More

    ಚಿನ್ನದ ಮೇಲೆ ಹೂಡಿಕೆ ಮಾಡಲು ಅದ್ಭುತ ಸಮಯ- ಆದರೆ ಇರಲಿ ಎಚ್ಚರ

    ನವದೆಹಲಿ: ಕರೊನಾ ವೈರಸ್​ನ ಈ ಬಿಕ್ಕಟ್ಟಿನ ದಿನಗಳಲ್ಲಿ, ಭವಿಷ್ಯವನ್ನು ಭದ್ರತೆ ಮಾಡಿಕೊಳ್ಳಲು ಚಿನ್ನದ ಹೂಡಿಕೆಯ ಸುರಕ್ಷಿತವಾಗಿದೆ ಎಂದೇ ಪರಿಗಣಿಸಲಾಗುತ್ತಿದೆ. ಸದ್ಯ 10 ಗ್ರಾಂ ಚಿನ್ನದ ಬೆಲೆ 56,191 ರೂಪಾಯಿಗಳಿದ್ದು, ಶೀಘ್ರದಲ್ಲಿಯೇ ಅದು 63 ಸಾವಿರ ರೂಪಾಯಿಗಳಿಗೆ ಏರಿಕೆಯಾಗುವ ಸಾಧ್ಯತೆ ಇದೆ.

    ಸದ್ಯ ಇದರ ಮೌಲ್ಯವು ಶೇ.43ರಷ್ಟು ಹೆಚ್ಚಾಗಿರುವ ಕಾರಣ ಹೂಡಿಕೆದಾರರಿಗೆ ಶೇ. 28ರಷ್ಟು ಆದಾಯ ದೊರಕುವ ಸಾಧ್ಯತೆ ಇದೆ. ಈ ವರ್ಷ ಡಾಲರ್‌ ಮೌಲ್ಯವು ಮತ್ತಷ್ಟು ಕುಸಿಯಲಿರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಷೇರುಪೇಟೆಯಲ್ಲಿನ ಅನಿಶ್ಚಿತತೆಯಿಂದಾಗಿ ಚಿನ್ನದತ್ತ ಹೂಡಿಕೆ ಮಾಡುವುದು ಉತ್ತಮ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

    ಈ ಹಿನ್ನೆಲೆಯಲ್ಲಿ ಸಣ್ಣ, ಚಿಲ್ಲರೆ ಹೂಡಿಕೆದಾರರಿಗೂ ಚಿನ್ನವು ಉತ್ತಮ ಆಯ್ಕೆಯಾಗಿದೆ. ಆದರೆ ಬಹಳ ಜಾಗರೂಕರಾಗಿ ಹೂಡಿಕೆ ಮಾಡಬೇಕಿದೆ.

    ಹೆಚ್ಚು ಸುರಕ್ಷಿತ ಆಯ್ಕೆಯೆಂದರೆ ಸಾಂಪ್ರದಾಯಿಕ ಚಿನ್ನದ ನಾಣ್ಯಗಳು ಅಥವಾ ಬಾರ್‌ಗಳು, ಇದು ಬಿಐಎಸ್ ಮಾನದಂಡಗಳಿಗೆ ಅನುಸಾರವಾಗಿ ಶುದ್ಧತೆಯ ವಿಶಿಷ್ಟ ಲಕ್ಷಣವನ್ನು ಹೊಂದಿರುತ್ತದೆ. ಆದ್ದರಿಂದ ಇವುಗಳನ್ನೇ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಸರ್ಕಾರವು ನೀಡುವ ಸಾರ್ವಭೌಮ ಚಿನ್ನದ ಬಾಂಡ್‌ಗಳಿಗೆ (ಎಸ್‌ಜಿಬಿ) ಚಂದಾದಾರರಾಗುವ ಮೂಲಕ ಉತ್ತಮ ಹೂಡಿಕೆ ಮಾಡಬಹುದಾಗಿದೆ.
    ಷೇರು ಮಾರುಕಟ್ಟೆಯಲ್ಲಿನ ಷೇರುಗಳಂತೆ, ಚಿನ್ನವನ್ನು ಯಾವಾಗ ಖರೀದಿಸಬೇಕು ಮತ್ತು ಯಾವಾಗ ಪಡೆದುಕೊಳ್ಳಬೇಕು ಎಂಬ ಬಗ್ಗೆ ದೃಷ್ಟಿ ಇಟ್ಟಿರಬೇಕು ಎನ್ನುತ್ತಾರೆ ತಜ್ಞರು.

    ಆಗಸ್ಟ್‌ ನಲ್ಲಿ ಎಂಸಿಎಕ್ಸ್‌ನಲ್ಲಿ ಚಿನ್ನವು 10 ಗ್ರಾಮ್‌ಗೆ ಸಾರ್ವಕಾಲಿಕ ಗರಿಷ್ಠ ದರವಾದ 56,191 ರೂ.ಗೆ ಜಿಗಿದಿತ್ತು. ಅಂತಾರಾಷ್ಟ್ರೀಯ ಮಾರು ಟ್ಟೆಯಲ್ಲಿ ಔನ್ಸ್‌ಗೆ 2,075 ಡಾಲರ್‌ಗೆ ಏರಿತ್ತು. 2020ರ ವರ್ಷದ ಆರಂಭದಲ್ಲಿ ಚಿನ್ನದ ದರವು 39,100 ರೂ. ಇತ್ತು. ಔನ್ಸ್‌ಗೆ 1,517 ಡಾಲರ್‌ ಇತ್ತು. ಕೋವಿಡ್‌ ಬಿಕ್ಕಟ್ಟಿನ ಹೊತ್ತಿನಲ್ಲಿ 38,400 ರೂ.ಗೆ ಕುಸಿಯಿತು. ಬಳಿಕ ನಿಧಾನವಾಗಿ ಏರುತ್ತಾ, ಒಂದು ಹಂತದಲ್ಲಿ ಸಾರ್ವಕಾಲಿಕ 56,191 ರೂ.ಗೆ ತಲುಪಿತ್ತು. ಕೋವಿಡ್‌ಗೆ ಲಸಿಕೆ ಬಂದರೂ ಚಿನ್ನದ ಬೇಡಿಕೆಯು ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

    ಕೈಗಾರಿಕಾ ಅಭಿವೃದ್ಧಿಯ ಅನಿಶ್ಚಿತತೆ ಮುಂದುವರೆದಿರುವುದರಿಂದ 2021ರಲ್ಲಿ ಚಿನ್ನಕ್ಕೆ ಬೇಡಿಕೆ ಇರಲಿದೆ ಎಂದು ಕಾಮ್‌ಟ್ರೆಂಡ್ಸ್‌ ರಿಸ್ಕ್ ಮ್ಯಾನೇಜ್ಮೆಂಟ್‌ ಸರ್ವೀಸಸ್‌ನ ಸಿಇಒ ಜ್ಞಾನಶೇಖರ್‌ ತ್ಯಾಗರಾಜನ್‌ ಹೇಳಿದ್ದಾರೆ. ಹಣದುಬ್ಬರ ಹೆಚ್ಚಳವಾಗಿ ಹೂಡಿಕೆದಾರರು ಚಿನ್ನದ ಖರೀದಿಗೆ ಆಕರ್ಷಿತರಾಗುತ್ತಾರೆ.

    ಕಡಿಮೆ ದರದಲ್ಲಿ ಚಿನ್ನ ಬೇಕಾ? ಕೇಂದ್ರ ಸರ್ಕಾರದಿಂದ ಶುರುವಾಗಿದೆ ಗೋಲ್ಡ್ ಬಾಂಡ್ ಯೋಜನೆ

    ಪತ್ನಿಗೆ ತಿಳಿಯದಂತೆ ಆರು ತಿಂಗಳ ಮಗು ಕಯ್ದೊಯ್ದು ಮಾರಾಟ ಮಾಡಿದ ಅಪ್ಪ!

    ಅಪ್ಪನ ಆಸ್ತಿಯಲ್ಲಿ ತನ್ನಿಚ್ಛೆಯಂತೆ ಭಾಗ ಮಾಡುವ ಅಧಿಕಾರ ಅಮ್ಮನಿಗೆ ಇದೆಯೆ?

    ಸ್ನೇಹಿತನ ಕೊಂದು ಶವದ ಜತೆ ಊರೆಲ್ಲಾ ಸುತ್ತಾಡಿದ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts