More

    ಕಣ್ಣಿನ ಕೆಳಗಿರುವ ಕಪ್ಪು ವರ್ತುಲ: ವೈದ್ಯರು ಹೇಳಿರುವ ಪರಿಹಾರ ಇಲ್ಲಿದೆ…

    ಕಣ್ಣಿನ ಕೆಳಗಿರುವ ಕಪ್ಪು ವರ್ತುಲ: ವೈದ್ಯರು ಹೇಳಿರುವ ಪರಿಹಾರ ಇಲ್ಲಿದೆ...

    ಪ್ರಶ್ನೆ: ನನ್ನ ವಯಸ್ಸು 45. ಮಹಿಳೆ. ಕಣ್ಣಿನ ಸುತ್ತಲೂ ಕಪ್ಪು ವರ್ತುಲಗಳಿವೆ. ತುಂಬಾ ಹೊತ್ತು ಕಂಪ್ಯೂಟರ್ ಮುಂದೆ ಕುಳಿತುಕೊಂಡಿರುವುದಕ್ಕೆ ಈ ಸಮಸ್ಯೆ ಇದೆಯೇ? ಆದರೆ ಅದು ಅನಿವಾರ್ಯ. ಲೋಳೇರಸ, ನಿಂಬೆಹಣ್ಣು, ಸೌತೆಕಾಯಿ ಇತ್ಯಾದಿಗಳಿಂದ ಮಸಾಜ್ ಮಾಡುತ್ತಿದ್ದರೆ ಈ ಸಮಸ್ಯೆ ನಿವಾರಣೆಯಾಗುತ್ತದೆಯೇ ಅಥವಾ ಇನ್ನಾವುದಾದರೂ ಪರಿಹಾರಗಳಿವೆ? 

    ಉತ್ತರ: ನೀವು ದಿನಕ್ಕೆ 8 ಗಂಟೆ ನಿದ್ದೆ ಮಾಡಿ . ಮೂರು ಲೀಟರ್ ನೀರು ದಿನವೊಂದಕ್ಕೆ ಕುಡಿಯುತ್ತಿರಿ. ಕಣ್ಣಿನ ಕೆಳಭಾಗಕ್ಕೆ ಬಾದಾಮಿ ಎಣ್ಣೆ, ಬೆಲ್ಲ ಬೆರೆಸಿ ಪೇಸ್ಟ್ ತಯಾರಿಸಿ ಪ್ರತಿ ರಾತ್ರಿ ಮಲಗುವಾಗ ಲೇಪಿಸಿಕೊಳ್ಳಿ.

    ಬಾಳೆಹಣ್ಣು ಮತ್ತು ಪಪ್ಪಾಯ ಹಣ್ಣಿನ ತುಂಡುಗಳನ್ನು ಮಿಕ್ಸ್ ಮಾಡಿ ಪೇಸ್ಟ್​ ತಯಾರಿಸಿ ವಾರಕ್ಕೊಮ್ಮೆ ಮುಖಕ್ಕೆ ಲೇಪಿಸಿಕೊಂಡು ಒಂದು ಗಂಟೆ ಬಿಟ್ಟು ಮುಖ ತೊಳೆಯಿರಿ. ಮುಖ ತೊಳೆಯಲು ಕಡಲೆಹಿಟ್ಟು, ಅರಿಶಿಣ ಬೆರೆಸಿದ ಪುಡಿಯನ್ನು ಬಳಸಿ. ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

    ಆಹಾರದಲ್ಲಿಯೂ ಹೆಚ್ಚು ತರಕಾರಿ, ಸೊಪ್ಪು, ಹಣ್ಣುಗಳು ಹೆಚ್ಚು ತಿನ್ನಿ. ಹೀಗೆ ಮಾಡಿದರೆ ಕ್ರಮೇಣ ಸಮಸ್ಯೆ ಪರಿಹಾರವಾಗುತ್ತದೆ.

    ಮುಟ್ಟಿನ ಸಮಸ್ಯೆಯಿಂದ ಮುಕ್ತಿ ಹೊಂದಲು ಆಯುರ್ವೇದದಲ್ಲೇನು ಪರಿಹಾರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts