More

    ಕರೊನಾ ಶ್ವಾಸಕೋಶಕ್ಕಷ್ಟೇ ಸೀಮಿತವಾಗಿಲ್ಲ: ವೈರಸ್‌ ಭಯಾನಕತೆ ಬಿಚ್ಚಿಟ್ಟಿದ್ದಾರೆ ಏಮ್ಸ್‌ ತಜ್ಞರು

    ನವದೆಹಲಿ: ಕ್ಷಣಕ್ಷಣಕ್ಕೂ ಆತಂಕ ಸೃಷ್ಟಿಸುತ್ತಿರುವ ಕರೊನಾ ವೈರಸ್‌ನ ಕುರಿತಾಗಿ ಅಗೆದಷ್ಟೂ, ಬಗೆದಷ್ಟೂ ಮಾಹಿತಿಗಳು ಹೊರಬರುತ್ತಲೇ ಇವೆ. ನಿಮಿಷ ನಿಮಿಷಕ್ಕೂ ತನ್ನ ಹೊಸ ಸ್ವರೂಪವನ್ನು ಇದು ತೋರಿಸುತ್ತಿದ್ದು, ಈ ವೈರಸ್‌ ಕುರಿತಂತೆ ಹಲವಾರು ಅಧ್ಯಯನಗಳು ನಡೆಯುತ್ತಿವೆ.

    ಈ ನಡುವೆಯೇ, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌), ಇದರ ಕುರಿತು ಅಧ್ಯಯನ ಕೈಗೊಂಡಿದ್ದು, ಒಂದಿಷ್ಟು ಅಂಶಗಳು ಹೊರಬಂದಿವೆ.

    ನೀತಿ ಆಯೋಗದ ಸಹಯೋಗದಲ್ಲಿ ಮೂಡಿಬರುತ್ತಿರುವ ನ್ಯಾಷನಲ್ ಕ್ಲಿನಿಕಲ್ ಗ್ರಾಂಡ್ ರೌಂಡ್ಸ್ ನಲ್ಲಿ ಏಮ್ಸ್ ನ ನಿರ್ದೇಶಕ ಡಾ.ರಣ್ದೀಪ್ ಗುಲೇರಿಯಾ, ನ್ಯೂರಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಎಂವಿ ಪದ್ಮ ಶ್ರೀವಾಸ್ತವ, ಹೃದಯ ಸಂಬಂಧಿ ಪ್ರೊಫೆಸರ್ ಡಾ. ಅಂಬುಜ್ ರಾಯ್, ಡಿಪಾರ್ಟ್‌ಮೆಂಟ್‌ ಆಫ್ ಮೆಡಿಸಿನ್‌ನ ಸಹಾಯಕ ಉಪನ್ಯಾಸಕ ಡಾ.ನೀರಜ್ ನಿಶ್ಚಲ್ ಕೋವಿಡ್-19 ನಿಂದ ಉಂಟಾಗುತ್ತಿರುವ ಶ್ವಾಸಕೋಶದ ಜತೆಗಿನ ಬೇರೆ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.

    ಇವರ ಪ್ರಕಾರ, ಕರೊನಾ ವೈರಸ್‌ ಬಹುತೇಕ ಎಲ್ಲಾ ಅಂಗಾಂಗಗಳಿಗೂ ಸಹ ಮಾರಕವಾಗಿದೆ ಹಾಗೂ ಕೆಲವೊಂದು ಪ್ರಕರಣಗಳಲ್ಲಿ ರೋಗ ಲಕ್ಷಣಗಳಿಗೂ ಶ್ವಾಸಕೋಶಕ್ಕೂ ಸಂಬಂಧವೇ ಇರುವುದಿಲ್ಲ.

    ಇದನ್ನೂ ಓದಿ: ಟಿಕ್‌ಟಾಕ್‌ ಆ್ಯಪ್‌ ನಿಷೇಧದ ಬೆದರಿಕೆ ಬೆನ್ನಲ್ಲೇ ಸಿಇಒ ರಾಜೀನಾಮೆ

    ಸಂಶೋಧಕರು ಹೇಳಿರುವ ಪ್ರಕಾರ, ಪ್ರಾರಂಭದಲ್ಲಿ ಕರೊನಾವನ್ನು ವೈರಲ್ ನ್ಯುಮೋನಿಯಾ ಎಂದು ಪರಿಗಣಿಸಲಾಗಿತ್ತು. ಆದರೆ ಬರುಬರುತ್ತಾ, ಇದರ ಸ್ವರೂಪ ವಿಸ್ತಾರಗೊಳ್ಳುತ್ತಿದೆ. ಇದೀಗ ದೇಹದಲ್ಲಿರುವ ಸರ್ವ ಅಂಗಾಂಗಗಳಿಗೂ ಮಾರಣಾಂತಿಕ ಅಪಾಯಗಳನ್ನು ತಂದೊಡ್ಡುವ ಸಾಮರ್ಥ್ಯ ಹೊಂದಿದೆ. ಅದು ಶ್ವಾಸಕೋಶವನ್ನೂ ಮೀರಿ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

    ಎಸಿಎ2 ರಿಸೆಪ್ಟರ್ಸ್ ಮೂಲಕ ಜೀವಕೋಶಗಳಿಗೆ ಈ ವೈರಸ್‌ ಪ್ರವೇಶ ಪಡೆದುಕೊಳ್ಳುತ್ತವೆ, ಈ ರೀತಿ ಶ್ವಾಸಕೋಶ ಮಾತ್ರವಲ್ಲದೇ ಬೇರೆ ಅಂಗಾಂಗಗಳಿಗೂ ಸೇರ್ಪಡೆಯಾಗುತ್ತವೆ. ಇದರಿಂದಾಗಿ ಸೋಂಕು ಪೀಡಿತರು ರೋಗ ಲಕ್ಷಣ ರಹಿತರಾಗಿದ್ದರೂ ಪಾರ್ಶ್ವವಾಯು ಹಾಗೂ ಹೃದಯ ನಾಳಗಳಲ್ಲಿ ಬ್ಲಾಕ್ ಉಂಟಾಗಿ ಮಾರಣಾಂತಿಕ ಅಪಾಯಗಳನ್ನು ಎದುರಿಸಬಹುದು ಎಂದಿದ್ದಾರೆ.

    ಕಡಿಮೆ, ಸಾಧಾರಣ ಮತ್ತು ತೀವ್ರ ಎಂದು ಕರೊನಾ ಪ್ರಕರಣಗಳನ್ನು ವಿಭಾಗಿಸಲಾಗಿದ್ದು, ಇದು ಕೇವಲ ಶ್ವಾಸಕೋಶಕ್ಕೆ ಸಂಬಂಧಿಸಿದ ಲಕ್ಷಣಗಳಿಂದ ಮಾಡಲಾಗಿದೆ. ಆದರೆ ಬೇರೆ ಅಂಗಾಂಗಗಳ ಮೇಲಿನ ಪರಿಣಾಮವನ್ನು ಮರುಪರಿಶೀಲಿಸಬೇಕಿದೆ ಎಂದಿದ್ದಾರೆ ತಜ್ಞರು.

    ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಪತ್ನಿ ಡೆಲಿವರಿ: ಶ್ಲಾಘನೆಗಳ ಮಹಾಪೂರ

    ಎಟಿಎಂ ಹಣ ಎಗರಿಸಿದ ಖದೀಮರು: ನಡೆದಾಡೋ ಸ್ಟೈಲ್‌ನಲ್ಲಿ ಸಿಕ್ಕಿಬಿದ್ದದ್ದೇ ರೋಚಕ…

    ಹೋಟೆಲ್‌ನಲ್ಲಿ ರಾತ್ರಿ ಕಳೆದ ಪ್ರೇಮಿಗಳು ಮಾರನೆಯ ದಿನ ಶವವಾದರು!

    ಅತ್ಯಂತ ಕ್ರೂರವಾಗಿ ಲಾಕಪ್‌ ಡೆತ್‌ ಮಾಡಿದ್ದ ಆರೋಪಿ ಪೊಲೀಸ್‌ ಕರೊನಾಕ್ಕೆ ಬಲಿ

    ಭಾರತದಲ್ಲಿ 20 ಸಾವಿರಕ್ಕೂ ಅಧಿಕ ಜನರ ಜೀವ ಉಳಿಸಿದ ಕರೊನಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts