More

    ಅತ್ಯಾಚಾರಿ, ಕೊಲೆಗಾರ, ‘ದೇವಮಾನವ’ ಪಂಜಾಬ್‌ ಚುನಾವಣೆ ಮುಗಿಯುವವರೆಗೆ ಜೈಲಿನಿಂದ ಬಿಡುಗಡೆ! ಏನಿದರ ಗುಟ್ಟು?

    ಹರಿಯಾಣ: ಬಹು ಕುತೂಹಲದ ಬೆಳವಣಿಗೆಯೊಂದರಲ್ಲಿ ಸ್ವಯಂಘೋಷಿತ ದೇವಮಾನವ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್ ರಾಮ್​ ರಹೀಮ್​ ಸಿಂಗ್​​ ಹರಿಯಾಣದ ರೋಹ್ಟಕ್​ ಜೈಲಿನಿಂದ ಪರೋಲ್‌ ಮೇಲೆ ಬಿಡುಗಡೆಹೊಂದಿದ್ದಾನೆ! ಪಂಜಾಬ್‌ ಚುನಾವಣೆ ಮುಗಿಯುವವರೆಗೂ ಈತ ಜೈಲಿನಿಂದ ಹೊರಕ್ಕೆ ಇರಲಿದ್ದಾನೆ.

    ಕೊಲೆ ಮತ್ತು ಅತ್ಯಾಚಾರ ಕೇಸ್‌ನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ರಾಮ್‌ ರಹೀಮ್‌ನನ್ನು ಈ ಸಂದರ್ಭದಲ್ಲಿ ಜೈಲಿನಿಂದ ಹೊರಕ್ಕೆ ಬಿಟ್ಟಿರುವ ಹಿಂದೆ ರಾಜಕೀಯ ಲೆಕ್ಕಾಚಾರ ಇದೆ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ.

    ಇದಕ್ಕೆ ಕಾರಣ, ರಾಮ್ ರಹೀಮ್​ ಪಂಜಾಬ್​ನ ಮಾಲ್ವಾ ಪ್ರದೇಶದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವುದು. ಮಾಲ್ವಾ ಪ್ರದೇಶವು 69 ಕ್ಷೇತ್ರಗಳನ್ನು ಹೊಂದಿದ್ದು, ಪಂಜಾಬ್ ಅಸೆಂಬ್ಲಿಯ ಅರ್ಧದಷ್ಟು ಅಂದರೆ 117 ಸ್ಥಾನಗಳನ್ನು ಹೊಂದಿದೆ. ಇಲ್ಲಿ ಈತನ ಅನುಯಾಯಿಗಳು ಸಾಕಷ್ಟು ಮಂದಿ ಇದ್ದಾರೆ. ಈತನ ಅನುಯಾಯಿಗಳ ಮತಗಳು ಸಂಸದೀಯ ಮತ್ತು ಶಾಸಕಾಂಗ ಚುನಾವಣೆಗಳನ್ನು ನಿರ್ಧರಿಸುವಲ್ಲಿ ಅವರ ಮತಗಳು ಪ್ರಮುಖವಾಗಿವೆ ಎಂದೇ ವಿಶ್ಲೇಷಿಸಲಾಗುತ್ತಿದೆ.

    ಇದೇ 20ರಿಂದ ಮಾರ್ಚ್‌ 10ರವರೆಗೆ ಪಂಜಾಬ್‌ನಲ್ಲಿ ವಿವಿಧ ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಈ ಅವಧಿಯಲ್ಲಿ ಅಂದರೆ ಗುರ್ಮೀತ್ ರಾಮ್​ ರಹೀಮ್​ ಸಿಂಗ್​​ನನ್ನು 21 ದಿನಗಳವರೆಗೆ ಜೈಲಿನಿಂದ ಹೊರಕ್ಕೆ ಇರಲು ಅವಕಾಶ ಕಲ್ಪಿಸಲಾಗಿದೆ.

    ಈ ಬಗ್ಗೆ ಭಾರಿ ಚರ್ಚೆಯಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿರುವ ಹರಿಯಾಣ ಮುಖ್ಯಮಂತ್ರಿ ಎಂಎಲ್​ ಖಟ್ಟರ್​​ ಹಾಗೂ ಸಚಿವ ರಂಜಿತ್ ಸಿಂಗ್​ ಚೌಟಾಲಾ, ಇದು ಕಾಕತಾಳೀಯವಷ್ಟೇ. ಚುನಾವಣೆಗೂ, ರಾಮ್ ರಹೀಮ್‌ ಅವರನ್ನು ಬಿಡುಗಡೆ ಮಾಡಿರುವುದಕ್ಕೂ ಸಂಬಂಧವಿಲ್ಲ.​​ ಅವರಿಗೆ ಶಿಷ್ಟಾಚಾರದ ಪ್ರಕಾರ ರಜೆ ನೀಡಲಾಗಿದೆ ಎಂದಿದ್ದಾರೆ.

    ಅಂದಹಾಗೆ ಇದಾಗಲೇ ಈತನನ್ನು ಈ ಹಿಂದೆ ಮೂರು ಬಾರಿ ತುರ್ತು ಪರಿಸ್ಥಿತಿ ಮೇಲೆ ಪರೋಲ್‌ ನೀಡಲಾಗಿತ್ತು. ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಾಯಿಯನ್ನು ಭೇಟಿ ಮಾಡಲು ಮತ್ತು ವೈದ್ಯಕೀಯ ತಪಾಸಣೆಗಳನ್ನು ಪಡೆಯಲು ಪರೋಲ್‌ ನೀಡಲಾಗಿತ್ತು. ಆದರೆ ಆಗ ಸ್ವಲ್ಪ ಅವಧಿಗೆ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಆದರೆ ಇದೀಗ 21 ದಿನಗಳ ಸುದೀರ್ಘ ಅವಧಿಗೆ ಬಿಡುಗಡೆ ಮಾಡಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

    ಪಂಜಾಬ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಸರ್ದುಲ್‌ಗಢ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಪಟಿಯಾಲ ಗ್ರಾಮಾಂತರದ ಪಂಜಾಬ್ ಲೋಕಸಭೆಯ ಅಭ್ಯರ್ಥಿ ಕೂಡ ಡೇರಾ ಸೌಧಕ್ಕೆ ಭೇಟಿ ನೀಡುತ್ತಿದ್ದಾರೆ.

    ಡೇರಾ ಮುಖ್ಯಸ್ಥರು ಶಿಬಿರದೊಳಗೆ ಮಹಿಳಾ ಶಿಷ್ಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಕ್ಕೆ ಹಾಗೂ ಈ ಬಗ್ಗೆ ಮಾಹಿತಿ ನೀಡಿದ್ದ ಡೇರಾದ ಮ್ಯಾನೇಜರ್​ ರಂಜಿತ್ ಸಿಂಗ್ ಅವರ ಹತ್ಯೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಈತನಿಗೆ ಜೀವಾವಧಿ ಶಿಕ್ಷೆಯಾಗಿದೆ. ಇಷ್ಟೇ ಅಲ್ಲದೇ ಈತನ ಬಗ್ಗೆ ಬರೆದಿದ್ದ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಕೊಲೆ ಕೂಡ ಈತ ಮಾಡಿದ್ದುದು ಸಾಬೀತಾಗಿದೆ. 2021ರ ಅಕ್ಟೋಬರ್​ನಲ್ಲಿ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts