More

    ಋತುಸ್ರಾವ ನಿಂತ ಮೇಲೂ ಮತ್ತೆ ಆಗಿ ಹಿಂಸೆಯಾಗುತ್ತಿದೆ- ಪರಿಹಾರ ತಿಳಿಸಿ

    ಋತುಸ್ರಾವ ನಿಂತ ಮೇಲೂ ಮತ್ತೆ ಆಗಿ ಹಿಂಸೆಯಾಗುತ್ತಿದೆ- ಪರಿಹಾರ ತಿಳಿಸಿ ನನ್ನ ವಯಸ್ಸು 50. ಆರು ತಿಂಗಳ ಹಿಂದೆ ಋತು ಆಗುವುದು ನಿಂತಿತು. ನಂತರ ಒಂದು ವಾರದವರೆಗೂ ಋತುಸ್ರಾವ ಆಯಿತು. ಅಲೋಪತಿ ಮಾತ್ರೆಗಳನ್ನು ತೆಗೆದುಕೊಂಡೆ. ಮತ್ತೆ ಹಿಮೋಗ್ಲೋಬಿನ್ ಕಡಿಮೆಯಾಗಿ ಸುಸ್ತಾಗುತ್ತಿದೆ. ನಿದ್ದೆಯೂ ಕಡಿಮೆಯಾಗಿದೆ.
    ಮಾತ್ರೆ ತೆಗೆದುಕೊಂಡರೆ ಮಾತ್ರ ನಿದ್ದೆ ಬರುತ್ತದೆ. ಅದು ರಾತ್ರಿ 11ರಿಂದ 5ರವರೆಗೆ ಮಾತ್ರ. ಇದರಿಂದ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದೇನೆ. ಇದಕ್ಕೆ ಪರಿಹಾರ ತಿಳಿಸಿ.

    ಉತ್ತರ: ಋತುಬಂಧದ ಸಮಯವಾಗಿರುವುದರಿಂದ ಕೆಲವು ತಿಂಗಳುಗಳ ಕಾಲ ಈ ಸಮಸ್ಯೆ ಇರುತ್ತದೆ. ನೀವು ಶತಾವರಿ ರಸಾಯನವನ್ನು ದಿನಕ್ಕೆರಡು ಬಾರಿ ಒಂದು ಚಮಚೆಯಷ್ಟನ್ನು ಸೇವಿಸಿ ಸ್ವಲ್ಪ ಹಾಲು ಕುಡಿಯಿರಿ. ಆಹಾರದಲ್ಲಿ ಸೊಪ್ಪು, ತರಕಾರಿ, ಹಣ್ಣುಗಳನ್ನು ತಿನ್ನಿ.

    ಖರ್ಜೂರವನ್ನು ನೀರಿನಲ್ಲಿ ನೆನೆಸಿ, ದಾಳಿಂಬೆಯೊಡನೆ ರುಬ್ಬಿ ದಿನಕ್ಕೊಮ್ಮೆ ಕಾಲು ಲೋಟದಷ್ಟು ಕುಡಿಯಿರಿ. ನುಗ್ಗೆಸೊಪ್ಪು, ಮೆಂತ್ಯಸೊಪ್ಪುಗಳನ್ನು ಹೆಚ್ಚು ಬಳಸಿ. ಕುಡಿಯುವ ನೀರಿಗೆ ಜೇನುತುಪ್ಪ ಬೆರೆಸಿ ಆಗಾಗ ಕುಡಿಯುತ್ತಿರಿ.

    ಇದರಿಂದ ಸುಸ್ತು ಕಡಿಮೆಯಾಗುತ್ತದೆ. ನಿದ್ರೆಗೆ ಮಾತ್ರೆ ತೆಗೆದುಕೊಳ್ಳಬೇಡಿ. ಅದೇ ಅಬ್ಯಾಸವಾಗಿಬಿಡುತ್ತೆದ. ರಾತ್ರಿ ಎಂಟು ಗಂಟೆಗೆ ಒಂದು ಚಮಚ ಗುಲ್ಕಂದಕ್ಕೆ ಕಾಲು ಚಮಚ ಗಸಗಸೆ ಬೆರೆಸಿ ತಿನ್ನಬೇಕು.

    ರಾತ್ರಿ ಊಟಕ್ಕೆ ಮೊಸರು, ಮಜ್ಜಿಗೆ ಇರಲಿ. ನಿದ್ರೆ ಚೆನ್ನಾಗಿ ಬರುತ್ತದೆ. 6 ಗಂಟೆಯ ನಿದ್ರೆ ಬಂದರೂ ಸಾಕು, ಹೆಚ್ಚು ನಿದ್ರೆಯ ಅವಶ್ಯಕತೆ ಇರುವುದಿಲ್ಲ.

    ಆಯುರ್ವೇದಕ್ಕೆ ಸಂಬಂಧಿಸಿದಂತೆ ಡಾ.ವಸುಂಧರಾ ಭೂಪತಿ ಅವರು ಬರೆದಿರುವ ವಿವಿಧ ರೀತಿಯ ಪರಿಹಾರಕ್ಕಾಗಿ https://www.vijayavani.net/ ಕ್ಲಿಕ್ಕಿಸಿ ಆರೋಗ್ಯ ವಿಭಾಗ ನೋಡಿ…

    ಮಾಸಿಕ ಋತುಸ್ರಾವದ ಸಮಸ್ಯೆಯಿದ್ದು, ತುಂಬಾ ದಪ್ಪಗಿದ್ದೇನೆ- ಪರಿಹಾರವಿದೆಯೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts