ಬಿಇಎಲ್) ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ, ನವರತ್ನ ಸಂಸ್ಥೆಗಳಲ್ಲಿ ಒಂದಾಗಿರುವ ಬಿಇಎಲ್​ನ ಮಚಿಲಿಪಟ್ಟಣಂ ಘಟಕದಲ್ಲಿ ಒಟ್ಟು 15 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಸಾಮಾನ್ಯವರ್ಗಕ್ಕೆ 6 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 5, ಎಸ್​ಸಿ 2, ಎಸ್​ಟಿಗೆ 1, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 1 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

     ಒಟ್ಟು ಹುದ್ದೆಗಳು: 15


    ಹುದ್ದೆ ವಿವರ

    * ಪ್ರಾಜೆಕ್ಟ್ ಇಂಜಿನಿಯರ್ ಐ

    – ಎಲೆಕ್ಟ್ರಾನಿಕ್ಸ್- 6

    – ಮೆಕ್ಯಾನಿಕಲ್- 6

    – ಕಂಪ್ಯೂಟರ್ ಸೈನ್ಸ್ – 3

     

    ಶೈಕ್ಷಣಿಕ ಅರ್ಹತೆ: ಎಲೆಕ್ಟ್ರಾನ್ಸ್, ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್, ಎಲೆಕ್ಟ್ರಾನಿಕ್ಸ್ ಆಂಡ್ ಟೆಲಿಕಮ್ಯುನಿಕೇಷನ್/ ಕಮ್ಯುನಿಕೇಷನ್/ ಟೆಲಿಕಮ್ಯುನಿಕೇಷನ್, ಮೆಕಾನಿಕಲ್, ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್​ನಲ್ಲಿ ಬಿಇ, ಬಿ.ಟೆಕ್, ಬಿಎಸ್ಸಿ ಇಂಜಿನಿಯರಿಂಗ್ ಪದವಿ ಪಡೆದಿದ್ದು, ಸಾಮಾನ್ಯ ವರ್ಗ, ಆರ್ಥಿಕವಾಗಿ ದುರ್ಬಲವಾಗಿರುವ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಉಳಿದ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರೆ ಸಾಕು. ದೂರಶಿಕ್ಷಣ ಮೂಲಕ ಪಡೆದ ಪದವಿಗೆ ಮಾನ್ಯತೆ ಇಲ್ಲ ಎಂದು ತಿಳಿಸಲಾಗಿದೆ. ಕನಿಷ್ಠ 2 ವರ್ಷದ ವೃತ್ತಿ ಅನುಭವ ಕೇಳಲಾಗಿದೆ.

     

    ವಯೋಮಿತಿ: ಸಾಮಾನ್ಯ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ ಗರಿಷ್ಠ 28 ವರ್ಷ, ಇತರ ಹಿಂದುಳಿದ ವರ್ಗಕ್ಕೆ ಗರಿಷ್ಠ 31, ಎಸ್ಸಿ, ಎಸ್ಟಿಗೆ ಗರಿಷ್ಠ 33, ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷವಯೋಸಡಿಲಿಕೆ ಇದೆ.

     

    ವೇತನ: ಪ್ರಾಜೆಕ್ಟ್ ಇಂಜಿನಿಯರ್​ಗೆ ಮೊದಲ ವರ್ಷ ಮಾಸಿಕ 35,000 ರೂ., ಎರಡನೇ ವರ್ಷ ಮಾಸಿಕ 40,000 ರೂ., 3ನೇ ವರ್ಷ ಮಾಸಿಕ 45,000 ರೂ., 5ನೇವರ್ಷ 50,000 ರೂ. ವೇತನ ನಿಗದಿಪಡಿಸಲಾಗಿದೆ. ಇದಲ್ಲದೇ ವಾರ್ಷಿಕ ಇತರ ಭತ್ಯೆ ರೂಪದಲ್ಲಿ 10,000 ರೂ. ನೀಡಲಾಗುವುದು.

     

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ ಆಧರಿಸಿ ಸಿದ್ಧಪಡಿಸಲಾದ ಕಿರುಪಟ್ಟಿಯಲ್ಲಿನ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ವಿಡಿಯೋ ಮೂಲಕ ನಡೆಸಲಾಗುವ ಸಂದರ್ಶನದ ದಿನಾಂಕ ಹಾಗೂ ವಿವರಗಳನ್ನು ಆಯ್ಕೆಯಾದ ಅಭ್ಯರ್ಥಿಗಳ ಮೇಲ್​ಗೆ ಕಳುಹಿಸಲಾಗುವುದು.

     

    ಅರ್ಜಿ ಶುಲ್ಕ: ಎಸ್​ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ 500 ರೂ. ಶುಲ್ಕ ನಿಗದಿಪಡಿಸಲಾಗಿದೆ.

     

    ಅರ್ಜಿ ಸಲ್ಲಿಸಲು ಕೊನೇ ದಿನ: 24.12.2021

    ಅರ್ಜಿ ಸಲ್ಲಿಕೆ ವಿಳಾಸ: Manager (HR), Bharat Electronics Limited, Ravindranath Tagore Road, Machilipatnam – 521001, Andhra Pradesh


     ಅಧಿಸೂಚನೆಗೆ: https://bit.ly/3ErlttM


    ಮಾಹಿತಿಗೆ:http://www.bel-india.com

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts