More

    ವೈರಸ್​ ಬಗ್ಗೆ 2015ರಲ್ಲೇ ಎಚ್ಚರಿಸಿದ್ದ ಬಿಲ್​ಗೇಟ್ಸ್​ ಕರೊನಾ ಕುರಿತು ಹೇಳಿದ್ದಾರೆ ಮತ್ತೊಂದು ಆತಂಕದ ವಿಷಯ

    ವಾಷಿಂಗ್ಟನ್‌: ಶೀಘ್ರದಲ್ಲಿಯೇ ವಿಶ್ವದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಲಿದೆ ಎಂದು 2015ರಲ್ಲಿ ಎಚ್ಚರಿಸಿದ್ದರು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್. ಅದರಂತೆಯೇ ಕರೊನಾ ವೈರಸ್​ ಜಗತ್ತನ್ನೇ ಆವರಿಸಿ ಲಕ್ಷಾಂತರ ಬಲಿ ಪಡೆದಿದೆ.

    ಕರೊನಾ ಲಸಿಕೆ ಸಂಶೋಧಿಸಿ ಅದನ್ನು ಇಡೀ ಜಗತ್ತಿಗೆ ರವಾನೆ ಮಾಡುವ ಶಕ್ತಿ ಭಾರತಕ್ಕಿದೆ ಎಂದೂ ಹಿಂದೊಮ್ಮೆ ಬಿಲ್​ ಗೇಟ್ಸ್​ ಹೇಳಿದ್ದರು. ಭಾರತದ ವೈದ್ಯಕೀಯ ಕ್ಷೇತ್ರದ ತಾಕತ್ತು ಅಗಾಧವಾಗಿದ್ದು, ಅದು ಕರೊನಾ ವೈರಸ್ ಲಸಿಕೆಯನ್ನು ಸಂಶೋಧಿಸುವುದು ಮಾತ್ರವಲ್ಲದೇ ಲಸಿಕೆಯನ್ನು ಇಡೀ ವಿಶ್ವಕ್ಕೆ ರವಾನಿಸುವ ಶಕ್ತಿ ಹೊಂದಿದೆ ಎಂದಿದ್ದರು. ಅದರಂತೆಯೇ ಭಾರತ ಕೂಡ ಈ ಸಾಧನೆಯನ್ನು ಮಾಡಿ ತೋರಿಸುತ್ತಿದೆ.

    ಇವೆಲ್ಲಾ ಭವಿಷ್ಯ ನುಡಿದಿದ್ದ ಬಿಲ್​ ಗೇಟ್ಸ್​ ಅವರು ಕರೊನಾ ವೈರಸ್​ ಕುರಿತಂತೆ ಆತಂಕದ ವಿಷಯವನ್ನು ಹೊರಹಾಕಿದ್ದಾರೆ. ಅದೇನೆಂದರೆ ಮುಂದಿನ ನಾಲ್ಕರಿಂದ ಆರು ತಿಂಗಳಲ್ಲಿ ಕರೊನಾ ಇನ್ನಷ್ಟು ಹೆಚ್ಚಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

    ಬಿಲ್‌ ಗೇಟ್ಸ್‌ ಅವರ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್‌, ಕೋವಿಡ್‌ ಲಸಿಕೆ ತಯಾರಿಸುವ ಕಾರ್ಯದಲ್ಲಿ ಭಾಗಿಯಾಗಿದ್ದು, ಇದೀಗ ಇಂಥದ್ದೊಂದು ಎಚ್ಚರಿಕೆ ಹಾಗೂ ಆತಂಕದ ವಿಷಯವನ್ನು ಅವರು ಬಹಿರಂಗಪಡಿಸಿದ್ದಾರೆ. ಇದಾಗಲೇ ಕೆಲ ವಾರಗಳಿಂದ ಅಮೆರಿಕದಲ್ಲಿ ಸೋಂಕು ತೀವ್ರವಾಗಿದ್ದು ,ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೆ ಸಾವು ಸೇರಿದಂತೆ ಸೋಂಕಿನಿಂದಾಗಿ ಆಸ್ಪತ್ರೆಗೆ ಸೇರುವವರ ಸಂಖ್ಯೆಯಲ್ಲಿಯೂ ಏರಿಕೆಯಾಗುತ್ತಿದೆ.

    ಈ ಕುರಿತು ಮಾತನಾಡಿರುವ ಬಿಲ್​ ಗೇಟ್ಸ್​ ಅವರು, ಜಗತ್ತಿನಲ್ಲಿ ಸಾವು ಹೆಚ್ಚಾಗಲಿದೆ ಎಂದು ‘2015ರಲ್ಲಿ ನಾನು ಹೇಳಿದ್ದೆ. ವೈರಸ್‌ ಇನ್ನಷ್ಟು ಜೀವಗಳನ್ನು ಬಲಿ ಪಡೆಯುವ ಸಾಧ್ಯತೆ ಇದೆ. ನಾವು ಲೆಕ್ಕಾಚಾರ ಹಾಕಿದಷ್ಟು ಹಂತ ಇನ್ನೂ ತಲುಪಿಲ್ಲ. ನಾನು ಐದು ವರ್ಷಗಳ ಹಿಂದೆ ಊಹಿಸಿದಕ್ಕಿಂತ ಹೆಚ್ಚಾಗಿ ಸೋಂಕು ಅಮೆರಿಕ ಮತ್ತು ಜಗತ್ತಿನ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಇದು ನನಗೆ ಆಶ್ಚರ್ಯವನ್ನುಂಟು ಮಾಡಿದೆ. ಆದರೆ ಇಂದಿನ ಸ್ಥಿತಿ ಅವಲೋಕಿಸಿದರೆ ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಇನ್ನೂ ಭೀಕರ ದಿನಗಳು ಬರಲಿವೆ ಎಂದು ಅವರು ಹೇಳಿದ್ದಾರೆ.

    ನಾವು ಕೋವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸದಿದ್ದಲಿ ಹೆಚ್ಚುವರಿವಾಗಿ 2 ಲಕ್ಷಕ್ಕಿಂತ ಹೆಚ್ಚು ಜನರು ಸಾವಿಗೀಡಾಗಲಿದ್ದಾರೆ ಎಂದು ಇನ್ಸ್‌ಸ್ಟಿಟ್ಯೂಟ್‌ ಆಫ್‌ ಹೆಲ್ತ್‌ ಮೆಟ್ರಿಕ್ಸ್‌ ಎವಲ್ಯೂಷನ್‌ (ಐಎಚ್‌ಎಂಇ) ಎಚ್ಚರಿಸಿದೆ. ನಿಯಮಗಳನ್ನು ಪಾಲಿಸುವ ಮೂಲಕ ಇದನ್ನು ತಪ್ಪಿಸಬಹುದು’ ಎಂದು ಅವರು ಹೇಳಿದರು.

    ಅಮೆರಿಕವು ಈ ವೈರಸ್​ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಬಲ್ಲುದು ಎಂಬ ತಮ್ಮ ಲೆಕ್ಕಾಚಾರ ತಪ್ಪಿದೆ ಎಂದು ಬಿಲ್​ ಗೇಟ್ಸ್​ ಹೇಳಿದ್ದಾರೆ. ‘ಅಮೆರಿಕವು ಇಂತಹ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಬಹುದು ಎಂದು ನಾನು ಭಾವಿಸಿದ್ದೆ. ಆದರೆ ಇಂದಿನ ಸ್ಥಿತಿ ನೋಡಿದರೆ ನನಗೆ ಅಚ್ಚರಿಯಾಗುತ್ತದೆ ಎಂದಿದ್ದಾರೆ.

    ರಾಜಸ್ಥಾನ ಚುನಾವಣೆ: ಅಲ್ಲಿ ಸೋತವರು, ಇಲ್ಲಿ ಗೆದ್ದರು- ಅಲ್ಲಿ ಗೆದ್ದವರು ಮೂರನೇ ಸ್ಥಾನಕ್ಕಿಳಿದರು!

    ತೆಂಗಿನಕಾಯಿ ಕೀಳಲು 55 ಅಡಿ ಮರವೇರಿದ, ಗಂಟೆ ಕಳೆದರೂ ಏರಿದವನ ಪತ್ತೆಯೇ ಇಲ್ಲ; ಆಗಿದ್ದೇನು?

    ಪತ್ನಿ ಒಳ್ಳೆಯವಳು, ಆದರೆ ಪುರುಷರ ಬಳಿ ಮಾತನಾಡಿದರೆ ಕಿರಿಕಿರಿಯಾಗುತ್ತದೆ- ಈ ಸಂಶಯಕ್ಕೆ ಪರಿಹಾರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts