More

    ಪೇಷಂಟಾಗಿ ಹೋದ ನಾಲ್ಕು ಮಕ್ಕಳ ತಾಯಿ ವಿವಾಹಿತ ವೈದ್ಯನನ್ನು ಪ್ರೀತಿಸಿ ಹೆಣವಾದ್ಳು!

    ಲಖನೌ: ಉತ್ತರ ಪ್ರದೇಶದ ಗಾಜಿಯಾಬಾದ್ ನಿವಾಸಿಯಾದ ಮಹಿಳೆ ಆಸ್ತಮಾ ರೋಗಿ. ನಾಲ್ಕು ಮಕ್ಕಳ ತಾಯಿ. ಚಿಕಿತ್ಸೆಗೆಂದು ಡಾಕ್ಟರ್​ ಇಸ್ಮಾಯಿಲ್​ನ ಕ್ಲಿನಿಕ್​ಗೆ ಹೋಗುತ್ತಿದ್ದರು.

    ಅಲ್ಲಿ ಚಿಕಿತ್ಸೆ ಕೊಡುತ್ತಿದ್ದ ವಿವಾಹಿತ ಇಸ್ಮಾಯಿಲ್​ಗೂ, ಈ ನಾಲ್ಕು ಮಕ್ಕಳ ಮಹಿಳೆಗೂ ಪ್ರೀತಿ ಶುರುವಾಗಿದೆ. ಇಬ್ಬರೂ ಜತೆಯಾಗಿ ತಿರುಗಾಡುವುದು, ಒಟ್ಟಿಗೆ ಇರುವುದು ಎಲ್ಲವೂ ಆಗಿಹೋಗಿದೆ.

    ಅದೊಂದು ದಿನ ಮಹಿಳೆ ಇದ್ದಕ್ಕಿದ್ದಂತೆಯೇ ನಾಪತ್ತೆಯಾದಳು. ಇದು ನಡೆದದ್ದು ಕಳೆದ ಸೆಪ್ಟೆಂಬರ್​ 7ರಂದು. ತಮ್ಮ ಪತ್ನಿ ಕಾಣದಾಗ ಪತಿ ಗಾಜಿಯಾಬಾದ್ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು. ಆಕೆಯ ಫೋಟೋವನ್ನು ಅಕ್ಕಪಕ್ಕದ ಊರಿನ ಠಾಣೆಗಳಿಗೂ ರವಾನಿಸಿದ ಪೊಲೀಸರು ತನಿಖೆ ಕೈಗೊಂಡಿದ್ದರು.

    ಒಂದು ತಿಂಗಳಾದರೂ ಮಹಿಳೆಯ ಸುಳಿವು ಸಿಗಲಿಲ್ಲ. ಆದರೆ ಕಳೆದ ವಾರ ಅಂದರೆ ಅಕ್ಟೋಬರ್ 15ರಂದು ಹರಿಯಾಣದ ಕುರುಕ್ಷೇತ್ರದಲ್ಲಿ ಒಂದು ಅಪರಿಚಿತ ಶವ ಪತ್ತೆಯಾಗಿತ್ತು. ಈ ಶವದ ಮುಖ ಮತ್ತು ನಾಪತ್ತೆಯಾಗಿದ್ದ ಮಹಿಳೆಯ ಫೋಟೋ ಹೋಲಿಕೆಯಾಗುತ್ತದೆ ಎಂದು ಅಲ್ಲಿಯ ಪೊಲೀಸರು ಗಾಜಿಯಾಬಾದ್ ಪೊಲೀಸರಿಗೆ ಸಂದೇಶ ರವಾನಿಸಿದರು.

    ಇದನ್ನೂ ಓದಿ: ಥೂ ಕರೆಂಟ್​ ಇಲ್ಲ… ಏನ್​ ಮಾಡಿದ್ತಾರೆ ಎಲ್ಲಾ… ಅನ್ನೋ ಮುನ್ನ ಇದನ್ನೊಮ್ಮೆ ನೋಡಿ…

    ನಂತರ ಶವದ ಬಳಿ ಇರುವ ದಾಖಲೆಗಳು ಹಾಗೂ ಮಹಿಳೆಯ ಬಳಿ ಇದ್ದ ಫೋನ್​ ನೋಡಿದಾಗ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದುದು, ವೈದ್ಯನಿಗೆ ಕರೆ ಮಾಡಿರುವ ವಿಷಯ ತಿಳಿದಿದೆ.

    ಸೀದಾ ಪೊಲೀಸರು ಡಾ.ಇಸ್ಮಾಯಿಲ್​ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದರು. ತಮ್ಮದೇ ರೀತಿಯಲ್ಲಿ ವಿಚಾರಣೆ ಮಾಡಿದಾಗ ಇಸ್ಮಾಯಿಲ್​ ತಾನೇ ಕೊಲೆ ಮಾಡಿರುವುದಾಗಿ ಬಾಯಿಬಿಟ್ಟಿದ್ದಾನೆ.

    ಅಷ್ಟಕ್ಕೂ ಈ ಕೊಲೆಗೆ ಕಾರಣ ಎಂದರೆ, ತಾವಿಬ್ಬರೂ ಒಟ್ಟಿಗೇ ಇರಬೇಕು ಎಂದು ಆಕೆ ಪದೇ ಪದೇ ತನ್ನನ್ನು ಪೀಡಿಸುತ್ತಿದ್ದಳು. ಅವಳಿಗೂ ಮದುವೆಯಾಗಿದೆ, ನನಗೂ ಮದುವೆಯಾಗಿದೆ. ಆದ್ದರಿಂದ ನಾನು ಹೀಗೆ ಆಗುವುದಿಲ್ಲ ಎಂದೆ. ಆದರೆ ಅವಳು ಕೇಳುತ್ತಿರಲಿಲ್ಲ. ಇದೇ ವಿಷಯಕ್ಕೆ ತಮ್ಮಿಬ್ಬರಲ್ಲಿ ಜಗಳವಾಗಿ ಕೊಲೆ ಮಾಡಿದೆ ಎಂದು ಒಪ್ಪಿಕೊಂಡಿದ್ದಾನೆ.

    ಸೆಪ್ಟೆಂಬರ್ 7ರಂದು ಕಾರನ್ನು ಬಾಡಿಗೆ ಪಡೆದು ಚಂಡೀಗಢಕ್ಕೆ ಹೋಗುವಾಗ ಈ ರೀತಿ ಘಟನೆ ನಡೆದಿದೆ. ಆಕೆಗೆ ಆಸ್ತಮಾ ರೋಗವಿತ್ತು. ಜಗಳ ಮಾಡುವಾಗ ಆಕೆಗೆ ಉಸಿರಾಟದ ಸಮಸ್ಯೆ ಉಂಟಾಯಿತು. ಈ ವೇಳೆ ಟವಲ್ ನಿಂದ ಉಸಿರುಗಟ್ಟಿಸಿ ಕಾರಿನಲ್ಲೇ ಸಾಯಿಸಿದೆ, ನಂತರ ಶವವನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಹೋದೆ ಎಂದಿದ್ದಾನೆ.

    ಕೊಲೆ ಮಾಡಿದ ಬಳಿಕ ಯಾರಿಗೂ ಸಂದೇಹ ಬರಬಾರದು ಎಂದು ಕ್ಲಿನಿಕ್‌ ನಡೆಸುತ್ತಿದ್ದೆ ಎಂದೂ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.

    ಆರ್​ಆರ್​ನಗರ- ಮುನಿರತ್ನ ಸೇರಿ ನಾಲ್ವರ ನಾಮಪತ್ರ ವಾಪಸ್- ಎರಡೂ ಕ್ಷೇತ್ರಗಳಲ್ಲಿ ಉಳಿದವರೆಷ್ಟು?

    ನಟಿಯರನ್ನು ಬಿಡುಗಡೆ ಮಾಡದಿದ್ರೆ ಬಾಂಬ್​ ಬ್ಲಾಸ್ಟ್​: ಉಗ್ರ ಸಂಘಟನೆ ಹೆಸರಲ್ಲಿ ಪತ್ರ!

    ಬ್ರಿಟನ್​ ಪ್ರಧಾನಿಗೆ ಸಂಬಳ ಸಾಕಾಗುತ್ತಿಲ್ಲವಂತೆ! ಇನ್ಫಿ ಅಳಿಯನಿಗೆ ಒಲಿಯಲಿದೆಯೇ ಈ ಪಟ್ಟ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts