More

    ಸೈಕಲ್‌ ಮೇಲೆ ಬಂದ ಇಂಧನ ಸಚಿವ- ವಿದ್ಯುತ್‌ ಬಿಲ್‌ ಪಾವತಿಸಿದ ಗ್ರಾಹಕರು!

    ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಇಂಧನ ಸಚಿವ ಶ್ರೀಕಾಂತ್ ಶರ್ಮಾ ಅವರು ಸೈಕಲ್‌ ಮೇಲೆ ತೆರಳಿ ವಿದ್ಯುತ್‌ ಸಮಸ್ಯೆ ಆಲಿಸಿ ಗಮನ ಸೆಳೆದಿದ್ದಾರೆ.

    ಸ್ವಚ್ಛ ಪರಿಸರ ಅಭಿಯಾನವನ್ನು ಉತ್ತೇಜಿಸುವ ಸಲುವಾಗಿ ತಮ್ಮ ಕಚೇರಿಗೂ ಸೈಕಲ್‌ ಮೇಲೆಯೇ ಹೋದ ಸಚಿವರು, ಬಾಂಗ್ಲಾ ಬಜಾರ್ ಮತ್ತು ಆಶಿಯಾನಾ ಪ್ರದೇಶಗಳಲ್ಲಿನ ಉಪ ಕೇಂದ್ರಗಳ ತಪಾಸಣೆಯನ್ನು ಮಾಡಿದ್ದಾರೆ. ಮಾತ್ರವಲ್ಲದೇ ಗ್ರಾಹಕರನ್ನು ಭೇಟಿಯಾಗಿ ವಿದ್ಯುತ್ ವ್ಯವಸ್ಥೆಯಲ್ಲಿನ ಸುಧಾರಣೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

    ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಸಹಾಯವಾಣಿ 1912ಗೆ ಕರೆಮಾಡಿ ದೂರು ಸಲ್ಲಿಸಿ. ಬಾಕಿ ಇರುವ ವಿದ್ಯುತ್​ ಬಿಲ್ ಪಾವತಿಸಿ ಎಂದು ಸಚಿವ ಶರ್ಮಾ ಗ್ರಾಹಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

    ಇದನ್ನೂ ಓದಿ: ಯಾರೂ ಮಾಡದ ಸಾಹಸಕ್ಕೆ ಕೈಹಾಕಿದ ಮಂಸೋರೆ; ಚಿತ್ರಮಂದಿರಕ್ಕೆ ಬರಲು ಸಜ್ಜಾಯ್ತು ‘ಆ್ಯಕ್ಟ್ 1978’ ಸಿನಿಮಾ

    ಅನೇಕ ಮಂದಿ ಗ್ರಾಹಕರು ವಿದ್ಯುತ್‌ ಬಿಲ್‌ ಕಟ್ಟದೇ ಅದನ್ನು ಬಾಕಿ ಉಳಿಸಿಕೊಂಡಿದ್ದರು. ಖುದ್ದು ಸಚಿವರೇ ಬಂದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಅನೇಕ ಮಂದಿ ತಮ್ಮ ತಮ್ಮ ಬಿಲ್‌ಗಳನ್ನು ಸ್ಥಳದಲ್ಲೇ ಕಟ್ಟಿದರು. ಈ ವೇಳೆ ಗ್ರಾಹಕರಿಗೆ ಮೊಬೈಲ್ ವ್ಯಾನ್‌ನಿಂದ ತ್ವರಿತ ರಶೀದಿಯನ್ನು ನೀಡಲಾಯಿತು.

    ವಿದ್ಯುತ್‌ ಬಿಲಲ್‌ ತುಂಬದೇ ಹೋದರೆ ‘ಪವರ್ ಕಟ್ ಮಾಡುವುದು ಸುಲಭ. ಆದರೆ ಇದು ನಮ್ಮ ಆಯ್ಕೆಯಲ್ಲ. ಗ್ರಾಹಕರು ಬಾಕಿಯ ದೊಡ್ಡ ಮೊತ್ತವನ್ನು ಪ್ರಸ್ತುತ ಬಿಲ್​ನೊಂದಿಗೆ ನಾಲ್ಕು ಕಂತುಗಳಲ್ಲಿ ಜಮಾ ಮಾಡಲು ನಾವು ವ್ಯವಸ್ಥೆ ಮಾಡಿದ್ದೇವೆ. ಗ್ರಾಹಕರು ಸಮಯಕ್ಕೆ ಸರಿಯಾಗಿ ಬಿಲ್‌ಗಳನ್ನು ಸಲ್ಲಿಸಿದಲ್ಲಿ ವಿದ್ಯುತ್ ಇಲಾಖೆಯ ನಷ್ಟ ಕಡಿಮೆಯಾಗುತ್ತದೆ’ ಎಂದು ಸಚಿವರು ಹೇಳಿದರು.

    ಇಂಧನ ಇಲಾಖೆ ಮತ್ತು ಅದರ ವಿಜಿಲೆನ್ಸ್ ವಿಭಾಗವು ಪ್ರಾರಂಭಿಸಿರುವ ಜಂಟಿ ‘ನಾಕ್-ದಿ-ಡೋರ್ ಅಭಿಯಾನ’ದಿಂದಾಗಿ ಕಳೆದ ಒಂದು ತಿಂಗಳಲ್ಲಿ ಕಂದಾಯ ಇಲಾಖೆಗೆ 1,302 ಕೋಟಿ ರೂ. ಆದಾಯ ಬಂದಿದೆ.

    ಮದುವೆಯಾಗಲು ಹುಡುಗಿ ಸಿಗದೇ ಸುಸ್ತಾದವ ಮಾಡಿದ ಪ್ಲ್ಯಾನ್‌- ವಿದೇಶದಿಂದಲೂ ಡಿಮಾಂಡ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts