More

    VIDEO: ಆಹಾರದ ಮೇಲೆ ಉಗುಳಿ ಜನರಿಗೆ ಅದನ್ನೇ ನೀಡ್ತಿದ್ದವರು ಅಂದರ್‌- ಸಿಸಿಟಿವಿಯಲ್ಲಿ ಸೆರೆಯಾಯ್ತು ಅಸಹ್ಯ ದೃಶ್ಯ

    ಲಖನೌ: ಕಳೆದ ವರ್ಷ ಕೆಲವು ರೆಸ್ಟೋರೆಂಟ್‌ ಮತ್ತು ಬೀದಿಬದಿಗಳಲ್ಲಿ ಆಹಾರದ ಮೇಲೆ ಉಗುಳಿ ಅದನ್ನೇ ಜನರಿಗೆ ನೀಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಸಿಸಿಟಿವಿಯಲ್ಲಿ ದಾಖಲಾಗಿರುವ ಈ ದೃಶ್ಯಗಳು ಎಲ್ಲೆಡೆ ಹರಿದಾಡುತ್ತಿದ್ದವು. ನಂತರ ಆಹಾರದ ಮೇಲೆ ಉಗುಳುವುದರ ವಿರುದ್ಧ ಕೇರಳ ಹೈಕೋರ್ಟ್‌ಗೆ ಅರ್ಜಿ ಕೂಡ ಸಲ್ಲಿಸಲಾಗಿತ್ತು.

    ಆ ಸುದ್ದಿ ಇನ್ನೂ ಚಾಲ್ತಿಯಲ್ಲಿ ಇರುವಾಗಲೇ ಬೀದಿ ವ್ಯಾಪಾರಿಯೊಬ್ಬ ಹಿಟ್ಟಿನ ಮೇಲೆ ಉಗುಳಿ ರೊಟ್ಟಿ ಮಾಡುತ್ತಿದ್ದ ವೀಡಿಯೋ ವೈರಲ್ ಆಗಿದ್ದು, ಸಿಕ್ಕಿಬಿದ್ದಿದ್ದಾನೆ. ಈ ಘಟನೆ ನಡೆದಿರುವುದು ಲಖನೌದ ಹೊರವಲಯದಲ್ಲಿರುವ ಕಾಕೋರಿಯಲ್ಲಿ. ಇಲ್ಲಿಯ ರಸ್ತೆಬದಿಯಲ್ಲಿ ಇರುವ ಉಪಾಹಾರ ಗೃಹದಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಇದರ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ, ದಾಬಾ ಮಾಲೀಕ ಯಾಕೂಬ್ ಮತ್ತು ಡ್ಯಾನಿಶ್, ಹಫೀಜ್, ಮುಖ್ತಾರ್, ಫಿರೋಜ್, ಅನ್ವರ್‌ರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗಳ ವಿರುದ್ಧ ರೋಗ ಹರಡಿಸುವ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕೋವಿಡ್ ಸಮಯದಲ್ಲಿ ಈ ರೀತಿಯ ಕೃತ್ಯ ಮಾಡಿದರುವುದು ದೊಡ್ಡ ಅಪರಾಧವಾಗಿದೆ. ಈ ರೀತಿ ರೊಟ್ಟಿ ಮಾಡುವುದರಿಂದ ಸೋಂಕು ಹೆಚ್ಚುತ್ತೆ. ಇವರ ನಿರ್ಲಕ್ಷ್ಯ ಸೋಂಕು ಹರಡಲು ದಾರಿಯಾಗುತ್ತೆ. ಇವರು ಸೋಂಕನ್ನು ಹರಡಲು ಮಾರಣಾಂತಿಕ ಕೃತ್ಯ ಎಸಗಿದ್ದಾರೆ ಎಂದು ಕಕೋರಿ ಸಹಾಯಕ ಪೊಲೀಸ್ ಕಮಿಷನರ್ ಅಶುತೋಷ್ ಕುಮಾರ್ ತಿಳಿಸಿದ್ದಾರೆ.

    ಇಲ್ಲಿದೆ ನೋಡಿ ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts