More

    ಮೋಟಾರ್ ಸೈಕಲ್‌ನಲ್ಲೇ ಶವ ಸಾಗಣೆ; ಮಧ್ಯಪ್ರದೇಶದಲ್ಲೊಂದು ಮನಮಿಡಿಯುವ ಘಟನೆ

    ವ್ಯಕ್ತಿಗಳು ಇಹಲೋಕ ತ್ಯಜಿಸಿದಾಗ ಅವರ ಅಂತ್ಯಸಂಸ್ಕಾರವನ್ನು ಗೌರವಪೂರ್ವಕವಾಗಿ ಕೈಗೊಳ್ಳುವುದು ಸಂಪ್ರದಾಯ. ಎಲ್ಲ ಧರ್ಮಗಳಲೂ ವಿವಿಧ ರೀತಿಯ ವಿಧಾರಣೆ ಮೂಲಕ ಅಂತಿಮ ಗೌರವ ಸಲ್ಲಿಸುವ ಆಚರಣೆ ಇದ್ದೇ ಇದೆ. ಆದರೆ, ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರ ಅಂತಿಮ ಯಾತ್ರೆ ನಡೆದಿರುವ ಘಟನೆ ಬೇಸರ ಮೂಡಿಸುವಂತಹುದು; ನಾಗರಿಕ ಸಮಾಜಕ್ಕೆ ಶೋಭೆ ತರುವ ಸಂಗತಿಯಲ್ಲ.

    ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ಶವ ವಾಹನ ಲಭ್ಯವಿಲ್ಲದ ಕಾರಣ ಕುಟುಂಬವೊಂದು ವ್ಯಕ್ತಿಯೊಬ್ಬರ ಶವವನ್ನು ಮೋಟಾರ್ ಸೈಕಲ್‌ನಲ್ಲಿ 15 ಕಿ.ಮೀ. ಸಾಗಿಸಿದೆ. ಭಾನುವಾರ ನಡೆದ ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

    ಈ ಘಟನೆಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಅಧಿಕಾರಿಯೊಬ್ಬರು, ರಾಜ್ಯ ಆರೋಗ್ಯ ಇಲಾಖೆಯು ಶವಗಳನ್ನು ಸಾಗಿಸಲು ಸರ್ಕಾರವು ವಾಹನಗಳನ್ನು ಒದಗಿಸುವುದಿಲ್ಲ ಎಂದು ಸ್ಪಷ್ಟನೆಯನ್ನು ಕೂಡ ನೀಡಿದ್ದಾರೆ.

    ಲಾಲುಯಿಯಾ ಬೈಗಾ ಎಂಬ 56 ವರ್ಷದ ವ್ಯಕ್ತಿಯೊಬ್ಬರು ಚಿಕಿತ್ಸೆ ಪಡೆಯುತ್ತಿದ್ದಾಗ ಶಹದೋಲ್‌ನ ಜಿಲ್ಲಾ ಆಸ್ಪತ್ರೆಯಲ್ಲಿ ಭಾನುವಾರ ಬೆಳಗ್ಗೆ ನಿಧನರಾದರು. ಇವರ ಶವವನ್ನು ಜಿಲ್ಲಾ ಕೇಂದ್ರದಿಂದ 15 ಕಿಮೀ ದೂರದಲ್ಲಿರುವ ಅವರ ಗ್ರಾಮ ಧುರ್ವಾರ್‌ಗೆ ಕೊಂಡೊಯ್ದ ರೀತಿ ಮಾತ್ರ ಆಘಾತಕಾರಿ. ಇಬ್ಬರು ಸವಾರರ ನಡುವೆ ಮೃತದೇಹವನ್ನು ಇಟ್ಟುಕೊಂಡು ಮೋಟಾರ್‌ಸೈಕಲ್‌ನಲ್ಲಿ ಸಾಗಿಸಲಾಗಿದೆ. ಈ ಕುರಿತ ವಿಡಿಯೋ ಜಾಲ ತಾಣದಲ್ಲಿ ಹರಿದಾಡುತ್ತಿದೆ, ಶವ ಸಾಗಿಸಲು ಆಸ್ಪತ್ರೆಯು ವಾಹನ ವ್ಯವಸ್ಥೆ ಮಾಡಲಿಲ್ಲ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

    ಗಂಭೀರ ಸ್ಥಿತಿಯಲ್ಲಿದ್ದ ಬೈಗಾ ಅವರನ್ನು ಆಸ್ಪತ್ರೆಗೆ ಕರೆತರಲಾಗಿದ್ದು, ಚಿಕಿತ್ಸೆ ವೇಳೆ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಸಿವಿಲ್ ಸರ್ಜನ್ ಜಿ ಎಸ್ ಪರಿಹಾರ್ ತಿಳಿಸಿದ್ದಾರೆ.

    ಮೃತ ರೋಗಿಗಳ ದೇಹಗಳನ್ನು ಸಾಗಿಸಲು ಆರೋಗ್ಯ ಇಲಾಖೆಯು ವಾಹನಗಳನ್ನು ಒದಗಿಸುವುದಿಲ್ಲ. ಸಾಮಾಜಿಕ ಕಾರ್ಯಕರ್ತರು ಶವ ವಾಹನಗಳಿಗೆ ವ್ಯವಸ್ಥೆ ಮಾಡುತ್ತಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಸನಾತನ ಧರ್ಮ ಉದಯನಿಧಿಯಿಂದ ನಿರ್ಮೂಲನೆಯಾಗುತ್ತದೆ ಎನ್ನುವುದು ತಮಾಷೆ; ಜಾರ್ಖಂಡ್​ ರಾಜ್ಯಪಾಲರ ವಾಗ್ದಾಳಿ

    73ರ ವೃದ್ಧಾಪ್ಯದಲ್ಲೂ ಮೂತ್ರಪಿಂಡ ಕಸಿ ಯಶಸ್ವಿ; 63ರ ವಯೋವೃದ್ಧೆ ಪತ್ನಿಯೇ ದಾನಿ!

    ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅನುಮತಿ ನೀಡಿದ ದೆಹಲಿ ಕೋರ್ಟ್; ದುಬೈಗೆ ಹಾರಲು ಡಿಕೆಶಿ ಸಜ್ಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts