More

    100 ಅಡಿ ಸುನಾಮಿ ಅಲೆಗೆ ಕೊಚ್ಚಿಹೋಗಿದ್ದ ಪೊಲೀಸ್​ ಅಧಿಕಾರಿ 17 ವರ್ಷಗಳ ಬಳಿಕ ಜೀವಂತ ಪತ್ತೆ!

    ಇಂಡೋನೇಷ್ಯಾ : 2004ರಲ್ಲಿ ಭಾರತ ಸೇರಿದಂತೆ ಶ್ರೀಲಂಕಾ, ಥೈಲೆಂಡ್ ಹಾಗೂ ಇಂಡೋನೇಷ್ಯಾದ ಲಕ್ಷಾಂತರ ಮಂದಿಯನ್ನು ಅಲ್ಲೋಲ ಕಲ್ಲೋಲ ಮಾಡಿತ್ತು ಸುನಾಮಿ. ಇಂಡೋನೇಷ್ಯಾದಲ್ಲಿ ಉಂಟಾದ ಸುನಾಮಿಯ ಅಬ್ಬರದಕ್ಕೆ ಎರಡೂವರೆ ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದರು.

    ಇದೇ ಸಂದರ್ಭದಲ್ಲಿ ಆ ಎರಡೂವರೆ ಲಕ್ಷದ ಮಂದಿಯಲ್ಲಿ ಒಬ್ಬರು ಎಂದೇ ನಂಬಲಾಗಿದ್ದವರು ಪೊಲೀಸ್​ ಅಧಿಕಾರಿ ಅಬ್ರಿಪ್​ ಆಸೆಪ್​.

    ಈ ಘಟನೆ ನಡೆದು 17 ವರ್ಷಗಳೇ ಗತಿಸಿಹೋಗಿವೆ. ಇವರ ಮನೆಯವರು ಕೂಡ ಆ ಭೀಕರ ಘಟನೆಯನ್ನು ಮರೆತೇ ಬಿಟ್ಟಿರುವ ಮಧ್ಯೆಯೇ, ಅಬ್ರಿಪ್​ ಅವರು ಬದುಕಿಳಿರುವ ಸುದ್ದಿಯೀಗ ಮನೆಯವರಿಗೆ ತಲುಪಿದೆ!

    ಸುಮಾರು 100 ಅಡಿ ಎತ್ತರದ ಸುನಾಮಿಯ ಅಲೆಗಳಿಗೆ ಪ್ರಾಣ ಕಳೆದುಕೊಂಡಿದ್ದ ಲಕ್ಷಾಂತರ ಮಂದಿಯಲ್ಲಿ ಇವರೂ ಒಬ್ಬರು ಎನ್ನಲಾಗಿತ್ತು. ಏಕೆಂದರೆ ಸುನಾಮಿ ನಡೆದ ಮುಖ್ಯ ಜಾಗದಲ್ಲಿಯೇ ಅಬ್ರಿಪ್​ ಕೂಡ ಇದ್ದರು. ಒಂದೇ ಸಲಕ ಭಯಾನಕ ರೂಪದಲ್ಲಿ ರೌದ್ರಾವತಾರ ತೋರಿದ ಸುನಾಮಿ ಅರೆಕ್ಷಣದಲ್ಲಿ ಲಕ್ಷಾಂತರ ಮಂದಿಯ ಪ್ರಾಣವನ್ನು ಕಳೆದುಕೊಂಡಿತ್ತು. ಆ ಸಮಯದಲ್ಲಿ ಅಬ್ರಿಪ್​ ಕಳೆದುಹೋಗಿದ್ದರು.

    ಆದರೆ ಇದೀಗ ಅವರ ಪತ್ತೆಯಾಗಿದೆ. ಇವರು ಬದುಕಿದ್ದಾರೆ ಎನ್ನುವ ಸುದ್ದಿಯನ್ನು ಕೇಳಿ ಕುಟುಂಬಸ್ಥರು ಎಷ್ಟು ಖುಷಿ ಪಟ್ಟರೋ ಅಷ್ಟೇ ದುಃಖವೂ ಅವರಿಗೆ ಈಗ ಆಗಿದೆ. ಇದಕ್ಕೆ ಕಾರಣ, ಅಬ್ರಿಪ್​ ಅವರು ತಮ್ಮ ಕುಟುಂಬವನ್ನು ಸಂಪೂರ್ಣವಾಗಿ ಮರೆತಿದ್ದಾರೆ.

    ‘ಅಷ್ಟಕ್ಕೂ ಆಗಿದ್ದೇನೆಂದರೆ, ಸಾಮಾಜಿಕ ಜಾಲತಾಣದಲ್ಲಿ ಅಬ್ರಿಪ್​ ಅವರ ಫೋಟೋ ಹರಿದಾಡುತ್ತಿತ್ತು. ಮಾನಸಿಕ ಅಸ್ವಸ್ಥರಂತೆ ಕಂಡುಬಂದಿದ್ದ ಅಬ್ರಿಪ್​ ಅವರನ್ನು ನೋಡಿದ್ದ ಕುಟುಂಬಸ್ಥರು ಅವರ ಜಾಡು ಹಿಡಿದು ಹೊರಟಿದ್ದರು. ನಂತರ ಪೊಲೀಸರ ನೆರವಿನಿಂದ ಪತ್ತೆ ಹಚ್ಚಿದ್ದಾಗ ಅಬ್ರಿಪ್​ ಸಿಕ್ಕಿದ್ದರು.

    ಆದರೆ ಅವರು ಕುಟುಂಬಸ್ಥರನ್ನು ಗುರುತಿಸುವ ಸ್ಥಿತಿಯಲ್ಲಿ ಇರಲಿಲ್ಲ. ದೈಹಿಕವಾಗಿ ಚೆನ್ನಾಗಿದ್ದರೂ ಕೂಡ ಮಾನಸಿಕವಾಗಿ ಅವರು ಅಸ್ವಸ್ಥರಾಗಿದ್ದಾರೆ. ಸುನಾಮಿ ದುರಂತ ಕಣ್ಣಾರೆ ಕಂಡಿದ್ದರಿಂದ ಅದರ ಶಾಕ್​ನಿಂದ 17 ವರ್ಷ ಗತಿಸಿದರೂ ಬರಲಾಗದೇ ಮಾನಸಿಕ ಅಸ್ವಸ್ಥತೆ ಆಗಿರುವುದಾಗಿ ವೈದ್ಯರು ಹೇಳಿದ್ದಾರೆ. ಸುನಾಮಿಯ ಸೆಳೆತಕ್ಕೆ ಸಿಕ್ಕಿದ್ದರೂ ಬದುಕುಳಿದಿದ್ದ ಅವರನ್ನು ಯಾರೋ ಆಸ್ಪತ್ರೆಗೆ ಸೇರಿಸಿದ್ದರು.

    ನಂತರ 17 ವರ್ಷಗಳಿಂದಲೂ ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

    ಡ್ರಗ್ಸ್​ ದಂಧೆ ತನಿಖೆ: ಪೊಲೀಸ್​ ಬೆಂಗಾವಲು ವಾಹನದ ಮೇಲೆ ಗುಂಡಿನ ದಾಳಿ- 11 ಅಧಿಕಾರಿಗಳ ಹತ್ಯೆ!

    ಪಿವಿಸಿ ಪೈಪ್​ ಎಂದು ಬಾಕ್ಸ್​​​ ತೆರೆದರೆ ಸಿಕ್ಕಿದ್ದು 21 ಲಕ್ಷ ನವಿಲುಗರಿ! ಚೀನಾದೊಂದಿಗೆ ಐದೂವರೆ ಕೋಟಿ ರೂ ವ್ಯವಹಾರ!

    ಪತಿಯನ್ನು ಕೊಲ್ಲಲು ಸುಪಾರಿ ಕೊಟ್ಟ ಪತ್ನಿ- ₹6 ಲಕ್ಷ ಕೊಟ್ಟ ಪುತ್ರ- ಬೆಂಗಳೂರಲ್ಲಿ ಭಯಾನಕ ಘಟನೆ!

    VIDEO: ಚಿನ್ನ ಬೇಡ.. ದುಡ್ಡು ಬೇಡ… ಒಂದು ಲಕ್ಷ ಮೌಲ್ಯದ ಪುಸ್ತಕ ಕೊಟ್ಟುಬಿಡಿ ಎಂದ ಪಾಕ್​ ವಧು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts