More

    ಭಾರತದಲ್ಲಿ ಕ್ಯಾನ್ಸರ್‌ ಸ್ಥಿತಿಗತಿಯ ವರದಿ ಬಿಚ್ಚಿಟ್ಟ ಸಂಶೋಧಕರು

    ನವದೆಹಲಿ: ಭಾರತದಲ್ಲಿ ಕ್ಯಾನ್ಸರ್‌ ಕುರಿತಂತೆ ರಾಷ್ಟ್ರೀಯ ರೋಗ ಸೂಚನಾ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ (ಎನ್‌ಸಿಡಿಐಆರ್‌) ಮತ್ತು ಐಸಿಎಂಆರ್‌ ಅಧ್ಯಯನ ನಡೆಸಿದೆ. ಇದರ ಪ್ರಕಾರ, ಈ ವರ್ಷ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ 13.9 ಲಕ್ಷ ದಾಖಲಾಗಿದೆ. 2025ಕ್ಕೆ ಪ್ರಕರಣಗಳ ಸಂಖ್ಯೆ 15.7 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ.

    ಕ್ಯಾನ್ಸರ್‌ ಪ್ರಕರಣಗಳನ್ನು ದಾಖಲಿಸಿಕೊಳ್ಳುವ 28 ಕೇಂದ್ರಗಳಿಂದ ಹಾಗೂ 58 ಆಸ್ಪತ್ರೆ ಆಧಾರಿತ ಮಾಹಿತಿ ಸಂಗ್ರಹಿಸಿ ಈ ಅಧ್ಯಯನ ವರದಿ ಪ್ರಕಟವಾಗಿದೆ.

    ದೇಶದ ಈಶಾನ್ಯ ಪ್ರದೇಶದಲ್ಲಿ ತಂಬಾಕು ಬಳಕೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಕ್ಯಾನ್ಸರ್‌ ಉಂಟಾಗುತ್ತಿದೆ. ಪುರುಷರಲ್ಲಿ ಶ್ವಾಸಕೋಶ, ಬಾಯಿ, ಜಠರ ಹಾಗೂ ಅನ್ನನಾಳದ ಕ್ಯಾನ್ಸರ್‌ ಸಾಮಾನ್ಯವಾಗಿದೆ. ಮಹಿಳೆಯರಲ್ಲಿ ಸ್ತನ ಹಾಗೂ ಗರ್ಭಕಂಠ ಕ್ಯಾನ್ಸರ್‌ ಹೆಚ್ಚು ಕಾಣಿಸಿಕೊಳ್ಳುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಕ್ಯಾನ್ಸರ್‌ ಪ್ರಕರಣಗಳ ಪ್ರಮಾಣ ಒಂದು ಲಕ್ಷ ಪುರುಷರ ಪೈಕಿ ಮಿಜೊರಾಂನ ಐಜೋಲ್‌ ಜಿಲ್ಲೆಯಲ್ಲಿ 269.4 ಪ್ರಕರಣಗಳಿದ್ದು, ಇದು ಭಾರತದಲ್ಲಿಯೇ ಅತಿ ಹೆಚ್ಚು. ಮಹಾರಾಷ್ಟ್ರದ ಉಸ್ಮಾನಾಬಾದ್‌ ಮತ್ತು ಬೀಡ್‌ ಜಿಲ್ಲೆಗಳಲ್ಲಿ 39.5 ಪ್ರಕರಣಗಳಿವೆ. ಪ್ರತಿ ಒಂದು ಲಕ್ಷ ಮಹಿಳೆಯರ ಪೈಕಿ ಅರುಣಾಚಲ ಪ್ರದೇಶದ ಪಾಪುಂಪಾರೆ ಜಿಲ್ಲೆಯಲ್ಲಿ 219.8 ಕ್ಯಾನ್ಸರ್‌ ಪ್ರಕರಣಗಳಿಂದ ಹಿಡಿದು ಉಸ್ಮಾನಾಬಾದ್ ಮತ್ತು ಬೀಡ್‌ ಜಿಲ್ಲೆಗಳಲ್ಲಿ 49.4 ಪ್ರಕರಣಗಳು ದಾಖಲಾಗಿವೆ.

    ಇದನ್ನೂ ಓದಿ: ಈ ಗ್ರಹದಲ್ಲಿದೆ ಶತಶತ ಕೋಟಿ ಬೆಲೆಯ ಚಿನ್ನ, ವಜ್ರ, ಪ್ಲಾಟಿನಂ… ಬೇಟೆಗೆ ಹೊರಟಿದೆ ನಾಸಾ!

    ಯಾವ್ಯಾವ ಕ್ಯಾನ್ಸರ್‌ ಎಷ್ಟೆಷ್ಟು?
    ಯಾವ್ಯಾವ ಕಾರಣಗಳಿಂದ ಕ್ಯಾನ್ಸರ್‌ ಹೆಚ್ಚಿದೆ ಎಂಬ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ. ಇದರ ಪ್ರಕಾರ, ತಂಬಾಕು ಸೇವನೆಯಿಂದ 3.7 ಲಕ್ಷ ಕ್ಯಾನ್ಸರ್‌ ಪ್ರಕರಣಗಳು 2020ರಲ್ಲಿ ದಾಖಲಾಗಲಿವೆ. ಒಟ್ಟು ಕ್ಯಾನ್ಸರ್‌ ಪ್ರಕರಣಗಳ ಪೈಕಿ ಶೇ 27.1ರಷ್ಟು ತಂಬಾಕು ಸೇವೆಯಿಂದ ಉಂಟಾದ ಕ್ಯಾನ್ಸರ್‌ ಆಗಿವೆ.

    ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ನ ಸುಮಾರು 2 ಲಕ್ಷ ಪ್ರಕರಣಗಳು (ಶೇ 14.8), ಗರ್ಭಕಂಠ (ಸೆರ್ವಿಕ್ಸ್‌) ಕ್ಯಾನ್ಸರ್‌ನಿಂದ 0.75 ಲಕ್ಷ ಪ್ರಕರಣಗಳು (ಶೇ 5.4) ಹಾಗೂ ಪರುಷ ಮತ್ತು ಮಹಿಳೆ ಇಬ್ಬರಲ್ಲಿಯೂ ಜೀರ್ಣಾಂಗವ್ಯೂಹದಲ್ಲಿ ( ಗ್ಯಾಸ್ಟ್ರೊಇನ್ಟೆಸ್ಟೈನಲ್‌ ಟ್ರ್ಯಾ‌ಕ್ಟ್) ಕಾಣಿಸಿಕೊಳ್ಳುವ ಕ್ಯಾನ್ಸರ್‌ನ 2.7 ಲಕ್ಷ ಪ್ರಕರಣಗಳು (ಶೇ 19.7)’ ದಾಖಲಾಗಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಕರೊನಾದಿಂದ ಕೆಲಸ ಕಳೆದುಕೊಂಡವರೆಷ್ಟು? ಅಧ್ಯಯನ ವರದಿ ಏನು ಹೇಳಿದೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts