More

    ರೋಗನಿರೋಧಕ ಶಕ್ತಿ ಹೆಚ್ಚಿಸುವ ಸೀರೆ! ಇದರ ಮಹಿಮೆ ಏನೆನಿದೆ ನೋಡಿ…

    ಭೋಪಾಲ್‌ (ಮಧ್ಯ ಪ್ರದೇಶ): ಕರೊನಾ ವೈರಸ್‌ ಈ ಸಂದರ್ಭದಲ್ಲಿ ಎಲ್ಲೆಲ್ಲೂ ರೋಗನಿರೋಧಕ ಶಕ್ತಿಯ ಮಾತೇ.
    ಮಾಸ್ಕ್‌ ಧರಿಸಿದರೆ ಕರೊನಾದಿಂದ ತಕ್ಕಮಟ್ಟಿಗೆ ದೂರ ಇರಬಹುದು ಎನ್ನುವುದು ಇದೀಗ ಸಾಮಾನ್ಯವಾಗಿದ್ದರೂ ಇಡೀ ದೇಹಕ್ಕೇ ರೋಗ ನಿರೋಧಕ ಶಕ್ತಿ ನೀಡಿದರೆ ಹೇಗೆ ಎಂಬ ಪ್ರಶ್ನೆ ಇಲ್ಲೊಬ್ಬರಿಗೆ ಉದ್ಭವಿಸಿದೆ.

    ಅದರ ಪ್ರತಿಫಲವೇ ರೋಗನಿರೋಧಕ ಸೀರೆ! ಇದು ಹರ್ಬಲ್‌ ಸೀರೆ ಎಂದೇ ಇದೀಗ ಖ್ಯಾತಿ ಪಡೆದಿದೆ. ಲವಂಗ, ಏಲಕ್ಕಿ, ಜಾಯಿಕಾಯಿ, ದಾಲ್ಚಿನ್ನಿ, ಕಾಳುಮೆಣಸು, ಜೀರಿಗೆ, ಪಲಾವ್‌ ಎಲೆ ಮತ್ತಿತರ ಮಸಾಲೆ ಪದಾರ್ಥಗಳನ್ನು ಸೇರಿಸಿ ಇದನ್ನು ತಯಾರು ಮಾಡಲಾಗಿದೆಯಂತೆ.

    ಮೂರ್ನಾಲ್ಕು ಸಲ ತೊಳೆದರೂ ಇದರಲ್ಲಿರುವ ರೋಗನಿರೋಧಕ ಶಕ್ತಿಯ ಗುಣಗಳು ಹಾಗೆಯೇ ಉಳಿದುಕೊಳ್ಳುತ್ತದೆ ಎಂದು ನಿಗಮ ಹೇಳಿದೆ. ಸದ್ಯ ಇದು ಭೋಪಾಲದ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

    ರೋಗನಿರೋಧಕ ಶಕ್ತಿ ಹೆಚ್ಚಿಸುವ ಸೀರೆ! ಇದರ ಮಹಿಮೆ ಏನೆನಿದೆ ನೋಡಿ...ಈ ಸೀರೆಗೆ ‘ಆಯುರ್ವಸ್ತ್ರ’ ಎಂದು ಹೆಸರು ಕೊಡಲಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವಂಥ ಅಂಶಗಳುಳ್ಳ ಗಿಡಮೂಲಿಕೆಗಳನ್ನು ಬಳಸಿ ಇವುಗಳನ್ನು ಸಿದ್ಧಪಡಿಸಲಾಗಿದೆ ಎನ್ನುತ್ತಾರೆ ಮಧ್ಯಪ್ರದೇಶ ಕೈಮಗ್ಗ ಮತ್ತು ಕರಕುಶಲ ನಿಗಮದ ತಯಾರಕರು. ಸೀರೆ ಮಾತ್ರಲ್ಲದೇ ಮಾಸ್ಕ್‌ ಸೇರಿದಂತೆ ಇತರ ಬಟ್ಟೆಗಳನ್ನೂ ಇದೇ ರೀತಿಯಲ್ಲಿ ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರವರು.

    ಇದನ್ನೂ ಓದಿ: ಹುಂಜ ಕೂಗಿದ್ದಕ್ಕೆ ₹14 ಸಾವಿರ ದಂಡ ಹಾಕಿದ ಪೊಲೀಸರು- ಕಾರಣ ವಿಚಿತ್ರ!

    ಇದರ ತಯಾರಿಕೆಯ ಬಗ್ಗೆ ವಿವರಿಸಿರುವ ನಿಗಮವು, ಲವಂಗ, ಏಲಕ್ಕಿ, ಜಾಯಿಕಾಯಿ, ದಾಲ್ಚಿನ್ನಿ, ಕಾಳುಮೆಣಸು, ಜೀರಿಗೆ, ಪಲಾವ್‌ ಎಲೆಗಳನ್ನು ಪುಡಿ ಮಾಡಲಾಗುತ್ತದೆ. ಇದನ್ನು 48 ಗಂಟೆಗಳಿಗೂ ಹೆಚ್ಚು ಸಮಯ ನೀರಿನಲ್ಲಿ ನೆನೆಸಿಡಲಾಗುತ್ತದೆ. ದೊಡ್ಡ ಕುಲುಮೆಯಲ್ಲಿ ಇದನ್ನು ಕುದಿಸಿದಾಗ ಆವಿ ಬರಲು ಶುರುವಾಗುತ್ತದೆ. ಆ ಆವಿಯನ್ನು ಕೆಲ ಗಂಟೆಗಳ ಕಾಲ ಬಟ್ಟೆಗಳ ಮೇಲೆ ಹಾಯಿಸಲಾಗುತ್ತದೆ. ಈ ಪ್ರಕ್ರಿಯೆ ಮುಗಿದ ಮೇಲೆ ಆ ಬಟ್ಟೆಗಳಿಂದ ಮಾಸ್ಕ್, ಸೀರೆ ಅಥವಾ ಇತರೆ ಉಡುಪುಗಳನ್ನು ತಯಾರಿಸಲಾಗುತ್ತದೆ ಎಂದಿದೆ.

    ಅಂದಹಾಗೆ ಈ ಸೀರೆಯ ಬೆಲೆ 3 ಸಾವಿರ ರೂಪಾಯಿಯಿಂದ ಶುರುವಾಗುತ್ತದೆ. ಒಂದು ಸೀರೆ ತಯಾರಿಸಲು 5 ರಿಂದ 6 ದಿನಗಳು ಬೇಕಾಗುತ್ತದೆ. ಸೋಂಕುಗಳ ವಿರುದ್ಧ ಹೋರಾಡಲು ಇದ್ದಂಥ ಶತಮಾನಗಳಷ್ಟು ಹಳೆಯ ವಿಧಾನವಿದು ಎಂದು ಜವಳಿ ತಜ್ಞ ವಿನೋದ್‌ ಮಲೇವಾರ್‌.

    ಸೆಪ್ಟೆಂಬರ್‌ನಲ್ಲಿ ಶಾಲೆ ಶುರುವಾಗತ್ತಾ? ಸಚಿವ ಸುರೇಶ್‌ಕುಮಾರ್‌ ಏನು ಹೇಳಿದ್ದಾರೆ ಕೇಳಿ…

    ಹುಂಜ ಕೂಗಿದ್ದಕ್ಕೆ ₹14 ಸಾವಿರ ದಂಡ ಹಾಕಿದ ಪೊಲೀಸರು- ಕಾರಣ ವಿಚಿತ್ರ!

    ಮಚ್ಚು ಹಿಡಿದು ಚಿನ್ನದಂಗಡಿಗೆ ನುಗ್ಗಿದವನ ಚಚ್ಚಿದಳು ಚಿಕ್ಕಮಗಳೂರು ಮಹಿಳೆ!

    ನಾಯಿಗಳು ಕಚ್ಚಿ ತಿಂದ ಕರೊನಾ ಸೋಂಕಿತನ ಶವ!

    ಗನ್ ಹಿಡಿದು ಬ್ಯಾಂಕ್‌ ನುಗ್ಗಿದ: ಬೆಚ್ಚಿಬಿದ್ದ ಕಲಬುರಗಿ ಸಿಬ್ಬಂದಿ- ಮುಂದೇನಾಯ್ತು?

    ಪಾಕ್‌ಗೆ ಬಿಗ್‌ ಷಾಕ್‌: ಸಾಲವೂ ಬಂದ್‌, ತೈಲವೂ ಬಂದ್‌ ಎಂದ ಸೌದಿ ಅರೇಬಿಯಾ!

    ಫ್ರಿಜ್‌ ಟ್ರೇ ಬಳಸಿ ಆನ್‌ಲೈನ್‌ ಕ್ಲಾಸ್‌: ಶಿಕ್ಷಕಿಯ ಪ್ಲ್ಯಾನ್‌ಗೆ ಅಪಾರ ಮೆಚ್ಚುಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts