More

    VIDEO: ಸ್ಟಾಪ್‌ ಇಟ್‌ ಡ್ಯಾಡ್‌.. ಮರ್ಯಾದೆ ಹೋಗ್ತಿದೆ- ಅಪ್ಪನ ಫೋಟೋ ಹುಚ್ಚಿಗೆ ಆರ್ಯನ್‌ ಖಾನ್‌ ಸ್ನೇಹಿತ ಸುಸ್ತು!

    ಮುಂಬೈ: ಕಳೆದ ಎರಡು ತಿಂಗಳಿನಿಂದ ದೇಶದಲ್ಲಿ ಭಾರಿ ಸುದ್ದಿಯಲ್ಲಿರುವುದು ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ನ ಡ್ರಗ್ಸ್‌ ಕೇಸ್‌. ಅಂತೂ ಇಂತೂ ಜಾಮೀನು ಪಡೆದು ಆರ್ಯನ್‌ ಖಾನ್‌ ಜತೆ ಈ ಕೇಸ್‌ನಲ್ಲಿ ಸಿಕ್ಕಿಬಿದ್ದ ಆರೋಪಿಗಳು ಹೊರಕ್ಕೆ ಬಂದಿದ್ದಾರೆ.

    ಜಾಮೀನು ನೀಡುವ ಸಂದರ್ಭದಲ್ಲಿ ವಿಧಿಸಲಾಗಿರುವ ಷರತ್ತುಗಳ ಪೈಕಿ, ಆಗಾಗ್ಗೆ ವಿಚಾರಣೆಗೆ ಬಂದು ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು ಎಂಬುದು. ಅದೇ ರೀತಿ, ಆರ್ಯನ್‌ ಖಾನ್‌ ಸ್ನೇಹಿತ ಅರ್ಬಾಜ್‌ ಖಾನ್‌ ತನ್ನ ತಂದೆ ಅಸ್ಲಾಮ್ ಮರ್ಚೆಂಟ್‌ರನ್ನು ಕರೆದುಕೊಂಡು ಎನ್‌ಸಿಬಿ ಆಫೀಸ್‌ಗೆ ಬಂದಿದ್ದಾನೆ.

    ಈ ವೇಳೆ ಮಾಧ್ಯಮದವರು ಸುಮ್ಮನೆ ಬಿಟ್ಟಾರೆಯೇ? ಅರ್ಬಾಜ್‌ನ ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದಾರೆ. ತಾನು ಮಾಡಿರುವ ಕಾರ್ಯಕ್ಕೆ ಇದಾಗಲೇ ಕುಗ್ಗಿಹೋಗಿ ಸ್ನೇಹಿತರು, ಪರಿಚಯಸ್ಥರು, ನೆಂಟರಿಷ್ಟರ ಮುಂದೆ ಮರ್ಯಾದೆ ಕಳೆದುಕೊಂಡಿರುವ ಅರ್ಬಾಜ್‌ ಖಾನ್‌, ಈ ಫೋಟೋದಲ್ಲಿ ತನ್ನ ಮುಖ ಕಾಣಿಸದಂತೆ ಮಾಡಲು ಮುಖವನ್ನು ಮರೆಮಾಚಲು ಹರಸಾಹಸ ಪಡುತ್ತಿದ್ದ. ಆದರೆ ಅವನ ಅಪ್ಪನಿಗೆ ತಾನು ಬಂದಿರುವುದು ಎನ್‌ಸಿಬಿ ಮುಂದೆ, ಇಲ್ಲಿ ತಮ್ಮ ಮಗ ಆರೋಪಿ ಎಂಬುದು ನೆನಪೇ ಇಲ್ಲದಂತೆ, ಫೋಟೋಗೆ ಪೋಸ್‌ ಕೊಡಲು ಮುಂದಾಗಿದ್ದಾರೆ.

    ಸಾಲದು ಎಂಬುದಕ್ಕೆ ನೀನೂ ಪೋಸ್‌ ಕೊಡು ಎಂದು ಮಗನನ್ನು ಪುಸಲಾಯಿಸಿದ್ದಾರೆ. ಅಪ್ಪನ ಈ ವರ್ತನೆಗೆ ಸಿಟ್ಟಿಗೆದ್ದ ಅರ್ಬಾಜ್‌ ಖಾನ್‌, ಡ್ಯಾಡಿ ಸ್ಟಾಪ್‌ ಇಟ್‌, ನನ್ನ ಮರ್ಯಾದೆ ಹೋಗ್ತಿದೆ, ನಿನಗೆ ಫೋಟೋ ಹುಚ್ಚು ಎಂದು ಮುಖ ಮುಚ್ಚಿಕೊಂಡಿದ್ದಾನೆ. ಆದರೆ ಅಪ್ಪ ಮಾತ್ರ ಫೋಟೋಗೆ ನಗುನಗುತ್ತಾ ಪೋಸ್‌ ಕೊಟ್ಟಿದ್ದಾರೆ.

    ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಈ ಫೋಟೋ ನೋಡಿದರೆ ಅಲ್ಲಿ ಏನು ನಡೆದಿದೆ ಎಂಬುದನ್ನು ಯಾರು ಬೇಕಾದರೂ ಊಹಿಸಿಕೊಳ್ಳುವಂತಿದೆ. ಮಗ ಮುಖಮುಚ್ಚಿಕೊಂಡಿದ್ದರೆ, ಅಪ್ಪ ನಗುಮುಖದಿಂದ ಪೋಸ್‌ ಕೊಟ್ಟಿರುವುದನ್ನು ಕಾಣಬಹುದು.

    ಗೋವಾಕ್ಕೆ ಹೋಗುವ ಕ್ರೂಸ್ ಹಡಗಿನಲ್ಲಿ ರೇವ್ ಪಾರ್ಟಿಯ ಮೇಲೆ ದಾಳಿ ನಡೆಸಿದ ನಂತರ ಕಳೆದ ಅಕ್ಟೋಬರ್ 3 ರಂದು, ಆರ್ಯನ್, ಅರ್ಬಾಜ್ ಮತ್ತು ಆರು ಮಂದಿಯನ್ನು ಬಂಧಿಸಲಾಗಿತ್ತು. ಇವರಿಗೆ ಬಾಂಬೆ ಹೈಕೋರ್ಟ್‌ನಿಂದ ತಲಾ 1 ಲಕ್ಷ ವೈಯಕ್ತಿಕ ಬಾಂಡ್‌ ಪಡೆದು ಜಾಮೀನು ನೀಡಿದ್ದು, ಕೆಲವೊಂದು ಷರತ್ತು ವಿಧಿಸಿದೆ.

    ಅಪ್ಪನ ಫೋಟೋ ಹುಚ್ಚು, ಮಗನ ಪರದಾಟದ ವಿಡಿಯೋ ಇಲ್ಲಿದೆ ನೋಡಿ…

     

    View this post on Instagram

     

    A post shared by Varinder Chawla (@varindertchawla)

    ತಾಯಿಯ ಅಕ್ಕನ ಮಗನನ್ನು ಪ್ರೀತಿಸುತ್ತಿರುವೆ- ಮದುವೆಯಾದರೆ ಕಾನೂನಿನಡಿ ಅಪರಾಧವಾಗುತ್ತದೆಯೆ?

    ಡ್ಯೂಟಿ ನೆಪದಲ್ಲಿ ವಿವಾಹಿತೆ ಜತೆ ಸಬ್​​​ಇನ್ಸ್​​ಪೆಕ್ಟರ್ ಲವ್ವಿಡವ್ವಿ… ಊರಿಗೆ ಹೋಗ್ತೇನೆಂದು ಬಲೆಬೀಸಿದ ಗಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts