More

    ವಿಜಯವಾಣಿ ‘ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

    ರಾಣೆಬೆನ್ನೂರ: ವಿಜಯವಾಣಿ ಕನ್ನಡ ನಂ. 1 ಪತ್ರಿಕೆ ವತಿಯಿಂದ ಮಹಿಳೆಯರಿಗಾಗಿ ಆಯೋಜಿಸಿದ್ದ ‘ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಯ ರಾಣೆಬೆನ್ನೂರ ವಿಧಾನಸಭೆ ಕ್ಷೇತ್ರದ ಐವರು ವಿಜೇತರಿಗೆ ಇಲ್ಲಿಯ ವಿನಾಯಕ ನಗರದ ಶ್ರೀ ವಿನಾಯಕ ದೇವಸ್ಥಾನದಲ್ಲಿ ಶುಕ್ರವಾರ ಬಹುಮಾನ ಸೀರೆ ನೀಡಲಾಯಿತು.
    ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಯಶ್ರೀ ಪಾಟೀಲ ಹಾಗೂ ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಮಾಜಿ ನಿರ್ದೇಶಕಿ ಭಾರತಿ ಜಂಬಗಿ ಬಹುಮಾನ ವಿಜೇತರಾದ ಮೃತ್ಯುಂಜಯ ನಗರ ರಾಜಶ್ರೀ ಉದಗಟ್ಟಿ, ಗೌರಿಶಂಕರ ನಗರದ ನರ್ಮದಾ ವಿ., ಅರೇಮಲ್ಲಾಪುರದ ಸಂಜನಾ ಬಸನಗೌಡ್ರ, ವಿನಾಯಕ ನಗರದ ಚೇತನಾ ಎಂ.ಎಚ್., ವಾಗೀಶ ನಗರದ ಶ್ರೀಮತಿ ಮುಗದೂರ ಅವರಿಗೆ ಸೀರೆ ನೀಡಿದರು.
    ನಂತರ ಮಾತನಾಡಿದ ಭಾರತಿ ಜಂಬಗಿ, ವಿಜಯವಾಣಿ ಪತ್ರಿಕೆಯವರು ಸಮಾಜದಲ್ಲಿ ಮಹಿಳೆಯರಿಗೆ ಹೆಚ್ಚಿನ ಮಹತ್ವ ನೀಡಿ ನಾರಿ ನಿನಗೊಂದು ಸ್ಯಾರಿ ಸ್ಪರ್ಧೆ ಆಯೋಜನೆ ಮಾಡಿರುವುದು ಸಂತಸದ ವಿಷಯ. ಮಹಿಳೆಯರಲ್ಲಿ ಸಂಸ್ಕಾರ, ಸಂಸ್ಕೃತಿಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದಸರಾ ಹಬ್ಬದ ಸಮಯದಲ್ಲಿ ಬಹುಮಾನವಾಗಿ ಸೀರೆಯನ್ನು ಉಡುಗೊರೆಯಾಗಿ ಕೊಡುವ ಮೂಲಕ ಅದರ ಮಹತ್ವ ಸಾರಿದ್ದಾರೆ. ಮುಂದಿನ ದಿನದಲ್ಲಿ ಇಂತಹ ಅನೇಕ ಕಾರ್ಯಕ್ರಮಗಳನ್ನು ವಿಜಯವಾಣಿ ಬಳಗದಿಂದ ಸಾರ್ವಜನಿಕರಿಗೆ ದೊರೆಯಲಿ ಎಂದು ಶುಭ ಹಾರೈಯಿಸಿದರು.
    ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಯಶ್ರೀ ಪಾಟೀಲ ಮಾತನಾಡಿ, ಮಹಿಳೆಯರಿಗೆ ಲಲಿತ ಪುರವಣಿ ಮೂಲಕ ಸೌಂದರ್ಯ ಸೇರಿ ಬಹಳಷ್ಟು ವಿಷಯಗಳ ಬಗ್ಗೆ ಮಾಹಿತಿಯನ್ನು ಕೊಡುವ ವಿಜಯವಾಣಿ ಪತ್ರಿಕೆಯವರು ಮಹಿಳೆಯರ ಜ್ಞಾನ ಹೆಚ್ಚಿಸುವ ಉದ್ದೇಶದಿಂದ ನಾರಿ ನಿನಗೊಂದು ಸ್ಯಾರಿ ಸ್ಪರ್ಧೆ ಆಯೋಜಿಸಿದಂತಾಗಿದೆ. ಇದರಿಂದ ಮಹಿಳೆಯರು ನಿತ್ಯವೂ ಪತ್ರಿಕೆ ಓದಿ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಅನುಕೂಲವಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts