More

    ದಾವೂದ್​ಗೆ ಅಲ್ಲಾ ಜನ್ನತ್‌ನಲ್ಲಿ ಅತ್ಯುನ್ನತ ಸ್ಥಾನ ನೀಡಲಿ… ಹೀಗೆ ಪಾಕ್​ ಹಂಗಾಮಿ ಪ್ರಧಾನಿ ಹೇಳಿದ್ದು ನಿಜವೇ?

    ಮುಂಬೈ: “ಮನುಷ್ಯತ್ವದ ರಕ್ಷಕ, ಪ್ರತಿ ಪಾಕಿಸ್ತಾನಿ ಹೃದಯಕ್ಕೆ ಪ್ರಿಯ, ನಮ್ಮ ಪ್ರೀತಿಯ ಹಿಸ್ ಎಕ್ಸಲೆನ್ಸಿ ದಾವೂದ್ ಇಬ್ರಾಹಿಂ ಅಪರಿಚಿತರಿಂದ ವಿಷ ಸೇವಿಸಿ ನಿಧನರಾದರು. ಅವರು ಕರಾಚಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅಲ್ಲಾ ಅವರಿಗೆ ಜನ್ನತ್‌ನಲ್ಲಿ ಅತ್ಯುನ್ನತ ಸ್ಥಾನವನ್ನು ನೀಡಲಿ. ಇನ್ನಾ ಲಿಲ್ಲಾಹಿ ವಾ ಇನ್ನ ಇಲೈಹಿ ರಾಜಿಉನ್.”

    ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ್ ಅವರು ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಸಂದೇಶ ಪೋಸ್ಟ್ ಮಾಡಿದ್ದಾರೆ ಎಂದು ವರದಿಯಾಗಿದೆ.

    ಕರಾಚಿಯಲ್ಲಿ ದಾವೂದ್ ಇಬ್ರಾಹಿಂನ ಸಾವಿನ ಸುದ್ದಿ ಇಂಟರ್​ನೆಟ್​ನಲ್ಲಿ ವ್ಯಾಪಿಸಿದೆ​. ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವ್ಯಾಪಕವಾಗಿ ಪ್ರಸಾರವಾದ ವರದಿಗಳ ಪ್ರಕಾರ, ದಾವೂದನಿಗೆ ವಿಷ ಹಾಕಿದ್ದರಿಂದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಇನ್ನು ಕೆಲವರು ದಾವೂದ್​ ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದ್ದಾರೆ.

    ಕೆಲವು ಬಳಕೆದಾರರು ದಾವೂದ್ ಸತ್ತನೆಂದು ಉಲ್ಲೇಖಿಸಿ, ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ್ ಅವರ ಖಾತೆಯ ಸ್ಕ್ರೀನ್‌ಶಾಟ್‌ಗಳನ್ನು ಸಹ ಪೋಸ್ಟ್ ಮಾಡಿದ್ದಾರೆ. ಆದರೆ, ಹಂಗಾಮಿ ಪ್ರಧಾನಿಯ ಸಂದೇಶವು ನಕಲಿ ಎಂದು ತಿಳಿದುಬಂದಿದೆ, ಹಲವಾರು ಸತ್ಯ-ಪರೀಕ್ಷಕರು ಇದು ಕಾಕರ್ ಅವರ ಖಾತೆಯಲ್ಲ; ದಾವೂದ್ ಸಾವಿನ ಬಗ್ಗೆ ಯಾವುದೇ ದೃಢೀಕರಣವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಸ್ವತಂತ್ರ ಸತ್ಯ-ಪರಿಶೀಲನಾ ವೆಬ್‌ಸೈಟ್ ಆಗಿರುವ DFRAC ಪ್ರಕಾರ, X ನಲ್ಲಿನ ಪೋಸ್ಟ್‌ನಲ್ಲಿ ವೈರಲ್ ಸ್ಕ್ರೀನ್‌ಶಾಟ್‌ನಲ್ಲಿರುವ ಬಳಕೆದಾರರ ಹೆಸರು ಕಾಕರ್ ಅವರ ಅಧಿಕೃತ ಖಾತೆಗೆ ಹೊಂದಿಕೆಯಾಗುವುದಿಲ್ಲ.
    ಸ್ಕ್ರೀನ್‌ಶಾಟ್‌ನಲ್ಲಿನ ಬಳಕೆದಾರರ ಹೆಸರಿನಲ್ಲಿ ಹೆಚ್ಚುವರಿ k ಇದೆ ಎಂದು ಅದು ಹೇಳಿದೆ. ಕಾಕರ್ ಅವರು ಡಿಸೆಂಬರ್ 16 ರಂದು ತಮ್ಮ X ಖಾತೆಯಲ್ಲಿ ಕೊನೆಯ ಪೋಸ್ಟ್ ಹಂಚಿಕೊಂಡಿದ್ದಾರೆ.

    138 ವರ್ಷ ಹಳೆಯ ಭಾರತೀಯ ಟೆಲಿಗ್ರಾಫ್ ಕಾಯ್ದೆ ಬದಲಿಸುವ ದೂರಸಂಪರ್ಕ ಮಸೂದೆ- 2023ರ ವೈಶಿಷ್ಟ್ಯಗಳೇನು

    ಡೊನೇಟ್ ಫಾರ್ ದೇಶ್ ಅಭಿಯಾನ: 138; 1,380; 13,800 ರೂಪಾಯಿ ಏಕೆ ಕಾಂಗ್ರೆಸ್​ ಸಂಗ್ರಹಿಸುತ್ತಿದೆ?

    ಕರಾಚಿ ಆಸ್ಪತ್ರೆಯ ಮಹಡಿ ಸೀಲ್: ಎರಡು ದಿನ ಮೊದಲೇ ಆಸ್ಪತ್ರೆಗೆ ದಾಖಲಾಗಿದ್ದನೇ ದಾವೂದ್ ಇಬ್ರಾಹಿಂ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts