More

    ಬೆಂಗಳೂರು ಲೈಫ್ ಇನ್ನಷ್ಟು ಆಗಲಿದೆ ದುಬಾರಿ: ವಿದ್ಯುತ್‌ ಬಿಲ್‌ ಮೂಲಕ ಕಸದ ಸೆಸ್‌ ಸಂಗ್ರಹ!

    ಬೆಂಗಳೂರು: ಬೆಂಗಳೂರು ಬದುಕು ದುಬಾರಿಯಾಗಲು ಕಾರಣವಾಗಲಿದೆ. ಇದಕ್ಕೆ ಕಾರಣ ಕಸ. ವಿದ್ಯುತ್ ಬಿಲ್‌ ಮೂಲಕ ಕಸ‌ ನಿರ್ವಹಣೆ ಸೆಸ್ ಸಂಗ್ರಹಕ್ಕೆ ಬಿಬಿಎಂಪಿ‌ ನಿರ್ಧಾರ ಮಾಡಿದೆ.

    ವಿದ್ಯುತ್ ಬಿಲ್ ಗೆ ಅನುಗುಣವಾಗಿ ಕಸ ನಿರ್ವಹಣಾ ಸೆಸ್ ಸಂಗ್ರಹಕ್ಕೆ ಅನುಮತಿ ಕೋರಿ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ.

    2011ರಿಂದ ಆಸ್ತಿ ತೆರಿಗೆ ಮೇಲೆ‌ ಶೇ. 19 ರಷ್ಟು ಸೆಸ್ ಸಂಗ್ರಹಿಸಲಾಗುತಿತ್ತು. ಆದರೆ ಇದು ಕಸ‌ ನಿರ್ವಹಣಾ ವೆಚ್ಚದ ಶೇ. 15 ರಷ್ಟು ಸಂಗ್ರಹಣೆಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯುತ್ ಬಿಲ್‌ ಮೂಲಕ ಪ್ರತಿ ತಿಂಗಳು ಸಂಗ್ರಹಿಸಲು‌ ನಿರ್ಧಾರ ಮಾಡಲಗಿದೆ.

    ಕಸ‌ನಿರ್ವಹಣಾ ಸೆಸ್ ಸಂಗ್ರಹಕ್ಕೆ ಬೆಸ್ಕಾಂ‌ ನೆರವು ಕೋರಲು‌ ನಿರ್ಧರಿಸಲಾಗಿದೆ. ಬಿಬಿಎಂಪಿ ಆಡಳಿತಗಾರರಿಗೆ ಬಿಬಿಎಂಪಿ ಮುಖ್ಯ ಆಯುಕ್ತರಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆ.

    ಗೃಹ ತ್ಯಾಜ್ಯ ಉತ್ಪಾದಕರಿಗೆ ವಿದ್ಯುತ್ ಬಿಲ್ ಆಧರಿಸಿ ಪ್ರಸ್ತಾಪಿಸಿರುವ ಸೆಸ್ ವಿವರ ಹೀಗಿದೆ..

    ವಿದ್ಯುತ್ ಬಿಲ್ – ಕಸ ಸೆಸ್
    200 ರೂ. ವರೆಗೆ – 30 ರೂ.
    200-500 ರೂ – 60 ರೂ.
    500 – 1000 ರೂ – 100 ರೂ.
    1001 – 2000 ರೂ – 200 ರೂ.
    2001 – 3000 ರೂ – 350 ರೂ.
    3000 ರೂ.ಗಿಂತ ಹೆಚ್ಚು – 500 ರೂ.

    ಈ ರೀತಿ ಮಾಸಿಕ ಸೆಸ್ ಸಂಗ್ರಹದ‌ ಮೂಲಕ 48.76 ಕೋಟಿ ರೂ. ಸಂಗ್ರಹದ ಅಂದಾಜು

    ವಾಣಿಜ್ಯ ತ್ಯಾಜ್ಯ ಉತ್ಪಾದಕರು (ಬೃಹತ್ ತ್ಯಾಜ್ಯ ಉತ್ಪಾದಕರನ್ನು ಹೊರತುಪಡಿಸಿ) ಪ್ರಸ್ತಾಪಿಸಿರುವ ಸೆಸ್ ವಿವರ ಹೀಗಿದೆ

    ವಿದ್ಯುತ್ ಬಿಲ್ – ಕಸ ಸೆಸ್
    200 ರೂ. ವರೆಗೆ – 75ರೂ.
    200-500 ರೂ – 150 ರೂ.
    500 – 1000 ರೂ – 300 ರೂ.
    1001 – 2000 ರೂ – 600 ರೂ.
    2001 – 3000 ರೂ – 800 ರೂ.
    3000 ರೂ.ಗಿಂತ ಹೆಚ್ಚು – 1200 ರೂ.

    ಈ ರೀತಿ ಮಾಸಿಕ ಸೆಸ್ ಸಂಗ್ರಹದ‌ ಮೂಲಕ ವಾಣಿಜ್ಯ ತ್ಯಾಜ್ಯ ಉತ್ಪಾದಕರಿಂದ 23.93 ಕೋಟಿ ರೂ. ಸಂಗ್ರಹದ ಅಂದಾಜು ಮಾಡಲಾಗಿದೆ. ವಾರ್ಷಿಕ ಗೃಹ ತ್ಯಾಜ್ಯ ಉತ್ಪಾದಕರಿಂದ 585.17 ಕೋಟಿ ರೂ. ಸಂಗ್ರಹವಾಗಲಿದೆ. ವಾಣಿಜ್ಯ ತ್ಯಾಜ್ಯ ಉತ್ಪಾದಕರಿಂದ 287.22 ಕೋಟಿ ರೂ. ಸಂಗ್ರಹವಾಗಲಿದೆ.

    ವಿದ್ಯುತ್ ಬಿಲ್ ಆಧಾರಿತ ಸೆಸ್ ಸಂಗ್ರಹದಿಂದ ವಾರ್ಷಿಕ ಒಟ್ಟಾರೆ 870.40 ಕೋಟಿ ರೂ. ಸಂಗ್ರಹ‌ ನಿರೀಕ್ಷಿಸಲಾಗಿದೆ. ಪ್ರಸ್ತುತ ಬಿಬಿಎಂಪಿ ವಾರ್ಷಿಕ ವೆಚ್ಚ ಮಾಡುತ್ತಿರುವ 1500 ಕೋಟಿ ಹಣದಲ್ಲಿ ಅರ್ಧಕ್ಕೂ ಹೆಚ್ಚು ಹಣ ಸೆಸ್ ನಿಂದಗ್ರಹವಾಗಲಿದೆ. ಆದರೆ, ಈಗಾಗಲೇ‌ ಬೆಲೆ ಏರಿಕೆಯಿಂದ ದುಬಾರಿಯಾಗಿರೋ ಬೆಂಗಳೂರು ಬದುಕು ಇನ್ನಷ್ಟು ದುಬಾರಿಯಾಗಲಿದೆ.

    ವಿವಾದಕ್ಕೆ ಕಾರಣವಾಗಿದ್ದ ಜಿನ್ನಾ ಟವರ್‌ಗೆ ಕೇಸರಿ, ಬಿಳಿ, ಹಸಿರು ಬಣ್ಣ- ಶಾಸಕ ಮುಸ್ತಫಾರಿಂದಲೇ ಪೇಟಿಂಗ್

    ಕಣ್ಣು, ಕೈ ಕಟ್ಟಿದರು, ವಿದ್ಯುತ್‌ ಶಾಕ್‌ ಕೊಟ್ಟರು, ಚಿತ್ರಹಿಂಸೆ ನೀಡಿದರು: ಚೀನಾ ಸೈನಿಕರ ಕ್ರೌರ್ಯ ಬಿಚ್ಚಿಟ್ಟ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts