More

    ಪ್ರತಿಭಟನೆಯಲ್ಲಿಯೇ ಪಂಬಾಬ್‌ನ ‘ರೈತ’ ಮೃತಪಟ್ಟದ್ದು ನಿಜನಾ? ವೈರಲ್‌ ಫೋಟೋದ ಹಿಂದಿನ ಅಸಲಿಯತ್ತೇನು?

    ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಅದರಲ್ಲಿಯೂ ಮುಖ್ಯವಾಗಿ ಪಂಜಾಬ್‌ – ಹರಿಯಾಣದ ರೈತರು ನಡೆಸುತ್ತಿರುವ ಪ್ರತಿಭಟನೆಗೆ ತಿಂಗಳಾಗುತ್ತಾ ಬಂದಿದೆ.

    ಈ ಕಾಯ್ದೆ ಎಷ್ಟು ರೈತ ಪರವಾಗಿದೆ ಎಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಷಾ ಅವರೇ ರೈತರಿಗೆ ತಿಳಿವಳಿಕೆ ನೀಡುತ್ತಾ ಬಂದಿದ್ದರೂ, ಇದಕ್ಕೆ ವಿರೋಧ ಪಕ್ಷಗಳು ಟೀಕಿಸುತ್ತಾ ಬರುತ್ತಲೇ ಇವೆ. ಮುಗ್ಧ ರೈತರ ಹೆಸರಿನಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯ ನಡುವೆ ದೇಶದ್ರೋಹಿಗಳು, ಉಗ್ರರ ಪರವಾಗಿ ಘೋಷಣೆ ಕೂಗಿರುವುದೂ ನಡೆದಿದೆ. ಜತೆಗೆ, ಈ ಪ್ರತಿಭಟನೆಗೆ ವಿದೇಶದಿಂದ ಹಣದ ಹೊಳೆ ಹರಿದುಬರುತ್ತಿರುವ ಆರೋಪವೂ ಇದೆ.

    ಇವೆಲ್ಲವುಗಳ ನಡುವೆಯೇ, ಇದೀಗ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿದೆ. ಇದನ್ನು ಕಾಂಗ್ರೆಸ್‌ ಮುಖಂಡರು ಸೇರಿದಂತೆ ಹಲವಾರು ನಟರು ಕೂಡ ಶೇರ್‌ ಮಾಡಿಕೊಂಡಿದ್ದಾರೆ. ನಟ ಸುಶಾಂತ್‌ ಸಿಂಗ್‌ ಕೂಡ ಈ ಚಿತ್ರವನ್ನು ಶೇರ್‌ ಮಾಡಿಕೊಂಡು ಕಂಬನಿ ಮಿಡಿದಿದ್ದಾರೆ.

    ಈ ಫೋಟೋದಲ್ಲಿ ಪಂಜಾಬ್‌ನ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಫೋಟೋ ಇದ್ದು, ಇದಕ್ಕೆ ರೈತರ ಪ್ರತಿಭಟನೆಯಲ್ಲಿ ಮೃತಪಟ್ಟಿರುವ ರೈತ ಎಂದು ಕ್ಯಾಪ್ಷನ್‌ ನೀಡಲಾಗಿದೆ. ಮಾತ್ರವಲ್ಲದೇ, ಇದೇ ಫೋಟೋ ಇಟ್ಟುಕೊಂಡು ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್ಸಿಗರು ಹಾಗೂ ಅವರ ಬೆಂಬಲಿಗರು ಸಾಕಷ್ಟು ವಾಗ್ದಾಳಿ ನಡೆಸುತ್ತಿದ್ದಾರೆ.

    ಆರಂಭದಲ್ಲಿ ಇದನ್ನು ಜಮ್ಮು ಮತ್ತು ಕಾಶ್ಮೀರದ ಯುವ ಕಾಂಗ್ರೆಸ್ ವಕ್ತಾರರಾದ ಆಬಿದ್ ಮಿರ್ ಮಗಾಮಿ, ಪ್ರಸ್ತುತ ಪ್ರತಿಭಟನೆಯಲ್ಲಿ ಇನ್ನೊಬ್ಬ ರೈತನನ್ನು ‘ಹುತಾತ್ಮರಾಗಿದ್ದಾರೆ’ ಎಂದು ಹೇಳಿಕೊಂಡು ಶೇರ್‌ ಮಾಡಿದ್ದಾರೆ. ‘ರೈತರು’ ಪ್ರತಿನಿಧಿಸುವ ಟ್ವಿಟ್ಟರ್ ಖಾತೆ ಎಂದು ಹೇಳಿಕೊಳ್ಳುವ ಅಖಿಲ ಭಾರತ ಕಿಸಾನ್ ಸಂಘ ಕೂಡ ಸೋಶಿಯಲ್ ಮೀಡಿಯಾದಲ್ಲಿ ಇದನ್ನು ಹರಿಬಿಟ್ಟಿದೆ. ದೆಹಲಿ ಕಿಸಾನ್ ಮೋರ್ಚಾದ ಸಮಯದಲ್ಲಿ ‘ರೈತ’ ತನ್ನ ಪ್ರಾಣವನ್ನು ತ್ಯಾಗ ಮಾಡಿದೆ ಎಂದು ಹೇಳಲಾಗಿದೆ.

    ಪ್ರತಿಭಟನೆಯಲ್ಲಿಯೇ ಪಂಬಾಬ್‌ನ ‘ರೈತ’ ಮೃತಪಟ್ಟದ್ದು ನಿಜನಾ? ವೈರಲ್‌ ಫೋಟೋದ ಹಿಂದಿನ ಅಸಲಿಯತ್ತೇನು?

    ಇದರ ಜತೆಗೆ ಸದಾ ನಕಲಿ ಫೋಟೋಗಳನ್ನು ಹರಿಬಿಡುವಲ್ಲಿ ನುರಿತರಾಗಿರುವ ಸ್ವ-ಘೋಷಿತ ಪತ್ರಕರ್ತರಾದ ವಿನೋದ್ ಕಪ್ರಿ ಮತ್ತು ಪ್ರಶಾಂತ್ ಕನೋಜಿಯಾ ಇದನ್ನು ಶೇರ್‌ ಮಾಡಿಕೊಂಡು, ಇಸ್ಲಾಮಿಸ್ಟ್ ಸಯೆಮಾ ಮತ್ತು ನಟ ಸೋನು ಸೂದ್ ಅವರ ಹ್ಯಾಂಡಲ್‌ಗಳನ್ನು ಸಹ ಈ ಖಾತೆಯಲ್ಲಿ ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಸೋನು ಸೂದ್‌, ಸುಶಾಂತ್‌ ಸಿಂಗ್‌ ಕೂಡ ಕಂಬನಿ ಮಿಡಿದಿದ್ದರು. ಮಾತ್ರವಲ್ಲದೇ ಸುಶಾಂತ್‌ ಸಿಂಗ್‌ ಶೇರ್‌ ಮಾಡಿಕೊಂಡು ಕೇಂದ್ರ ಸರ್ಕಾರ ವಿರುದ್ಧ ಮಾತನಾಡಿದರು.

    ಆದರೆ ಈ ಫೋಟೋ ನಿಜವಾಗಿಯೂ ಅಲ್ಲಿ ಹೀನಾಯವಾಗಿ ಮೃತಪಟ್ಟ ರೈತನದ್ದೇ ಆಗಿತ್ತೆ? ಈ ಚಿತ್ರ ಶೇರ್‌ ಮಾಡಿಕೊಂಡು ತಾನು ಮೋಸ ಹೋದೆ ಎಂದು ನಟ ಸುಶಾಂತ್‌ ಸಿಂಗ್‌ ಕೇಂದ್ರ ಸರ್ಕಾರಕ್ಕೆ ಕ್ಷಮೆ ಕೋರಿದ್ದು ಏಕೆ? ಇದರ ಅಸಲಿಯತ್ತು ಏನು ಎನ್ನುವುದು ಇಲ್ಲಿದೆ ನೋಡಿ.
    ಪ್ರತಿಭಟನೆಯಲ್ಲಿಯೇ ಪಂಬಾಬ್‌ನ ‘ರೈತ’ ಮೃತಪಟ್ಟದ್ದು ನಿಜನಾ? ವೈರಲ್‌ ಫೋಟೋದ ಹಿಂದಿನ ಅಸಲಿಯತ್ತೇನು?

    ಅಸಲಿಗೆ ಇದು 2018ರ ಫೋಟೋ. 2018 ರ ಸೆಪ್ಟೆಂಬರ್‌ನಲ್ಲಿ ಫೇಸ್‌ಬುಕ್ ಪುಟ ‘ಗರೀಬ್ ಜಾಟ್’ ನಲ್ಲಿ ಈ ಫೋಟೋ ಶೇರ್‌ ಮಾಡಲಾಗಿದೆ. ಅದರ ಪ್ರಕಾರ, ಸುಮಾರು 70 ವರ್ಷ ವಯಸ್ಸಿನ ವೃದ್ಧ ಬೋಹಡಿ ಕ್ರಾಸ್‌ರೋಡ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, ಈತ ಯಾರೆಂದು ಗೊತ್ತಿಲ್ಲ. ದಯವಿಟ್ಟು ಇವರ ಸಂಬಂಧಿಕರು ಹಾಗೂ ಪರಿಚಯಸ್ಥರು ಸಿಕ್ಕರೆ ತಿಳಿಸಿ ಎಂದು ಅದನ್ನು ಶೇರ್‌ ಮಾಡಲಾಗಿದೆ.

    ಅದನ್ನೀಗ ಉದ್ದೇಶಪೂರ್ವಕವಾಗಿ ಜಾಲತಾಣದಲ್ಲಿ ರೈತರ ಪ್ರತಿಭಟನೆ ಹೆಸರಿನಲ್ಲಿ ವೈರಲ್‌ ಮಾಡಲಾಗುತ್ತಿದೆ.

    ಮಗನ ಮದುವೆಗೆ ನೆರವಾದದ್ದೇ ತಪ್ಪಾಯ್ತು: ಗಂಡ ಹತ್ತಿರ ಸೇರಿಸುತ್ತಿಲ್ಲ- ಅವರ ಆಸ್ತಿ ಸಿಗುವುದಿಲ್ಲವೆ?

    ಈ ಯುವಕನ ಕಾರಿನ ನಂಬರ್‌ ಪ್ಲೇಟ್‌ಗೆ 52 ಕೋಟಿ ರೂ.! ಅದ್ಯಾಕೆ ಅಂತೀರಾ?

    ಮಕ್ಕಳಿಗಾಗಿ ಮದುವೆಯಾದರು: ಎರಡನೇ ಪತ್ನಿಯಾದ ಮಾತ್ರಕ್ಕೆ ನನಗೆ ಬಯಕೆಗಳು ಇರುವುದು ತಪ್ಪೆ?

    ವಿವಿಧ ಪದವೀಧರರಿಗೆ ಐಡಿಬಿಐ ಬ್ಯಾಂಕ್‌ನಲ್ಲಿವೆ 134 ಹುದ್ದೆಗಳು

    ಲವ್‌ ಜಿಹಾದಿಗಳಿಗೆ ಪಾಠ ಕಲಿಸಲು ರೆಡಿಯಾಯ್ತು ಇನ್ನೊಂದು ರಾಜ್ಯ: ಧರ್ಮ ಮುಚ್ಚಿಟ್ಟರೆ ಇನ್ನೂ ಕಠಿಣ ಶಿಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts