More

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಥಾನಕ್ಕೆ ಇಮರ್ತಿದೇವಿ ರಾಜೀನಾಮೆ

    ದಾಬ್ರಾ (ಮಧ್ಯಪ್ರದೇಶ): ಮಧ್ಯಪ್ರದೇಶದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿದ್ದ ಇಮರ್ತಿ ದೇವಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.’

    ಉಪಚುನಾವಣೆಯಲ್ಲಿ ಮಧ್ಯಪ್ರದೇಶದ ದಾಬ್ರಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಸೋತಿದ್ದರು. ಈ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದಾರೆ.

    ಕಾಂಗ್ರೆಸ್​ ಪಕ್ಷದಿಂದ ಬಿಜೆಪಿಗೆ ಬಂದಿದ್ದ ಇಮರ್ತಿದೇವಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ ಕಾಂಗ್ರೆಸ್​ನ ಸುರೇಶ್ ರಾಜೆ ವಿರುದ್ಧ ಸೋತಿದ್ದಾರೆ. ಮಾರ್ಚ್‌ನಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಜ್ಯೋತಿರಾಡಿತ್ಯ ಸಿಂಧಿಯಾ ಅವರೊಂದಿಗೆ ಬಿಜೆಪಿಗೆ ಸೇರಿದ 22 ಶಾಸಕರಲ್ಲಿ ಇಮರ್ತಿ ದೇವಿ ಕೂಡ ಒಬ್ಬರು.

    ಇದನ್ನೂ ಓದಿ: ಈ ಬಿಜೆಪಿ ಅಭ್ಯರ್ಥಿ ಸೋತರೂ ತುಂಬ ಖುಷಿಯಾಗಿದ್ದಾರಂತೆ…ಕಾರಣ ಕಮಲನಾಥ್ ಅವರಂತೆ..!

    ಉಪಚುನಾವಣೆಯಲ್ಲಿ ಸೋತಿದ್ದರೂ ಅವರು ಇದುವರೆಗೆ ರಾಜೀನಾಮೆ ನೀಡಿರಲಿಲ್ಲ. ಇದು ಕಾಂಗ್ರೆಸ್​ ಪಾಳಯದಲ್ಲಿ ಭಾರಿ ಅಸಮಾಧಾನಕ್ಕೆ ಕಾರಣವಾಗಿತ್ತು. ಸಂಪುಟಕ್ಕೆ ರಾಜೀನಾಮೆ ನೀಡದಿರುವುದರ ಹಿಂದೆ ಏನಾದರೂ ಪ್ರಬಲ ಕಾರಣಗಳು ಇವೆಯೇ ಎಂಬ ಬಗ್ಗೆ ಆರೋಪಿಸಲಾಗಿತ್ತು.

    ಇದರ ಬೆನ್ನಲ್ಲೇ ಇದೀಗ ರಾಜೀನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ, ರಾಜೀನಾಮೆ ನೀಡಿದ ಸಚಿವರನ್ನು ನಿಗಮಗಳ ಅಧ್ಯಕ್ಷರನ್ನಾಗಿ ಮಾಡಿ ಸಚಿವರ ಸ್ಥಾನಮಾನವನ್ನು ನೀಡಬಹುದಾಗಿದೆ.

    ಚುನಾವಣೆಯ ಪ್ರಚಾರದ ವೇಳೆ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ಅವರು ಇಮರ್ತಿದೇವಿ ಅವರನ್ನು ಐಟಂ ಎಂದು ಕರೆದದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇಮರ್ತಿದೇವಿ ಮತ್ತು ಕಮಲ್​ನಾಥ್​ ಅವರ ನಡುವೆ ಭಾರಿ ವಾದ-ಪ್ರತಿವಾದಗಳು ಶುರುವಾಗಿದ್ದವು.

    ಮೂರು ಮಕ್ಕಳನ್ನು ಕಾಲುವೆಗೆ ತಳ್ಳಿ ಕೊಂದ ತಂದೆ- ಇದಕ್ಕೆ ಕಾರಣ ಹೆಂಡ್ತಿಯಂತೆ!

    ಕಣ್ಣಿನ ಕೆಳಗಿರುವ ಕಪ್ಪು ವರ್ತುಲ: ವೈದ್ಯರು ಹೇಳಿರುವ ಪರಿಹಾರ ಇಲ್ಲಿದೆ…

    ಬದುಕೇ ಸಾಕಾಗಿದೆ ಎನ್ನುವಿರಾ? ದೇಹದ ಅರ್ಧಭಾಗ ತುಂಡಾಗಿದ್ದರೂ ನಗುತ್ತಿರುವ ಯುವಕನ ಕಥೆ ಕೇಳಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts