More

    ಶೌಚಗೃಹದಲ್ಲಿ ಸಿಸಿಟಿವಿ ಇಟ್ಟು ಬ್ಲ್ಯಾಕ್​ಮೇಲ್​- ಸಂಬಳವಿಲ್ಲದೇ ಶಿಕ್ಷಕಿಯರ ದುಡಿತ!

    ಮೀರತ್ (ಉತ್ತರ ಪ್ರದೇಶ): ಶಾಲೆಯ ಆಡಳಿತ ಮಂಡಳಿಯು ಶೌಚಗೃಹದಲ್ಲಿ ಸಿಸಿಟಿವಿ ಇಟ್ಟು, ಆ ಫೋಟೋ ಹಾಗೂ ವಿಡಿಯೋಗಳನ್ನು ಶಿಕ್ಷಕಿಯರಿಗೆ ತೋರಿಸುವ ಮೂಲಕ ಬ್ಲ್ಯಾಕ್​ಮೇಲ್​ ಮಾಡುತ್ತಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದೆ.

    ಈ ಶಿಕ್ಷಕಿಯರು ಸಂಬಳ ಕೇಳಲು ಹೋದಾಗಲೆಲ್ಲಾ ವಿಡಿಯೋ, ಫೋಟೋ ತೋರಿಸಿ ಬ್ಲ್ಯಾಕ್​ಮೇಲ್​ ಮಾಡಲಾಗುತ್ತಿದ್ದು, ಅನೇಕ ತಿಂಗಳು ಸಂಬಳ ಇಲ್ಲದೇ ದುಡಿದಿರುವುದಾಗಿ ಶಿಕ್ಷಕಿಯರು ಆರೋಪಿಸಿದ್ದಾರೆ. ಈ ಕುರಿತು 52 ಮಂದಿ ಶಿಕ್ಷಕಿಯರು ಇದೀಗ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದು, ಸಹಾಯಕ್ಕೆ ಕೋರಿದ್ದಾರೆ.

    ತಮ್ಮ ಬಾಕಿ ಇರುವ ಸಂಬಳವನ್ನು ಪಾವತಿಸಲು ಕೇಳಿದಾಗಲೆಲ್ಲಾ ಶಾಲೆಯ ನಿರ್ವಹಣಾ ಸಮಿತಿಯ ಕಾರ್ಯದರ್ಶಿ ಈ ಫೋಟೋ ಮತ್ತು ವೀಡಿಯೊಗಳನ್ನು ತೋರಿಸಿ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದಾಗಿ ತಾವು ಅನೇಕ ತಿಂಗಳು ಸಂಬಳ ಇಲ್ಲದೇ ದುಡಿಯುವಂತಾಗಿದೆ. ಮಾನಕ್ಕೆ ಅಂಜಿ ಈ ಬಗ್ಗೆ ಎಲ್ಲಿಯೂ ಹೇಳಿರಲಿಲ್ಲ ಎಂದು ಶಿಕ್ಷಕಿಯರು ಪೊಲೀಸರಲ್ಲಿ ಹೇಳಿದ್ದಾರೆ.

    ದೂರಿನ ಆಧಾರದ ಮೇಲೆ ಪೊಲೀಸರು ಕಾರ್ಯದರ್ಶಿ ಮತ್ತು ಅವರ ಮಗನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 (ಉದ್ದೇಶಪೂರ್ವಕ ಅವಮಾನ), 354 (ಎ) (ಲೈಂಗಿಕ ಕಿರುಕುಳ) ಮತ್ತು 354 (ಸಿ) (ವಾಯ್ಯುರಿಸಮ್) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

    ಇದನ್ನೂ ಓದಿ: ಚಿಕ್ಕಮ್ಮನನ್ನು ಕೊಲ್ಲಲು 9 ವರ್ಷದ ಮಗನಿಗೆ ಟ್ರೇನಿಂಗ್​ ಕೊಟ್ಟ ಅಪ್ಪ- ಮುಂದೆ ಆದದ್ದೆಲ್ಲವೂ ಅನಾಹುತವೇ!

    ಆದರೆ ಶಾಲಾ ಕಾರ್ಯದರ್ಶಿ ಈ ಆರೋಪವನ್ನು ತಳ್ಳಿಹಾಕಿದ್ದಾರೆ. ‘ಮಹಿಳೆಯರ ಶೌಚಗೃಹದಲ್ಲಿ ಯಾವುದೇ ಸಿಸಿಟಿವಿ ಇಲ್ಲ. ಆದರೆ ಜೆಂಟ್ಸ್ ಶೌಚಗೃಹದಲ್ಲಿ ಅಳವಡಿಸಿರುವುದು ನಿಜ. ಕೆಲವು ಶಾಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಶೌಚಗೃಹದಲ್ಲಿಯೇ ಕೊಲೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪುರುಷರ ಶೌಚಗೃಹದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ’ ಎಂದಿದ್ದಾರೆ.

    ಕಳೆದ ಕೆಲವು ತಿಂಗಳುಗಳಿಂದ ಶಾಲೆಯು ಶಿಕ್ಷಕರಿಗೆ ಸಂಬಳ ನೀಡಲು ಕಷ್ಟವಾಗುತ್ತಿದೆ. ಕರೊನಾದಿಂದಾಗಿ ಈ ಸಮಸ್ಯೆ ಉಂಟಾಗಿರುವುದು ನಿಜ. ಆದರೆ ಶಿಕ್ಷಕಿಯರು ಹೇಳಿದಂತೆ ಬ್ಲ್ಯಾಕ್​ಮೇಲ್​ ಮಾಡಲಾಗುತ್ತಿದೆ ಎನ್ನುವುದು ಸುಳ್ಳು ಎಂದಿದ್ದಾರೆ ಕಾರ್ಯದರ್ಶಿ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.

    ಪಾಕಿಗಳಿಂದ ಅಪಹರಣಗೊಂಡು 73 ವರ್ಷದ ಬಳಿಕ ತವರನ್ನು ಕಂಡವಳ ಕಣ್ಣೀರ ಕಥೆಯಿದು…

    ಹಲ್ಲುಜ್ಜುವಾಗ ಪೇಸ್ಟ್​ ಅಲ್ಲ… ಟೂಥ್​ಬ್ರಷನ್ನೇ​ ನುಂಗಿದ! ಮುಂದೇನಾಯ್ತು ನೋಡಿ…

    ಡ್ರಗ್ಸ್​ ಕೇಸ್​: ಮಾಧ್ಯಮಗಳಿಗೆ ನಿರೂಪಕಿ ಅನುಶ್ರೀ ಮಾಡಿಕೊಂಡರೊಂದು ಮನವಿ…

    ರಫೇಲ್ ಯುದ್ಧ ವಿಮಾನಕ್ಕೆ ಮಹಿಳಾ ಸಾರಥ್ಯ: ಮೊದಲ ವನಿತೆಯಾಗಿ ಮಿಂಚಿದ ಶಿವಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts