More

    ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ನಟ ಯಶ್‌- ಅಭಿಮಾನಿಗಳಿಂದಲೇ ಟ್ರೋಲ್‌, ಕಮೆಂಟ್‌ಗಳ ಮೂಲಕ ಆಕ್ರೋಶ

    ಬೆಂಗಳೂರು: ಹಲವರಿಗೆ ಅಭಿಮಾನ ಎನ್ನುವುದು ಎಷ್ಟರಮಟ್ಟಿಗೆ ಇರುತ್ತದೆ ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ. ಅದರಲ್ಲಿಯೂ ಚಿತ್ರತಾರೆಯರ ಮೇಲೆ ಕೆಲವರು ಇಡುವುದು ಅಭಿಮಾನಕ್ಕಿಂತ ಹೆಚ್ಚಾಗಿ ಅಂಧಾಭಿಮಾನವೇ ಆಗಿದೆ. ಕೆಲವೊಮ್ಮೆ ಅತಿರೇಕದ ಅಭಿಮಾನ ಮೆರೆದು ತಮ್ಮ ಜೀವಕ್ಕೂ ಹಾನಿಮಾಡಿಕೊಳ್ಳುತ್ತಿರುವ ಹಲವಾರು ಘಟನೆಗಳನ್ನು ನಾವು ಕಾಣುತ್ತಲೇ ಇದ್ದೇವೆ. ಅದೇ ಇನ್ನೊಂದೆಡೆ, ತಮ್ಮ ನೆಚ್ಚಿನ ನಟ,ನಟಿಯರ ಸ್ವಭಾವದಲ್ಲಿ ಸ್ವಲ್ಪವೇ ಬದಲಾದರೂ ಅದನ್ನು ಅಭಿಮಾನಿಗಳು ಸಹಿಸಲಾರರು.

    ಈಗ ಅಂಥದ್ದೇ ಒಂದು ಘಟನೆ ಚಿತ್ರನಟ ಯಶ್‌ ಅಭಿಮಾನಿಗಳಿಗೂ ಕಾಡಿದೆ. ತಮ್ಮ ನಟ, ಕೆಜಿಎಫ್‌ ಚಿತ್ರದ ಭರ್ಜರಿ ಯಶಸ್ಸಿನ ನಂತರ ಬದಲಾಗಿಬಿಟ್ಟರೇ ಎಂಬ ಆತಂಕ ಕಾಡುತ್ತಿದ್ದು, ಹಲವರಿಗೆ ಇದು ಅಸಮಾಧಾನವನ್ನೂ ತಂದಿದೆ.

    ಅಷ್ಟಕ್ಕೂ ಆಗಿದ್ದೇನೆಂದರೆ, ಜನ್ಮದಿನದ ಅಂಗವಾಗಿ ಯಶ್​ ಇಂಗ್ಲಿಷ್​ನಲ್ಲಿ ಟ್ವೀಟ್​ ಮಾಡಿದ್ದಾರೆ ಅಷ್ಟೇ. ಇದನ್ನು ಅವರ ಅಪಾರ ಸಂಖ್ಯೆಯ ಕನ್ನಡದ ಅಭಿಮಾನಿಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ‘ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಇರಲಿ, ರಾಜ್​, ವಿಷ್ಣು, ಅಂಬಿ ಅಂತಹ ದಿಗ್ಗಜರ ಹುಟ್ಟುಹಬ್ಬ ಇರಲಿ. ಮರೆಯದೇ ಶುಭಕೋರುತ್ತಿದ್ದ ಹುಡುಗ, ಕನ್ನಡದಲ್ಲೇ ಪೋಸ್ಟ್​ ಹಾಕುತ್ತಿದ್ದ ಹುಡುಗ ಈಗ ಕೆಜಿಎಫ್‌ ಯಶಸ್ಸಿನ ನಂತರ ಇಂಗ್ಲಿಷ್‌ನಲ್ಲಿ ಟ್ವೀಟ್‌ ಮಾಡಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

    ಇದಿಷ್ಟಕ್ಕೇ ಅಭಿಮಾನಿಗಳ ಆಕ್ರೋಶ ತಣ್ಣಗಾಗಿಲ್ಲ. ಈ ಟ್ವೀಟ್‌ ಅನ್ನೇ ಮುಂದುಮಾಡಿಟ್ಟುಕೊಂಡು ಯಶ್‌ ಅವರು ಇತ್ತೀಚೆಗೆ ಕೆಲವೊಂದು ತಪ್ಪುಗಳನ್ನು ಮಾಡಿರುವುದಾಗಿ ಆರೋಪಿಸಿದ್ದು, ಅವುಗಳ ಪಟ್ಟಿಯನ್ನೂ ಟ್ರೋಲ್‌ ಮಾಡಿದ್ದಾರೆ. ‘ಬೆಳೆಯುವಾಗ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಇರಲಿ, ರಾಜ್​, ವಿಷ್ಣು, ಅಂಬಿ ಅಂತಹ ದಿಗ್ಗಜರ ಹುಟ್ಟುಹಬ್ಬ ಇರಲಿ. ಮರೆಯದೇ ಶುಭಕೋರುತ್ತಿದ್ದ ಹುಡುಗ. ಕನ್ನಡದಲ್ಲೇ ಪೋಸ್ಟ್​ ಹಾಕುತ್ತಿದ್ದ ಹುಡುಗ. ಇತರ ನಟರಿಗೆ ಸಾಕಷ್ಟು ಗೌರವ ಕೊಡುತ್ತಿದ್ದ ಹುಡುಗ. ‘ಕೆಜಿಎಫ್​’ ನಂತರ ಕನ್ನಡ ರಾಜ್ಯೋತ್ಸವ, ರಾಜ್​, ವಿಷ್ಣು ಅಂಬಿ ಹುಟ್ಟುಹಬ್ಬ ಮರೆತ ಹಾಗೂ ಯಾವುದೇ ಕನ್ನಡ ಪರ ಧ್ವನಿ ಎತ್ತದ ಹುಡುಗ. ‘ಕೆಜಿಎಫ್​’ ನಂತರ ಇತರ ನಟರಿಗೆ ಮೊದಲಿನಂತೆ ಗೌರವ ಕೊಡದ ಹುಡುಗ. ಪೋಸ್ಟ್​ಗಳಲ್ಲಿ ಕನ್ನಡವೂ ಮಾಯ’ ಎಂದು ಟ್ರೋಲ್‌ ಮಾಡಿದ್ದಾರೆ. ಹಿರಿಯ ನಟರ ಹುಟ್ಟುಹಬ್ಬಕ್ಕೆ ಯಶ್ ಶುಭ ಕೋರಿಲ್ಲ ಎನ್ನುವುದು ಕೆಲವರ ಆಕ್ರೋಶ.

    ಕೆಜಿಎಫ್‌ ಕರ್ನಾಟಕದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಸಾಕಷ್ಟು ಜನಪ್ರಿಯವಾದ ಹಿನ್ನೆಲೆಯಲ್ಲಿ ಈ ಜನಪ್ರಿಯತೆ ತಲೆಗೇರಿದ್ದು, ಅದರಿಂದಲೇ ಯಶ್‌ ಬದಲಾಗಿದ್ದಾರೆ. ಕನ್ನಡದಲ್ಲಿ ಟ್ವೀಟ್‌ ಮಾಡುವ ಬದಲು ಇಂಗ್ಲಿಷ್‌ ಮೊರೆ ಹೋಗಿದ್ದಾರೆ ಎಂದು ಅನೇಕ ಮಂದಿ ಟ್ರೋಲ್‌ ಮಾಡುತ್ತಿದ್ದಾರೆ.

    ಆದರೆ ಇದಕ್ಕೆ ನಟ ಯಶ್‌ ತಲೆ ಕೆಡಿಸಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ಮತ್ತೊಂದಿಷ್ಟು ಅಭಿಮಾನಿಗಳಿಗೆ ಈ ಟ್ರೋಲ್‌ ಕೆರಳಿಸಿದೆ. ಇದಕ್ಕೆ ತಾವು ಕಮೆಂಟ್‌ಗಳ ಮೂಲಕ ಉತ್ತರ ನೀಡಿದ್ದಾರೆ.
    ’ಯಶ್‌ ಅವರಿಗೆ ಈಗ ಕನ್ನಡಿಗರು ಮಾತ್ರ ಅಭಿಮಾನಿಗಳಲ್ಲ, ಬದಲಿಗೆ ಬೇರೆ ಬೇರೆ ರಾಜ್ಯಗಳ, ಬೇರೆ ಬೇರೆ ದೇಶಗಳ ಅಭಿಮಾನಿಗಳೂ ಇದ್ದಾರೆ. ಆದ್ದರಿಂದ ಎಲ್ಲರಿಗೂ ಅರ್ಥವಾಗಲಿ ಎನ್ನುವ ಕಾರಣಕ್ಕೆ ಇಂಗ್ಲಿಷ್‌ನಿಂದ ಟ್ವೀಟ್‌ ಮಾಡಿದ್ದಾರೆ. ಅದನ್ನೇ ತಪ್ಪು ಎಂದು ಹೇಳುವ ಮೂಲಕ ಟ್ರೋಲ್‌ ಮಾಡುವುದು ಸರಿಯಲ್ಲ’ ಎಂದು ಹೇಳಿಕೊಂಡಿದ್ದಾರೆ. ಇನ್ನು ಕೆಲವರು, ‘ಹೀಗೆ ಟ್ರೋಲ್‌ ಮಾಡುತ್ತಿರುವವರು ಮರೆತಂತಿದೆ. ಯಶ್​ ಅವರೇ ಅಲ್ವಾ ಇಡೀ ದೇಶವು ನಮ್ಮ ಇಂಡಸ್ಟ್ರಿ ಕಡೆ ತಿರುಗಿ ನೋಡೋ ಹಾಗೆ ಮಾಡಿದ್ದು?’ ಎಂದು ಹೇಳಿದ್ದಾರೆ.

    ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಯಶ್‌ ಈ ರೀತಿಯಾಗಿ ಸುದ್ದಿಯಲ್ಲಿದ್ದಾರೆ.

    ಉಸ್ಸಪ್ಪಾ ಈ ಪಾದಯಾತ್ರೆ ನನ್ನಿಂದ ಆಗಲ್ಲಪ್ಪಾ…. ಜೋಶ್‌ನಲ್ಲಿ ಹೋದ ಸಿದ್ದು ಸುಸ್ತಾಗಿ ವಾಪಸ್‌!

    ‘ಅವ್ನು ಎಲ್ಲೆಲ್ಲೋ ಕಿಸ್‌ ಕೊಟ್ಟಿರೋ ದೃಶ್ಯ ಪ್ರಸಾರ ಮಾಡ್ಬೇಡಿ ಪ್ಲೀಸ್‌’ ಎಂದು ಹಣಕ್ಕಾಗಿ ಎಲ್ಲಾ ಅರ್ಪಿಸಿಕೊಂಡ ನಟಿಯ ಮನವಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts