More

    ಇನ್ಮುಂದೆ ಇಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ನಿಷೇಧ- ರಾಷ್ಟ್ರೀಯ ಭದ್ರತೆಗೆ ಮಾರಕ ಎಂದ ಸಚಿವ ಸಂಪುಟ

    ಕೊಲಂಬೊ: ಇನ್ನು ಮುಂದೆ ಶ್ರೀಲಂಕಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿಕೊಂಡು ಓಡಾಡುವಂತಿಲ್ಲ. ಇದೂ ಅದಲ್ಲದೇ ಯಾವುದೇ ರೀತಿಯ ಮುಖ ಮುಸುಕುಗಳು ಕೂಡ ಇಲ್ಲಿ ನಿಷೇಧ.

    ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಇದೆ ಎಂಬ ಕಾರಣ ನೀಡಿರುವ ಶ್ರೀಲಂಕಾದ ಸಚಿವ ಸಂಪುಟವು ಇಂಥದ್ದೊಂದು ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ. ಇದಕ್ಕೆ ಭಾರಿ ಪರ- ವಿರೋಧಗಳು ಬಂದಿದ್ದವು. ಇದು ಬಹಳ ವಿವಾದವನ್ನೂ ಸೃಷ್ಟಿಸಿತ್ತು. ಆದರೆ ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಇಂಥದ್ದೊಂದು ಕ್ರಮ ಅನಿವಾರ್ಯ ಎಂದು ಇಲ್ಲಿಯ ಸರ್ಕಾರ ಹೇಳಿದೆ.

    ಸಾರ್ವಜನಿಕ ಭದ್ರತಾ ಸಚಿವ ಶರತ್ ವೀರಶೇಖರ ಅವರು ಕಳೆದ ಮಾರ್ಚ್‌ನಲ್ಲಿ ಈ ಕುರಿತ ಟಿಪ್ಪಣಿಗೆ ಸಹಿ ಹಾಕಿದ್ದರು. ಬುರ್ಖಾಗಳನ್ನು ನಿಷೇಧಿಸಲು ಸಂಪುಟದ ಅನುಮೋದನೆಯನ್ನು ಅವರು ಕೋರಿದ್ದರು. ನಂತರ ಇದರ ಬಗ್ಗೆ ವಿವಾದದ ಅಲೆ ಎದ್ದಿತ್ತು. ಅದರ ನಡುವೆಯೂ ಇದೀಗ ಶ್ರೀಲಂಕಾ ಸಚಿವ ಸಂಪುಟ ಬುರ್ಖಾ ನಿಷೇಧಕ್ಕೆ ಅನುಮೋದನೆ ನೀಡಿದೆ.

    ಈ ಕುರಿತು ಸಂಪುಟ ವಕ್ತಾರ ಮತ್ತು ವಾರ್ತಾ ಸಚಿವ ಕೆಹಲೀಯಾ ರಂಬೂಕ್ವೆಲ್ಲ ಸ್ಪಷ್ಟಪಡಿಸಿದ್ದಾರೆ. ಈಸ್ಟರ್ ಭಾನುವಾರದಂದು ಹೋಟೆಲ್ ಗಳು ಮತ್ತು ಚರ್ಚುಗಳ ಮೇಲೆ ಸಂಘಟಿತ ಭಯೋತ್ಪಾದಕ ದಾಳಿಗಳ ಅಲೆಯ ಎರಡು ವರ್ಷಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

    ತಂಗಿಯ ಜತೆ ಮಂಚದಲ್ಲಿ ಚಕ್ಕಂದ- ನಾಲ್ಕನೇ ಗಂಡನಿಂದ ‘ಡ್ರಗ್ಸ್‌ ರಾಣಿ’ಯ ದುರಂತ ಅಂತ್ಯ!

    ನಿನಗೆ ಆಸ್ತಿ ಕೊಡುವುದಿಲ್ಲ ಎಂದು ತಂದೆ ಹೇಳುತ್ತಿದ್ದಾರೆ- ನಾನು ಇದರ ವಿರುದ್ಧ ಕೋರ್ಟ್‌ಗೆ ಹೋಗಬಹುದಾ?

    ಅಜ್ಜನಿಗೆ ಆಕ್ಸಿಜನ್ ಸಿಲಿಂಡರ್ ಬೇಕಾಗಿದೆ ಅಂತ ಟ್ವೀಟ್ ಮಾಡಿದ ಯುವಕನ ವಿರುದ್ಧ ಎಫ್ಐಆರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts