More

    ಟೂಲ್‌ಕಿಟ್‌ ಷಡ್ಯಂತ್ರ ಬಯಲಾಗುತ್ತಿದ್ದಂತೆಯೇ ಕೋರ್ಟ್‌ಗೆ ದಿಶಾ ದೌಡು: ದಾಖಲೆ ಬಹಿರಂಗ ಬೇಡ ಎಂದು ಕೋರಿಕೆ!

    ನವದೆಹಲಿ: ಭಾರತದ ಕೆಲವು ವ್ಯಕ್ತಿಗಳಿಂದ ಹಿಡಿದು ಪಾಕಿಸ್ತಾನದ ತಲೆಕೆಡಿಸಿರುವ ಟೂಲ್‌ಕಿಟ್‌ ವಿವಾದ ಇದೀಗ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಲೇ ಸಾಗಿದೆ. ಭಾರತದ ವಿರುದ್ಧ ಮಹಾ ಷಡ್ಯಂತ್ರ ರಚಿಸಿರುವ ಈ ಟೂಲ್‌ಕಿಟ್‌ ಹಗರಣದಲ್ಲಿ ಸಿಲುಕಿ ಒದ್ದಾಡುತ್ತಿರುವ ಪರಿಸರ ಕಾರ್ಯಕರ್ತೆ ದಿಶಾ ರವಿ ಇದೀಗ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

    ಇತ್ತ ಕಾಂಗ್ರೆಸ್‌ನ ನಾಯಕರು, ಕೆಲವು ಪರಿಸರವಾದಿಗಳು, ಮಹಿಳಾ ಸಂಘಟನೆಗಳು, ಕೆಲವು ನಟ-ನಟಿಯರು, ಕೆಲವು ರೈತ ನಾಯಕರು ದಿಶಾ ಮುಗ್ಧೆ ಎಂದು ಆಕೆಯ ಪರವಾಗಿ ಹೋರಾಟ ನಡೆಸುತ್ತಿದ್ದರೆ, ಅತ್ತ ಹಲವು ಮಾಧ್ಯಮಗಳು ಈ ಷಡ್ಯಂತ್ರವನ್ನು ಬಯಲು ಮಾಡುತ್ತಿವೆ.

    ಟೂಲ್‌ಕಿಟ್‌ಗೆ ಸಂಬಂಧಿಸಿದಂತೆ ಇರುವ ದಾಖಲೆಗಳ ಕುರಿತು ಮಾಧ್ಯಮಗಳಲ್ಲಿ ಯಾವಾಗ ಪ್ರಕಟಗೊಳ್ಳಲು ಶುರುವಾದವೋ ಇದೀಗ ಜೈಲು ಪಾಲಾಗಿರುವ ದಿಶಾ ರವಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಯಾವುದೇ ತನಿಖಾ ದಾಖಲೆಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡದಂತೆ ಪೊಲೀಸರಿಗೆ ಆದೇಶ ನೀಡಬೇಕೆಂದು ಕೋರ್ಟ್‌ ಅನ್ನು ದಿಶಾ ಕೋರಿದ್ದಾಳೆ.

    ಅಷ್ಟೇ ಅಲ್ಲದೇ, ಭಾರತದ ವಿರುದ್ಧ ಷಡ್ಯಂತ್ರ ರಚಿಸಿರುವ ಈ ಟೂಲ್‌ಕಿಟ್‌ಗೆ ಸಂಬಂಧಿಸಿದಂತೆ ಮೂರನೆಯ ವ್ಯಕ್ತಿಯ ಜತೆ ದಿಶಾ ರವಿ ನಡೆಸಿರುವ ವಾಟ್ಸ್‌ಆ್ಯಪ್‌ ಸಂದೇಶ ಇದೀಗ ಬಯಲಾಗುತ್ತಿದ್ದಂತೆಯೇ, ಇದನ್ನು ಮಾಧ್ಯಮಗಳಿಗೆ ನೀಡದಂತೆ ಪೊಲೀಸರಿಗೆ ಆದೇಶಿಸಬೇಕು ಎಂದು ಆಕೆ ಕೋರಿಕೊಂಡಿದ್ದಾಳೆ.

    ದಿಶಾ ರವಿ ಪರ ವರೀಲ ಅಭಿನವ್ ಸೆಕ್ರಿ, ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಟೂಲ್ ಕಿಟ್ ಗೂಗಲ್ ದಾಖಲೆಗಳ ಬಗ್ಗೆ ತನಿಖೆ ನಡೆಸುತ್ತಿರುವ ದೆಹಲಿ ಹೈಕೋರ್ಟ್ ದಿಶಾ ರವಿಯನ್ನು ಬಂಧಿಸಿದ್ದು ಈ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತ ನಿಕಿತಾ ಜಾಕೊಬ್ ಮತ್ತು ಶಂಕನು ಮುಲುಕ‌ಗೆ ನಿರೀಕ್ಷಣಾ ಜಾಮೀನು ನೀಡಿದೆ.

    ರೈತರ ಹೆಸರಿನಲ್ಲಿ ನಡೆಸುತ್ತಿರುವ ಪ್ರತಿಭಟನೆಯ ವೇಳೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮಸಿಬಳಿಯುವುದು ಹೇಗೆ ಎಂಬ ಬಗ್ಗೆ ಟೂಲ್‌ಕಿಟ್‌ ವಿವರಣೆ ನೀಡಿತ್ತು. ಇದರ ಬಗ್ಗೆ ಮತ್ತೋರ್ವ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್‌ ಟ್ವೀಟ್‌ ಮಾಡಿ ಸಿಕ್ಕಿಬಿದ್ದಿದ್ದಳು. ಆಮೇಲೆ ಆಕೆ ಟ್ವೀಟ್‌ ಡಿಲೀಟ್‌ ಮಾಡಿದರೂ, ಈ ಮಹಾ ಷಡ್ಯಂತ್ರ ಬಯಲಾಗಿದ್ದು, ಇದು ಕೆಲವರನ್ನು ಸುತ್ತಿಕೊಳ್ಳುತ್ತಿದೆ.

    ಭಾರತದ ವಿರುದ್ಧ ಮಹಾಸಂಚು ಆರೋಪ: ದಿಶಾ ಮುಗ್ಧೆ ಎಂದ ರಮ್ಯಾ, ಬಿಡುಗಡೆ ಮಾಡದಿದ್ರೆ ಹೋರಾಟ ಎಂದ ರೈತ ಮುಖಂಡ

    ದಿಶಾ ರವಿ ಹಿಂದೂನಾ ಕ್ರಿಶ್ಚಿಯನ್ನಾ? ಆಕೆಯ ಸ್ನೇಹಿತರು ಹೇಳಿದ್ದೇನು?

    ಭಾರತಕ್ಕೆ ಮಸಿಬಳಿಯಲು ಗುಟ್ಟಾಗಿ ತಯಾರಿಸಿದ್ದ ‘ಟೂಲ್‌ಕಿಟ್‌’ ವಿವಾದ: ಗ್ರೇಟಾಳಿಂದ ಸಿಕ್ಕಿಬಿದ್ದ ದಿಶಾ ಅರೆಸ್ಟ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts