More

    ಅಪ್ಪನ ಕೆಲಸ ಅಮ್ಮನಿಗೆ ಸಿಕ್ಕರೆ ಅವರು ಬೇಕಾದವರಿಗೆ ಮಾತ್ರ ಆಸ್ತಿ ಬರೆಯಬಹುದೆ?

    ಅಪ್ಪನ ಕೆಲಸ ಅಮ್ಮನಿಗೆ ಸಿಕ್ಕರೆ ಅವರು ಬೇಕಾದವರಿಗೆ ಮಾತ್ರ ಆಸ್ತಿ ಬರೆಯಬಹುದೆ?ತಂದೆ ನೌಕರಸ್ಥರಾಗಿದ್ದರು. ಅವರು ಅನಾರೋಗ್ಯದಿಂದ ಮೃತರಾದರು. ಅವರ ಕೆಲಸವನ್ನು ನಮ್ಮ ತಾಯಿಗೇ ಅನುಕಂಪದ ಆಧಾರದ ಮೇಲೆ ಕೊಟ್ಟರು. ತಾಯಿ ಐದೂ ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಒಂದು ಸ್ವಂತ ಮನೆ 5 ಪ್ಲಾಟ್ ಹೊಂದಿದ್ದಾರೆ, ಹಣ ಸಂಪಾದಿಸಿದ್ದಾರೆ. ಈಗ ಎಲ್ಲ ಆಸ್ತಿಯನ್ನು ತಮ್ಮ ಕಿರಿಯ ಮಗಳಿಗೇ ಕೊಡುತ್ತೇನೆ ಎನ್ನುತ್ತಾರೆ. ನಮಗೇನೂ ಕೊಡುವುದಿಲ್ಲ ಎನ್ನುತ್ತಿದ್ದಾರೆ, ನಮಗೆ ಪಾಲು ಸಿಗುತ್ತದೆಯೋ ಇಲ್ಲವೋ ತಿಳಿಸಿ.

    ಉತ್ತರ: ನಿಮ್ಮ ತಂದೆ ತೀರಿಕೊಂಡಾಗ ಅವರು ಬಿಟ್ಟು ಹೋಗಿದ್ದ ಎಲ್ಲ ಸ್ಥಿರ ಮತ್ತು ಚರ ಆಸ್ತಿಯಲ್ಲಿ ತಾಯಿಗೆ ಮತ್ತು ಐವರೂ ಮಕ್ಕಳಿಗೆ ಸೇರಿ ತಲಾ ಆರರಲ್ಲಿ ಒಂದು ಭಾಗ ಇರುತ್ತದೆ. ನಿಮ್ಮ ತಾಯಿ ಕೆಲಸಕ್ಕೆ ಸೇರಿ ಸಂಪಾದಿಸಿದ ಆಸ್ತಿಯಲ್ಲಿ, ಹಣದಲ್ಲಿ ನಿಮಗೆ ಯಾರಿಗೂ ಅವರು ಬದುಕಿರುವವರೆಗೆ ಭಾಗ ಸಿಗುವುದಿಲ್ಲ.

    ಅವರು ಬದುಕಿದ್ದಾಗ ಬೇಕಿದ್ದರೆ ತಮ್ಮ ಸ್ವಯಾರ್ಜಿತ ಆಸ್ತಿಯನ್ನು ಯಾರಿಗಾದರೂ ಕ್ರಯ, ದಾನ ಅಥವಾ ವಿಲ್ ಮಾಡಬಹುದು. ನೀವು ತಾಯಿಯ ಮನಸ್ಸನ್ನು ಒಲಿಸಿಕೊಂಡು ಅವರಿಂದ ಆಸ್ತಿ ಪಡೆಯುವುದು ಒಳ್ಳೆಯದು. ಕೋರ್ಟಿಗೆ ಹೋದರೆ ತಾಯಿಯ ಸಂಪಾದನೆಯ ಆಸ್ತಿಯಲ್ಲಿ ನಿಮಗೆ ಭಾಗ ಸಿಗುವುದಿಲ್ಲ.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ   https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ದೊಡ್ಡಪ್ಪನಿಗೆ ಮಕ್ಕಳಿಲ್ಲ- ಅವರನ್ನು ನೋಡಿಕೊಂಡ ನಮಗೆ ಆಸ್ತಿ ಸಿಗುತ್ತಾ ಅಥವಾ ಸಾಕುಮಗನಿಗೆ ಹೋಗುತ್ತಾ?

    ನನ್ನ ಸಹಿ ಇಲ್ಲದೇ ಅಣ್ಣ-ಅಮ್ಮ ಹೊಲ ಮಾರಿದ್ದಾರೆ; ಆಸ್ತಿ ಸಿಗಲು ನಾನೇನು ಮಾಡಬೇಕು?

    ಅತ್ತೆ ಬ್ಲ್ಯಾಕ್​ಮೇಲ್​ ಮಾಡಿ ಮೃತ ಮಗನ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಾರೆ- ಅವರಿಗೂ ಕೊಡಬೇಕಾ?

    ತಂದೆಯವರು ದಾನಪತ್ರದ ಮೂಲಕ ನೀಡಿರುವ ಮುತ್ತಜ್ಜಿ ಆಸ್ತಿಯಲ್ಲಿ ಅಣ್ಣನಿಗೂ ಪಾಲಿದೆಯೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts