More

    ಅಮ್ಮನ ಬರ್ತ್‌ಡೇ ಸಿಗ್ಲಿಲ್ಲ, ವಿವಾಹ ವಾರ್ಷಿಕೋತ್ಸವಕ್ಕಾದ್ರೂ ವಿಷ್‌ ಮಾಡಲು ಕೊಡಿ ಪ್ಲೀಸ್‌… ಆರ್ಯನ್‌ ಗೋಳು

    ಮುಂಬೈ: ಡ್ರಗ್ಸ್‌ ಕೇಸ್‌ನಲ್ಲಿ ಜೈಲುಪಾಲಾಗಿರುವ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಇದಾಗಲೇ ತನ್ನ ತಾಯಿ ಗೌರಿ ಖಾನ್‌ ಅವರ ಹುಟ್ಟುಹಬ್ಬವನ್ನು ಮಿಸ್‌ ಮಾಡಿಕೊಂಡಿದ್ದಾನೆ. ಇದೇ 8ರಂದು ಗೌರಿ ಅವರ ಹುಟ್ಟುಹಬ್ಬವಿತ್ತು. ಅದರೆ ಜೈಲಿನಲ್ಲಿ ಇದ್ದುದರಿಂದ ಆರ್ಯನ್‌ಗೆ ವಿಷ್‌ ಮಾಡಲು ಸಾಧ್ಯವಾಗಲಿಲ್ಲ.

    ಆದರೆ ಇದೀಗ ಶಾರುಖ್‌ ಮತ್ತು ಗೌರಿ ಅವರ ವಿವಾಹ ವಾರ್ಷಿಕೋತ್ಸವ ಇದ್ದು, ಕೊನೆಯ ಪಕ್ಷ ಇದಕ್ಕಾದರೂ ವಿಷ್‌ ಮಾಡಲು ವಿಡಿಯೋ ಕಾಲ್‌ಗೆ ಅವಕಾಶ ಕೊಡಿ ಎಂದು ಜೈಲು ಅಧಿಕಾರಿಗಳಿಗೆ ಆರ್ಯನ್‌ ದುಂಬಾಲು ಬಿದ್ದಿದ್ದ ಎನ್ನಲಾಗಿದೆ. ಸೋಮವಾರ (ಅ.25) ಇವರ 30ನೇ ವಿವಾಹ ವಾರ್ಷಿಕೋತ್ಸವ. ಪ್ರತಿವರ್ಷ ಭರ್ಜರಿಯಾಗಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಾ, ಸಕತ್‌ ಪಾರ್ಟಿ,
    ಎನ್‌ಜಾಯ್‌ ಮಾಡುತ್ತಿದ್ದ ಶಾರುಖ್‌ ಪುತ್ರನಿಗೆ ಈಗ ಸಂಕಷ್ಟ ಎದುರಾಗಿದೆ.

    ಆದರೆ ಈ ರೀತಿ ವಿಡಿಯೋ ಕಾಲ್‌ ಮಾಡಲು ಅವಕಾಶ ಇಲ್ಲದೇ ಇರುವ ಹಿನ್ನೆಲೆಯಲ್ಲಿ ಅವಕಾಶ ಕಲ್ಪಿಸಲಿಲ್ಲ ಎನ್ನಲಾಗಿದೆ.

    ಈ ನಡುವೆ, ಈತ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್‌ ಮುಂದೆ ಬರುವ ಸಾಧ್ಯತೆ ಇದೆ. ಮುಂಬೈನ ವಿಶೇಷ ಎನ್​ಡಿಪಿಎಸ್​ ನ್ಯಾಯಾಲಯದಲ್ಲಿ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಆರ್ಯನ್‌ ಖಾನ್‌ ಪರವಾಗಿ ಮಾಜಿ ಅಟಾರ್ನಿ ಜನರಲ್‌ ಆಗಿರುವ ಮುಖುಲ್‌ ರೋಹಟಗಿ ಅವರು ವಾದ ಮಂಡಿಸಲಿದ್ದಾರೆ.

    ಜಾಮೀನು ಸಿಕ್ಕಿಲ್ಲ, ಯಾರೂ ಕೈಹಿಡಿದಿಲ್ಲ: ಜೈಲಲ್ಲಿ ಶ್ರೀರಾಮನ ಮೊರೆ ಹೋದ ಶಾರುಖ್‌ ಪುತ್ರ

    ಸ್ನಾನನೂ ಮಾಡ್ತಿಲ್ಲ, ಶೌಚಕ್ಕೂ ಹೋಗ್ತಿಲ್ಲ- ಅಧಿಕಾರಿಗಳಿಗೆ ತಲೆನೋವು ತಂದ ಶಾರುಖ್‌ ಪುತ್ರ

    ಶಾರುಖ್‌ ಪುತ್ರನ ಡ್ರಗ್ಸ್‌ ಕೇಸ್‌ಗೆ ಭಾರಿ ಟ್ವಿಸ್ಟ್‌: 25 ಕೋಟಿ ರೂ. ಲಂಚ ಕೇಳಿದ್ರಾ ಅಧಿಕಾರಿಗಳು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts