More

    ಗಂಡನನ್ನು ಕಳೆದುಕೊಂಡ ನೋವಿನ ಅರಿವು ಶೋಭಾ ಕರಂದ್ಲಾಜೆಗೆ ಇಲ್ಲ- ಉಮಾಶ್ರೀ ಗುಡುಗು

    ಬೆಂಗಳೂರು: ಐಎಎಸ್ ಅಧಿಕಾರಿಯಾಗಿದ್ದ ಡಿ.ಕೆ ರವಿ ಅವರ ಪತ್ನಿಯ ಕುಸುಮಾ ಹನುಮಂತರಾಯಪ್ಪ ಅವರ ಕುರಿತಂತೆ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿರುವುದು ಕಾಂಗ್ರೆಸ್​ ಮಹಿಳಾ ಮುಖಂಡರನ್ನು ಕೆರಳಿಸಿದೆ.

    ಡಿ.ಕೆ ರವಿ ವಿಚಾರ ಚರ್ಚೆಯ ವಿಷಯವೇ ಅಲ್ಲ. ಡಿ.ಕೆ ರವಿ ಓರ್ವ ದಕ್ಷ ಅಧಿಕಾರಿಯಾಗಿದ್ರೂ ಇಂದು ನಮ್ಮ ಜತೆಗಿಲ್ಲ. ರವಿ ಹೆಸರನ್ನು ಯಾರು ಬಳಸಿಕೊಂಡರೂ ಅವರಿಗೆ ಒಳ್ಳೆದಾಗಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದರು. ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದಿಂದ ಕುಸುಮಾ ಅವರನ್ನು ಕಾಂಗ್ರೆಸ್​ ಕಣಕ್ಕೆ ಇಳಿಸಿದ ನಂತರ ಈ ಮಾತನ್ನು ಶೋಭಾ ಹೇಳಿದ್ದರು.

    ಈ ಹೇಳಿಕೆ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಇಂದು ಕಿಡಿ ಕಾರಿದ ಮಾಜಿ ಸಚಿವೆ ಉಮಾಶ್ರೀ ರವಿ ಅವರ ಪತ್ನಿ ಕುಸುಮಾ ಧಾರ್ಮಿಕ ಧಾರ್ಮಿಕವಿಧಿಗಳಂತೆಯೇ ಮದುವೆಯಾದವರು. ಸಪ್ತಪದಿ ತುಳಿದು ಮದುವೆಯಾಗಿದ್ದಾರೆ. ಅವರು ಗಂಡನ ಹೆಸರು ಹಾಕಿಕೊಳ್ಳುವುದು ಬೇಡ ಅಂದರೆ ಹೇಗೆ? ಇದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಕಿಡಿಕಾರಿದರು.

    ಶೋಭಾ ಕರಂದ್ಲಾಜೆ ಅವರಿಗೆ ತಂದೆ ಕಳೆದುಕೊಂಡ ಹೆಣ್ಣಿನ ನೋವಿನ ಬಗ್ಗೆ ಅರಿವಿರಬಹುದು. ಆದರೆ ಗಂಡನನ್ನು ಕಳೆದುಕೊಂಡ ಹೆಣ್ಣಿನ ಏಕಾಂಗಿತನ, ಆ ಹೆಣ್ಣಿನ ನೋವಿನ ಅರಿವಿಲ್ಲ. ಅದಕ್ಕಾಗಿಯೇ ಈ ರೀತಿ ಮಾತನಾಡಿದ್ದಾರೆ ಎಂದರು. ಕೆ.ರವಿ ಹೆಸರು ಬಳಸದಂತೆ ಶೋಭಾ ಹೇಳಿದ್ದಾರೆ, ಸತ್ತವರ ಹೆಸರನ್ನ ಬಳಸಿಕೊಂಡೇ ರಾಜಕೀಯ ಮಾಡಿದ್ದವರಿಲ್ಲವೇ ಎಂದು ಪ್ರಶ್ನಿಸಿದರು.

    ಶೋಭ ಕರಂದ್ಲಾಜೆ ಜ್ಯೋತಿಷಿ ಅಲ್ಲ, ಸಂಸದೆ ಅನ್ನೋದನ್ನ ನೆನಪಿಸಿಕೊಳ್ಳಲಿ. ಗಂಡ ಸತ್ತವರು, ಗಂಡ ಬಿಟ್ಟವರು ಎಲೆಕ್ಷನ್​​​ಗೆ ನಿಲ್ಲಬಾರದು ಅಂತ ಸಂವಿಧಾನದಲ್ಲಿ ಎಲ್ಲೂ ಬರೆದಿಲ್ಲ, ರಾಜಕೀಯಕ್ಕೆ ಬರೋದು, ಚುನಾವಣೆಗೆ ನಿಲ್ಲೋದು ಮಹಿಳೆಯರ ಹಕ್ಕು. ಆರ್.ಆರ್.ನಗರದಲ್ಲಿ ಬಿಜೆಪಿ ನಾಯಕರು ಸೋಲುವ ಭೀತಿಯಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

    ಇದನ್ನೂ ಓದಿ: ದಿಢೀರ್​ ಖಾತೆ ಬದಲಾವಣೆಗೆ ಇದೇ ಕಾರಣ: ಡಿ.ಕೆ. ಶಿವಕುಮಾರ್

    ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಮಾತನಾಡಿ, ಅತ್ಯಾಚಾರ ಮಾಡುವವರ ಪುರುಷತ್ವ ಹರಣ ಮಾಡಬೇಕು ಎನ್ನುತ್ತಿದ್ದ ಶೋಭಾ ಕರಂದ್ಲಾಜೆ ಹಾಥರಸ್​ ಪ್ರಕರಣದ ಕುರಿತು ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಕುಸುಮಾ ಅವರ ವಿಷಯದಲ್ಲಿ ಶೋಭಾ, ಹೆಣ್ಣು ಕುಲಕ್ಕೆ ಅವಮಾನವಾಗುವ ರೀತಿ ಮಾತನಾಡಿದ್ದಾರೆ ಎಂದರು.

    ಇದಕ್ಕೆ ದನಿಗೂಡಿಸಿದ ಶಾಸಕಿ ಸೌಮ್ಯಾ ರೆಡ್ಡಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡಬೇಕು ಎನ್ನುವ ಬೇಡಿಕೆ ಸಂಸತ್ತಿನಲ್ಲಿಯೇ ಇದೆ. ವಿಧಾನಸಭೆಯಲ್ಲಿ ನಾವು ಕೇವಲ ಶೇ4 ರಷ್ಟಿದ್ದೇವೆ. ಸಂಸತ್ತಿನಲ್ಲಿ ಶೋಭಾ ನಮ್ಮ ರಾಜ್ಯದ ಸಮಸ್ಯೆ ಬಗ್ಗೆ ಒಂದೇ ಒಂದು ವಿಷಯ ಮಾತನಾಡಿಲ್ಲ. ನಿರ್ಭಯಾ ಫಂಡ್ ಬಗ್ಗೆ ದನಿ ಎತ್ತಿಲ್ಲ. ಈಗ ರಾಜಕೀಯಕ್ಕಾಗಿ ಮಾತ್ರ ಕುಸುಮಾ ಅವರ ಬಗ್ಗೆ ಮಾತನಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಕಿಡಿಕಾರಿದರು.

    ಕಡಿಮೆ ದರದಲ್ಲಿ ಚಿನ್ನ ಬೇಕಾ? ಕೇಂದ್ರ ಸರ್ಕಾರದಿಂದ ಶುರುವಾಗಿದೆ ಗೋಲ್ಡ್ ಬಾಂಡ್ ಯೋಜನೆ

    ಹೆಣ್ಣುಮಕ್ಕಳೇ ವಿಚ್ಛೇದನ ಕೇಳಿದರೆ ತೊಂದರೆ ಆಗುತ್ತದೆಯೇ?

    ಬಿಜೆಪಿ ಸೇರಿದ ಖುಷ್ಬೂ: ಅನುಮಾನಗಳಿಗೆ ತೆರೆ ಎಳೆದ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts