More

    ಪೂಜೆ ಮಾಡಿಸಿದ್ರೆ ಐಎಎಸ್‌, ಐಪಿಎಸ್‌ ಯೋಗ ಬರತ್ತೆ ಅಂದರು, ಯುವತಿಯರೂ ನಂಬಿ ಎಲ್ಲಾ ಕಳೆದುಕೊಂಡರು! ಸಿಕ್ಕಿಬಿದ್ದ ಖದೀಮರು

    ಚಿತ್ರದುರ್ಗ: ನಿಮ್ಮ ಬಂಗಾರದ ಒಡವೆಗಳನ್ನು ಪೂಜೆ ಮಾಡಿಸಿದ್ರೆ ಐಎಎಸ್, ಐಪಿಎಸ್ ಯೋಗ ಬರುತ್ತೆ ಎಂದು ಯುವತಿಯರನ್ನು ನಂಬಿಸಿ ವಂಚನೆ ಮಾಡುತ್ತಿದ್ದ ಖತರ್ನಾಕ್‌ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.

    ತಮಗೆ ಐಎಎಸ್‌,ಐಪಿಎಸ್‌ ಯೋಗ ಬರುತ್ತದೆ ಎಂದು ಈ ನಕಲಿ ಜೋತಿಷಿಗಳನ್ನು ನಂಬಿಕೊಂಡ ಯುವತಿಯರು ಪೂಜೆಯನ್ನೂ ಮಾಡಿಸುತ್ತಿದ್ದರು. ಪೂಜೆ ನೆಪದಲ್ಲಿ ಚಿನ್ನ ಪಡೆದು ಮಹಿಳೆಯರು ಹಾಗೂ ಯುವತಿಯರನ್ನು ಈ ಮೂವರು ವಂಚಿಸುತ್ತಿದ್ದರು.

    ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ಯುವತಿಯರು ಇವರ ಮೋಸದ ಜಾಲಕ್ಕೆ ಬಿದ್ದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಬಂಡೆಪ್ಪ, ಭೀಮರಾವ್, ಬಾಗಲಕೋಟೆಯ ಗಣೇಶ ಶಾಸ್ತ್ರಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ 6.80 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಉದ್ಯೋಗ ಸಿಗದೇ, ಮದುವೆಯಾಗದೇ ಪರಿತಪಿಸುತ್ತಿರುವವರ ಕಣ್ಣಿಡುತ್ತಿದ್ದ ಈ ನಕಲಿ ಜ್ಯೋತಿಷಿಗಳು ಉದ್ಯೋಗ, ಶುಭ ಯೋಗ, ಕಂಕಣ ಭಾಗ್ಯದ ಬಗ್ಗೆ ನಂಬಿಕೆ ಹುಟ್ಟಿಸಿ ವಂಚಿಸಿದ್ದಾರೆ.

    ತಾವು ಎಂಥದ್ದೇ ಸಮಸ್ಯೆ ಇದ್ದರೂ ಅದರಿಂದ ಮುಕ್ತಿ ಕೊಡುವುದಾಗಿ ನಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡುತ್ತಿದ್ದರು. ಈ ಜಾಹೀರಾತಿಗೆ ಮರುಳಾದ ಕೆಲವು ಯುವತಿಯರು ಇವರನ್ನು ಹುಡುಕಿ ಬರುತ್ತಿದ್ದರು. ಇಂಥ ಸೂಕ್ಷ್ಮ ಮನಸ್ಸಿನ ಯುವತಿಯರನ್ನೇ ಟಾರ್ಗೆಟ್‌ ಮಾಡಿಕೊಂಡಿದ್ದ ಈ ಖದೀಮರು ಹೀಗೆ ಪೂಜೆ ನೆಪದಲ್ಲಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು
    ಇವರ ಹಿಂದೆ ಇನ್ನು ದೊಡ್ಡ ಜಾಲವೊಂದು ಕೆಲಸ ಮಾಡ್ತಿರುವ ಶಂಕೆ ವ್ಯಕ್ತವಾಗಿದೆ. ಚಳ್ಳಕೆರೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಸೇನೆಯಲ್ಲಿ ಇತಿಹಾಸ ಸೃಷ್ಟಿಸಿರುವ ಬಿಪಿನ್ ರಾವತ್‌ ಅಚ್ಚರಿಗಳ ಆಗರ: ನಿವೃತ್ತಿಯ ಹಿಂದಿನ ದಿನವೇ ನಡೆದಿತ್ತು ಕೌತುಕ!

    ಯಾವ ಗಂಡನ್ನೂ ನಂಬಬಾರದು ಎಂದುಕೊಂಡ ನಾನು ವಿವಾಹಿತನಿಗೆ ಎಲ್ಲವನ್ನೂ ಅರ್ಪಿಸಿ ಒದ್ದಾಡುತ್ತಿರುವೆ… ಪ್ಲೀಸ್‌ ದಾರಿತೋರಿ ಮೇಡಂ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts