More

    ಐವರು ಸಹೋದರಿಯರ ಅಪೂರ್ವ ಸಾಧನೆ: ಆಡಳಿತ ಸೇವೆ ಪರೀಕ್ಷೆಯಲ್ಲಿ ಟಾಪರ್ಸ್​!

    ಜೈಪುರ: ಆಡಳಿತ ಸೇವೆಯ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಅಷ್ಟು ಸುಲಭದ ಮಾತಲ್ಲ. ಹಲವಾರು ಅಟೆಂಪ್ಟ್​ ಗಳನ್ನು ಮಾಡಿದರೂ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುವವರು ಅಪರೂಪ. ಅಂಥದ್ದಲ್ಲಿ ಮೂವರು ಸಹೋದರಿಯರು ಒಟ್ಟಿಗೆ ರಾಜಸ್ಥಾನ ಅಡ್ಮಿನಿಸ್ಟ್ರೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಮಾತ್ರವಲ್ಲದೇ ಇವರು ಟಾಪರ್ಸ್​ ಆಗಿದ್ದಾರೆ.

    ಹನುಮಾನ್‌ಗಢದ ಅನ್ಶು, ರೀತು ಹಾಗೂ ಸುಮನ್ ಈ ಮೂವರು ಸಹೋದರಿಯರು ಆರ್‌ಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಕುರಿತು ಐಎಫ್‌ಎಸ್ ಅಧಿಕಾರಿ ಪರ್ವೀನ್ ಲಾಸ್ವಾನ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಕುತೂಹಲದ ವಿಷಯ ಎಂದರೆ ಇವರ ಇನ್ನಿಬ್ಬರು ಸಹೋದರಿಯರು ಇದೇ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಉನ್ನತ ಉದ್ಯೋಗದಲ್ಲಿದ್ದಾರೆ. ಅವರ ಹೆಸರು ರೋಮಾ ಹಾಗೂ ಮಂಜು.

    ಈ ಮೂಲಕ ಒಂದೇ ಕುಟುಂಬದ ಐವರು ಸಹೋದರಿಯರು ಉನ್ನತ ಪರೀಕ್ಷೆಯಲ್ಲಿ ಒಂದೇ ಬಾರಿ ತೇರ್ಗಡೆಯಾಗಿರುವುದು ವಿಶೇಷ. ಇವರು ರೈತ ಸಹದೇವ್ ಸಹರನ್ ಅವರ ಪುತ್ರಿಯರು. ಮಂಗಳವಾರ ಆರ್‌ಪಿಎಸ್‌ಸಿ 2018ರ ಪರೀಕ್ಷೆಯ ಫಲಿತಾಂಶ ಬಂದಿದೆ. ಅದರಲ್ಲಿ ಮುಕ್ತಾ ರಾವ್ ಮೊದಲ ಸ್ಥಾನ ಪಡೆದರೆ, ಮನ್‌ಮೋಹನ್ ಶರ್ಮಾ, ಶಿವಕಾಶಿ ಕಂಡಾಲ್ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಾರೆ.

    VIDEO: ಬಾರ್​ ಒಳಗೆ ನುಗ್ಗಿ ಗಟಗಟ ಎಣ್ಣೆ ಇಳಿಸಿದ ಕಪಿರಾಯ- ಮುಂದೇನಾಯ್ತು ನೋಡಿ…

    ಆಸ್ಟ್ರೇಲಿಯಾದಲ್ಲಿ ಅಡುಗೆ ಮಾಡಿ 1.8 ಕೋಟಿ ರೂ. ಗೆದ್ದ ಭಾರತೀಯ ಯುವಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts