More

    ಕಣ್ಣು, ಕೈ ಕಟ್ಟಿದರು, ವಿದ್ಯುತ್‌ ಶಾಕ್‌ ಕೊಟ್ಟರು, ಚಿತ್ರಹಿಂಸೆ ನೀಡಿದರು: ಚೀನಾ ಸೈನಿಕರ ಕ್ರೌರ್ಯ ಬಿಚ್ಚಿಟ್ಟ ಯುವಕ

    ಮಿಜೋರಾಂ: ಬೇಟೆಯಾಡುತ್ತಿರುವ ಅಚಾನಕ್‌ ಆಗಿ ಚೀನಾದ ಗಡಿಯನ್ನು ದಾಟಿಬಿಟ್ಟ ಅರುಣಾಚಲ ಪ್ರದೇಶದ 18 ವರ್ಷದ ಯುವಕ ಭಾರತದ ಸೇನೆಯ ಸತತ ಪ್ರಯತ್ನದಿಂದಾಗಿ ಕೊನೆಗೂ ತಾಯ್ನಾಡಿಗೆ ಜೀವಂತವಾಗಿ ಮರಳಿದ್ದಾನೆ.

    ಮಿರಾಮ್ ಟ್ಯಾರೋನ್ ಎಂಬ ಯುವಕ ತನಗೆ ಚೀನಾದ ಸೈನಿಕರು ನೀಡಿದ್ದ ಚಿತ್ರಹಿಂಸೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.

    ನಾನು ಮತ್ತು ನನ್ನ ಸ್ನೇಹಿತರು ಬೇಟೆಯಾಡುತ್ತ ಕಾಡಿನೊಳಕ್ಕೆ ಹೋದೆವು. ಆಗ ನನ್ನನ್ನು ಚೀನಾ ಚೀನಾ ಪೀಪಲ್ಸ್​ ಲಿಬರೇಶನ್​ ಆರ್ಮಿ (ಪಿಎಲ್ಎ) ಸೈನಿಕರು ಬಂಧಿಸಿದರು. ಅವರು ಯಾರೆಂದು ಆರಂಭದಲ್ಲಿ ತಿಳಿಯಲಿಲ್ಲ. ತುಂಬಾ ಕತ್ತಲಿತ್ತು. ನಂತರ ಅವರು ಚೀನಾ ಸೈನಿಕರು ಎಂಬುದು ತಿಳಿಯಿತು. ನಾವು ಅಚಾನಕ್‌ ಆಗಿ ಬಂದಿರುವುದಾಗಿ ಹೇಳಿದರೂ ಅವರು ಕೇಳಲಿಲ್ಲ. ನನ್ನ ಕೈ, ಕಣ್ಣು ಕಟ್ಟಿದರು. ತಲೆಗೆ ಬಟ್ಟೆಯಿಂದ ಮುಚ್ಚಿದ್ದರು. ನಂತರ ಚೈನೀಸ್ ಆರ್ಮಿ ಕ್ಯಾಂಪ್​ಗೆ ಕರೆದುಕೊಂಡು ಹೋಗಿ ಚಿತ್ರ ಹಿಂಸೆ ನೀಡಿದರು. ಊಟ, ನೀರು ಕೊಟ್ಟರು ಆದರೆ ಹಿಂಸೆ ಮಾತ್ರ ವಿಪರೀತ ನೀಡಿದರು’ ಎಂದು ಯುವಕ ಹೇಳಿದ್ದಾನೆ.

    ಮಿರಾಮ್​ ಟ್ಯಾರೋನ್ ಜನವರಿ 18ರಂದು ನಾಪತ್ತೆಯಾಗಿದ್ದ. ಅರುಣಾಚಲ ಪ್ರದೇಶ ಬಿಜೆಪಿ ಸಂಸದ ತಪೀರ್​ ಗಾವೋ ಈ ಬಗ್ಗೆ ಕೇಂದ್ರದ ಗಮನಕ್ಕೆ ತಂದರು. ಚೀನಾ ಸೈನಿಕರು ಆತನನ್ನು ಅಪಹರಿಸಿದ್ದಾರೆ ಎಂದಿದ್ದರು. ನಂತರ ಭಾರತೀಯ ಸೇನೆ ಚುರುಕಾಗಿ ಕೆಲಸ ಮಾಡಿತ್ತು. ಚೀನಾ ಆರ್ಮಿಗೆ ವಿಷಯ ತಿಳಿಸಿ, ಮಿರಾಮ್​ ಬಗ್ಗೆ ವಿಚಾರಿಸಿತ್ತು. 9 ದಿನಗಳ ನಿರಂತರ ಚೀನಾ ಸೇನೆ ಮಿರಾಮ್​ನನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದೆ. ಜನವರಿ 27ರಂದು ಎಲ್ಲ ರೀತಿಯ ಪ್ರಕ್ರಿಯೆಗಳೂ ಮುಗಿದು ಮಿರಾಮ್​ ಭಾರತ ಸೇರಿಕೊಂಡಿದ್ದಾನೆ.

    ಗುಟ್ಟಾಗಿ ಕಾಲ್‌ ಮಾಡ್ತಾರೆ, ಕೂಡ್ಲೇ ನಂಬರ್‌ ಮಾಯ ಆಗತ್ತೆ! ಕೇಳಿದ್ರೆ ಸಂಶಯದ ಪಿಶಾಚಿ ಅಂತಾರೆ… ಏನ್‌ ಮಾಡ್ಲಿ ಮೇಡಂ?

    ಇವತ್ತು ನಿನಗೆ ಶಾಂತಿ, ನೆಮ್ಮದಿ ಸಿಗಲಿ- ಆತ್ಮಹತ್ಯೆಗೂ ಮುನ್ನ ‘ಅಮೆರಿಕ ಸುಂದರಿ’ಯ ಪೋಸ್ಟ್‌ ವೈರಲ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts