More

    VIDEO: 25 ವರ್ಷದ ಯುವಕನ ಹೃದಯ 62ರ ವೃದ್ಧನ ದೇಹ ಸೇರಿತು…

    ಬೆಂಗಳೂರು: ಒಬ್ಬರ ಹೃದಯವನ್ನು ಇನ್ನೊಬ್ಬರಿಗೆ ಕಸಿ ಮಾಡಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡುವ ಪ್ರಕ್ರಿಯೆಗೆ ಚಾಲನೆ ದೊರೆತು ವರ್ಷಗಳೇ ಕಳೆದಿವೆ. ಕೆಲವು ಆಸ್ಪತ್ರೆಗಳು ಇಂಥದ್ದೊಂದು ಯಶಸ್ವಿ ಚಿಕಿತ್ಸೆಯನ್ನು ಮಾಡಿವೆ. ಯಾವುದೋ ಮೂಲೆಯಲ್ಲಿದ್ದ ಜೀವಂತ ಹೃದಯವನ್ನು ಇನ್ನಾವುದೋ ಮೂಲೆಯಲ್ಲಿರುವ ಆಸ್ಪತ್ರೆಗೆ ರವಾನಿಸಿ ಅಲ್ಲಿ ಅಗತ್ಯ ಇರುವವರಿಗೆ ಜೀವದಾನ ಮಾಡಲಾಗುತ್ತಿದೆ.

    ಅಂಥದ್ದೇ ಒಂದು ಯಶಸ್ವಿ ಶಸ್ತ್ರಚಿಕಿತ್ಸೆ ಬೆಂಗಳೂರಿನ ನ್ಯೂ ಬಿಇಎಲ್​ ರಸ್ತೆಯಲ್ಲಿರುವ ರಾಮಯ್ಯ ನಾರಾಯಣ ಹೃದಯಾಲಯದಲ್ಲಿ ಇಂದು ನಡೆದಿದೆ.
    ಮದ್ದೂರಿನಲ್ಲಿ ರಸ್ತೆ ಅಪಘಾತಕ್ಕೆ ಒಳಗಾದ ಯುವಕನೊಬ್ಬನ ಹೃದಯವನ್ನು ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಜೋಡಿಸಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

    ಮದ್ದೂರಿನಲ್ಲಿ ಅಪಘಾತ ನಡೆದು 25 ವರ್ಷದ ಯುವಕ ಮೃತಪಟ್ಟಿದ್ದ. ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಆತನ ಹೃದಯವನ್ನು ತೆಗೆದಿಡಲಾಗಿತ್ತು. ಇದೇ ಸಮಯದಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯದ 62 ವರ್ಷದ ವ್ಯಕ್ತಿಯೊಬ್ಬರಿಗೆ ಹೃದಯದ ಅಗತ್ಯವಿತ್ತು. ಕೂಡಲೇ ಕಾರ್ಯಪ್ರವೃತ್ತವಾದ ವೈದ್ಯಕೀಯ ತಂಡ ಮೈಸೂರಿನಿಂದ ಬೆಂಗಳೂರಿಗೆ ತಂದು ಯಶಸ್ವಿ ಚಿಕಿತ್ಸೆ ಮಾಡಲಾಗಿದೆ.

    ರಸ್ತೆಯಲ್ಲಿ ನಿಂತಿದ್ದ ಮೂರು ಬೈಕ್​ಗಳಿಗೆ ಗುದ್ದಿದ ಕಾಂಗ್ರೆಸ್​ ಮುಖಂಡನ ಕಾರು: ಇಬ್ಬರ ಸಾವು

    ನಮಗ್ಯಾವ ರೂಲ್ಸ್​ರೀ ಎಂದು ಹೆಲ್ಮೆಟ್​ ಇಲ್ದೇ ತ್ರಿಬಲ್​ ರೈಡಿಂಗ್​ ಹೋದ ಲೇಡಿ ಪೊಲೀಸರಿಗೆ ಬಿತ್ತು ದಂಡ

    ‘ಅನುಭವವಿಲ್ಲದ ಸಚಿವ… ಹಠಮಾರಿ ಸಿಎಂ.. ಈಶ್ವರಪ್ಪ ಖಾತೆಯ ಹಣ ಕಾಣತ್ತೆ, ಸಮಸ್ಯೆ ಗೊತ್ತಾಗಲ್ವಾ?’

    ಕಳ್ಳರಿಗೆ ಬಲಿಯಾದ ಪೊಲೀಸ್ ಅಧಿಕಾರಿಯ ಶವ ನೋಡಿ ಪ್ರಾಣಬಿಟ್ಟ ಅಮ್ಮ! ಒಟ್ಟಿಗೇ ಶವ ಸಂಸ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts