More

    138 ವರ್ಷ ಹಳೆಯ ಭಾರತೀಯ ಟೆಲಿಗ್ರಾಫ್ ಕಾಯ್ದೆ ಬದಲಿಸುವ ದೂರಸಂಪರ್ಕ ಮಸೂದೆ- 2023ರ ವೈಶಿಷ್ಟ್ಯಗಳೇನು

    ನವದೆಹಲಿ: ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಯಾವುದೇ ಅಥವಾ ಎಲ್ಲಾ ದೂರಸಂಪರ್ಕ ಸೇವೆಗಳು ಅಥವಾ ನೆಟ್‌ವರ್ಕ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲು, ನಿರ್ವಹಿಸಲು ಅಥವಾ ಅಮಾನತುಗೊಳಿಸಲು ಸರ್ಕಾರಕ್ಕೆ ಇನ್ನು ಮುಂದೆ ಅಧಿಕಾರ ದೊರೆಯಲಿದೆ. ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾದ ಕರಡು ದೂರಸಂಪರ್ಕ ಮಸೂದೆ- 2023ರ ಪ್ರಕಾರ ಈ ಅಧಿಕಾರ ದೊರೆಯಲಿದೆ. ದೂರಸಂಪರ್ಕ ವಲಯವನ್ನು ನಿಯಂತ್ರಿಸುವ 138 ವರ್ಷಗಳಷ್ಟು ಹಳೆಯದಾದ ಭಾರತೀಯ ಟೆಲಿಗ್ರಾಫ್ ಕಾಯ್ದೆಯನ್ನು ನೂತನ ಮಸೂದೆಯು ಬದಲಿಸುತ್ತದೆ.

    ಕಳೆದ ಆಗಸ್ಟ್‌ನಲ್ಲಿ ಸಚಿವ ಸಂಪುಟವು ಈ ಮಸೂದೆಗೆ ಅನುಮೋದನೆ ನೀಡಿದೆ.

    ಈ ಮಸೂದೆಯು ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸಲು ಟೆಲಿಕಮ್ಯುನಿಕೇಶನ್‌ಗಳ ವ್ಯಾಖ್ಯಾನದಡಿಯಲ್ಲಿ ಇಂಟರ್​ನೆಟ್ ಆಧಾರಿತ ಕರೆ ಮತ್ತು ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳನ್ನು ತರಲು ಪ್ರಸ್ತಾಪಿಸಿದೆ.

    ಈ ಮಸೂದೆಯು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಅಧಿಕಾರ ನಿರ್ಬಂಧಿಸಲು ಪ್ರಸ್ತಾಪಿಸಿದೆ. ಆದರೆ, ಈ ಕುರಿತು ಟೆಲಿಕಾಂ ಉದ್ಯಮದವರು ಆತಂಕ ವ್ಯಕ್ತಪಡಿಸಿದ್ದಾರೆ.

    ಕಂಪನಿಯು ತನ್ನ ಪರವಾನಿಗೆಯನ್ನು ವಾಪಸು ನೀಡಿದರೆ, ನೋಂದಣಿ, ಇತ್ಯಾದಿ ಶುಲ್ಕ ಮರುಪಾವತಿಸಲು ಅವಕಾಶವನ್ನು ಕಲ್ಪಿಸಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

    ಹೊಸ ಮಸೂದೆಯು ಗ್ರಾಹಕರ ಹಿತಾಸಕ್ತಿ, ಮಾರುಕಟ್ಟೆಯಲ್ಲಿ ಸ್ಪರ್ಧೆ, ಟೆಲಿಕಾಂ ನೆಟ್‌ವರ್ಕ್‌ಗಳ ಲಭ್ಯತೆ ಅಥವಾ ನಿರಂತರತೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಪ್ರವೇಶ ಶುಲ್ಕ, ಪರವಾನಗಿ ಶುಲ್ಕ, ದಂಡ ಇತ್ಯಾದಿಗಳನ್ನು ಮನ್ನಾ ಮಾಡುವ ಅಧಿಕಾರವನ್ನು ಸರ್ಕಾರಕ್ಕೆ ನೀಡುತ್ತದೆ.

    ಕರಾಚಿ ಆಸ್ಪತ್ರೆಯ ಮಹಡಿ ಸೀಲ್: ಎರಡು ದಿನ ಮೊದಲೇ ಆಸ್ಪತ್ರೆಗೆ ದಾಖಲಾಗಿದ್ದನೇ ದಾವೂದ್ ಇಬ್ರಾಹಿಂ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts