More

    ಜನವಿರೋಧಿ ಕಾಯ್ದೆಗಳನ್ನು ಹಿಂಪಡೆಯಲಿ

    ಜನವಿರೋಧಿ, ಕಾಯ್ದೆ, ಸಿಂಧನೂರು, ಪ್ರಜಾಪ್ರಭುತ್ವ, ವ್ಯವಸ್ಥೆ, ಸಂವಿಧಾನ, ಆಶಯ, ಮಾರಕ, ಕಾರ್ಪೋರೇಟ್, ಸಿಪಿಐ(ಎಂಎಲ್) ಲಿಬರೇಷನ್, anti-people, act, sindhnur, democracy, system, constitution, wish, deadly, corporate, cpi(ml) liberation,

    ಸಿಂಧನೂರು: ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನದ ಆಶಯಗಳಿಗೆ ಮಾರಕವಾಗಿರುವ ಕಾರ್ಪೋರೇಟ್ ಮತ್ತು ಕೋಮುವಾದಿ ಶಕ್ತಿಗಳನ್ನು ವಿರೋಧಿಸುವ ಕೆಲಸವಾಗಬೇಕೆಂದು ಸಿಪಿಐ(ಎಂಎಲ್) ಲಿಬರೇಷನ್ ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ್ ಹೇಳಿದರು.
    ನಗರದಲ್ಲಿ ಸಿಪಿಐ(ಎಂಎಲ್) ಲಿಬರೇಷನ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆಗಳನ್ನಷ್ಟೇ ಜಾರಿಗೆ ತಂದಿದೆ. ಆದರೆ, ಬಿಜೆಪಿ ಸರ್ಕಾರದ ಆಡಳಿತದಲ್ಲಿ ಅನುಷ್ಠಾನಗೊಳಿಸಿದ ಹಲವಾರು ಜನವಿರೋಧಿ ಕಾನೂನುಗಳನ್ನು ಇನ್ನೂ ಹಿಂಪಡೆದಿಲ್ಲ ಎಂದು ದೂರಿದರು.
    ಕೋಮುವಾದ, ರಾಜಕೀಯ ವಿಭಜಕ ಕುತಂತ್ರಗಳಿಂದಾಗಿ ರಾಜ್ಯದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭಾರಿ ಗೆಲುವು ಪಡೆದಿತ್ತು. 2024ರ ಚುನಾವಣೆಯಲ್ಲಿ ಜನವಿರೋಧಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕೆಂದು ನಾಗರಾಜ ಪೂಜಾರ್ ಕರೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts