More

    ಶಾಂಘೈ ವೇದಿಕೆಯಲ್ಲಿ ಭಾರತ ಬೆಂಬಲಿಸಿದ ರಷ್ಯಾ: ಪಾಕ್, ಚೀನಾಕ್ಕೆ ಭಾರಿ ಮುಖಭಂಗ

    ನವದೆಹಲಿ: ಇಂದು ನಡೆದಿರುವ ಶಾಂಘೈ ಸಹಕಾರ ಒಕ್ಕೂಟ (ಎಸ್ ಸಿಒ) ಸಭೆಯಲ್ಲಿ ಪಾಕಿಸ್ತಾನವು ಭಾರತದ ವಿಷಯವನ್ನು ಎತ್ತಲು ಮುಂದಾಗುತ್ತಿದ್ದಂತೆಯೇ ಅದಕ್ಕೆ ಭಾರಿ ಮುಖಭಂಗ ಆಗಿರುವ ಘಟನೆ ನಡೆದಿದೆ.

    ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಿಧ ದೇಶಗಳ ಮುಖಂಡರ ಜತೆ ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿ ಪಾಕಿಸ್ತಾನ ಏಕಾಏಕಿ ಭಾರತ ಮತ್ತು ತನ್ನ ನಡುವಿನ ವಿಷಯ ಎತ್ತಲು ಮುಂದಾಯಿತು. ಆಗ ತಕ್ಷಣ ದೆಹಲಿಯಲ್ಲಿರುವ ರಷ್ಯಾದ ಡೆಪ್ಯುಟಿ ರಾಯಭಾರಿ ರೋಮನ್ ಎನ್ ಬಾಬುಷ್ಕಿನ್ ಮಧ್ಯೆ ಪ್ರವೇಶಿಸಿ, ಇದು ಶಾಂಘೈ ಸಹಕಾರ ಸಂಸ್ಥೆ ವೇದಿಕೆ. ಇಲ್ಲಿ ದ್ವಿಪಕ್ಷೀಯ ವಿಚಾರಗಳನ್ನು ಎತ್ತಬಾರದು ಎಂದು ಹೇಳಿದರು.

    ಈ ಮೂಲಕ ಪಾಕಿಸ್ತಾನ ಭಾರಿ ಮುಖಭಂಗ ಅನುಭವಿಸುವಂತಾಗಿದೆ. ಇದರ ಜತೆಗೆ, ಪಾಕಿಸ್ತಾನವು ಭಾರತದ ವಿಷಯ ಪ್ರಸ್ತಾಪಿಸುವುದನ್ನೇ ಕಾಯುತ್ತಿದ್ದ ಚೀನಾದ ಕೆನ್ನೆಗೂ ಹೊಡೆದಂತಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

    ಇಲ್ಲಿ ದ್ವಿಪಕ್ಷೀಯ ವಿಚಾರ ಎಳೆದು ತರುವುದು ನಮ್ಮ ಅಜೆಂಡಾದಲ್ಲಿ ಇಲ್ಲ. ಇದನ್ನು ಎಲ್ಲಾ ಸದಸ್ಯ ರಾಷ್ಟ್ರಗಳು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು ಎಂದು ಸ್ವಲ್ಪ ಖಾರವಾಗಿಯೇ ಹೇಳಿದರು. ಜತೆಗೆ, ಶಾಂಘೈ ಸಹಕಾರ ವೇದಿಕೆಯ ಮುಖ್ಯವಾಗಿ ಪ್ರಾದೇಶಿಕ ಸಮಸ್ಯೆ, ಆರ್ಥಿಕ ಚೇತರಿಕೆ, ಹಣಕಾಸು, ಮಾನವೀಯತೆಯ ಸಹಭಾಗಿತ್ವ ಮುಂತಾದವು ಸೇರಿವೆ. ಈ ನಿಟ್ಟಿನಲ್ಲಿ ಭಾರತ ಮತ್ತು ಪಾಕಿಸ್ತಾನದ ದ್ವಿಪಕ್ಷೀಯ ವಿಚಾರಗಳ ಬಗ್ಗೆ ನಾವು ಮಧ್ಯಪ್ರವೇಶಿಸುವುದಿಲ್ಲ ಎನ್ನುವ ಮೂಲಕ ರಷ್ಯಾ ಸಂಪೂರ್ಣವಾಗಿ ಭಾರತದ ಪರವಾಗಿದೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದರು.

    ಇದನ್ನೂ ಓದಿ: ಮೋದಿ ಸಮರ್ಥ ಆಡಳಿತಕ್ಕೆ ಬಿಹಾರ ಗೆಲುವೇ ಸಾಕ್ಷಿ

    ಪಾಕಿಸ್ತಾನವು ಈ ರೀತಿ ಮಾತನಾಡುತ್ತಲೇ ಪ್ರಧಾನಿ ನರೇಂದ್ರ ಮೋದಿ ಕೂಡಾ ಅಸಮಾಧಾನ ವ್ಯಕ್ತಪಡಿಸಿದರು. ಇಂಥ ಸಭೆಯಲ್ಲಿ ದ್ವಿಪಕ್ಷೀಯ ವಿಚಾರಗಳನ್ನು ಎಳೆದು ತರುವುದು ದುರದೃಷ್ಟಕರ. ಇದು ಈ ವೇದಿಕೆಯ ಉದ್ದೇಶಕ್ಕೆ ವಿರುದ್ಧವಾಗಿದೆ ಎಂದರು.

    ಕಳೆದ ಬಾರಿ ವರ್ಚ್ಯುಯಲ್ ಎಸ್​ಸಿಒ ಸಭೆಯಲ್ಲಿ ಪಾಕಿಸ್ತಾನ ಭಾರತ-ಪಾಕಿಸ್ತಾನದ ದ್ವಿಪಕ್ಷೀಯವನ್ನು ಪ್ರಸ್ತಾಪಿಸಿತ್ತು, ಅಷ್ಟೇ ಅಲ್ಲದೇ ಪಾಕಿಸ್ತಾನದ ಭೂಪಟದಲ್ಲಿ ಕಾಶ್ಮೀರವನ್ನು ಚಿತ್ರಿಸಿದ್ದ ಕಾರಣದಿಂದ ದೇಶದ ಭದ್ರತಾ ಸಲಹೆಗಾರ ಅಜಿತ್ ದೋವಲ್​ ಹೊರನಡೆದಿದ್ದರು.
    ಈಗ ರಷ್ಯಾ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದ್ದು, ಈ ಬಾರಿ ದ್ವಿಪಕ್ಷೀಯ ವಿಷಯಗಳನ್ನು ಪ್ರಸ್ತಾಪಿಸುವುದಕ್ಕೆ ಎಸ್ ಸಿಒ ಸಭೆಯಲ್ಲಿ ಅವಕಾಶವಿಲ್ಲ ಎಂದಿದೆ.

    ಕ್ಲಾಸ್​, ಮಾಸ್​ ಎಲ್ಲದ್ದರಲ್ಲೂ ಬಿಜೆಪಿಗೇ ಜಯ- ಸುರೇಶ್​ ಕುಮಾರ್​

    ನಿರ್ಮಾಪಕ ಅಪ್ಪನ ಫಿಲ್ಮ್​ ಶೂಟಿಂಗ್​​ಗಾಗಿ ಮೇಕೆ ಕಳ್ಳರಾದ ‘ನಟ’ರು!

    ಸುಶಾಂತ್​ ರಜಪೂತ್​ ಜತೆ ನಟಿಸಿದ್ದ ಬಾಲಿವುಡ್​ ನಟ ನೇಣಿಗೆ ಶರಣು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts