More

    ಕಾಂಗ್ರೆಸ್​ ಗೆಲುವಿಗೆ ಒಗ್ಗಟ್ಟಿನಿಂದ ಹೋರಾಟ

    ವಿಜಯಪುರ: ಜಿಲ್ಲೆಯಲ್ಲಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬದಲಾವಣೆ ತರಲೇಬೇಕೆಂದು ನಾವೆಲ್ಲರೂ ಒಗ್ಗಟ್ಟಾಗಿ ನಿಂತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

    ನಾಗಠಾಣದಲ್ಲಿ ಬುಧವಾರ ನಡೆದ ಬೃಹತ್​ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ನಾಗಠಾಣ ೇತ್ರದಲ್ಲಿ ಹಿಂದೆ ನಾನು, ಸಚಿವ ಶಿವಾನಂದ ಪಾಟೀಲ ಮತ್ತು ಆಲಗೂರ ಅವರು ಶಾಸಕರಾಗಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದೇವೆ.

    ಜಿಲ್ಲೆಯಿಂದ ಆಲಗೂರ ಸಂಸದರಾಗಿ ಆಯ್ಕೆಯಾದರೆ ಆಲಮಟ್ಟಿ ಎತ್ತರ ಹೆಚ್ಚಿಸಲು ಸಂಸತ್​ನಲ್ಲಿ ಹೋರಾಡಲಿದ್ದು, ಆಗ ಜಿಲ್ಲೆಯಲ್ಲಿ ಸಂಪೂರ್ಣ ನೀರಾವರಿ ಆಗಲಿದೆ ಎಂದು ಭರವಸೆ ನೀಡಿದರು.

    ಪ್ರಧಾನಿ ಮೋದಿ “ಸಬ್​ ಕಾ ಸಾಥ್​, ಸಬ್​ ಕಾ ವಿಕಾಸ್​’ ಎಂದು ಹೇಳಿ ಎಲ್ಲರ ನಡುವೆ ಜಗಳ ಹಚ್ಚಿದ್ದಾರೆ. ಅಲ್ಲದೆ ಈಗ ಹೆಣ್ಣುಮಕ್ಕಳ ತಾಳಿಯ ಬಗ್ಗೆ ಮಾತನಾಡುವ ಮಟ್ಟಕ್ಕೆ ಹೋಗಿದ್ದಾರೆ. ಚುನಾವಣಾ ಬಾಂಡ್​ನಿಂದ ಇವರ ಬಂಡವಾಳ ಬಯಲಾಗಿದ್ದು ದೇಶದ ದೊಡ್ಡ ಹಗರಣ ಇದಾಗಿದ್ದು ಎಂದು ದೂರಿದರು.

    ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಸಮಸ್ಯೆ ಹೊತ್ತು ಜಿಗಜಿಣಗಿ ಬಳಿಗೆ ಹೋದರೆ ಅವರು ಸಿಗುವುದೇ ಇಲ್ಲ. ಹಾಲು ನೀಡದ ಹಸುವನ್ನೇ ಇಟ್ಟುಕೊಳ್ಳಲ್ಲ, ಇನ್ನು ಕೆಲಸ ಮಾಡದ ಸಂಸದ ಜಿಗಜಿಣಗಿ ಯಾಕೆ ಬೇಕು? ಎಂದು ಪ್ರಶ್ನಿಸಿದ ಅವರು ಐವತ್ತು ವರ್ಷ ಅಧಿಕಾರ ಅನುಭವಿಸಿದ ಜಿಗಜಿಣಗಿ ಅವರಿಂದ ನಯಾಪೈಸೆ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.

    ಶಾಸಕ ವಿಠಲ ಕಟಕದೊಂಡ, ವಿಪ ಸದಸ್ಯ ಸುನೀಲಗೌಡ ಪಾಟೀಲ ಮತ್ತು ಅಭ್ಯರ್ಥಿ ಪ್ರೊ. ರಾಜು ಆಲಗೂರ ಮಾತನಾಡಿದರು ಕಾಂಗ್ರೆಸ್​ ಜಿಲ್ಲಾಧ್ಯ ಮಲ್ಲಿಕಾರ್ಜುನ ಲೋಣಿ, ಕೌಶಲ ಅಭಿವೃದ್ಧಿ ನಿಗಮದ ಅಧ್ಯೆ ಕಾಂತಾ ನಾಯಕ ವೇದಿಕೆಯಲ್ಲಿದ್ದರು.

    ಮಾಜಿ ಜಿಪಂ ಸದಸ್ಯ ದಾನಪ್ಪ ಕಟ್ಟಿಮನಿ ಸೇರಿ ಹಲವು ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿದರು.

    ವೀಕ ಡಾ. ಸಯೀದ ಬುರಾನ, ಡಿ.ಎಲ್​. ಚವಾಣ, ಎಂ.ಆರ್​. ಪಾಟೀಲ, ಶ್ರೀದೇವಿ ಉತ್ಲಾಸ್ಕರ, ಸುಜಾತಾ ಕಳ್ಳಿಮನಿ, ಬಾಬು ರಾಜೇಂದ್ರ ನಾಯಿಕ, ಆರ್​.ಡಿ. ಹಕ್ಕೆ, ಶಹನವಾಜ ಮುಲ್ಲಾ, ಸೋಮನಾಥ ಕಳ್ಳಿಮನಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts