More

    ಆಯುರ್ವೇದ ಕರೊನಾ ಔಷಧಕ್ಕೆ ವಿದೇಶಿಗರ ದೌಡು- ಆನ್‌ಲೈನ್‌ ಮೂಲಕ ದೇಶಾದ್ಯಂತ ಪೂರೈಕೆಗೆ ಮುಂದಾದ ಸರ್ಕಾರ

    ಕೃಷ್ಣಪಟ್ಟಣ (ಆಂಧ್ರಪ್ರದೇಶ): ಆಂಧ್ರಪ್ರದೇಶದ ಕೃಷ್ಣಪಟ್ಟಣಂನ ಆಯುರ್ವೇದ ವೈದ್ಯ ಆನಂದಯ್ಯ ಅವರು ಕರೊನಾ ಔಷಧಕ್ಕೆ ನೀಡುತ್ತಿರುವ ಔಷಧದ ಕುರಿತು ಅನಗತ್ಯ ವಿವಾದ ಹುಟ್ಟುಹಾಕಿರುವ ನಡುವೆಯೇ, ಔಷಧವೀಗ ವಿಶ್ವಖ್ಯಾತಿ ಪಡೆದುಬಿಟ್ಟಿದೆ.

    ಸಹಸ್ರಾರು ಮಂದಿಯ ಜೀವವನ್ನು ಉಳಿಸಿರುವ ಆನಂದಯ್ಯನವರ ಕರೊನಾ ಔಷಧ ವೈಜ್ಞಾನಿಕತೆಯ ಬಗ್ಗೆ ತಲೆಕೆಡಿಸಿಕೊಂಡಿದ್ದ ತಜ್ಞರು, ಕೊನೆಗೂ ಸತ್ಯ ಒಪ್ಪಿಕೊಳ್ಳಲೇಬೇಕಾಯಿತು. ಈ ಔಷಧದಿಂದ ಯಾವುದೇ ಹಾನಿಯಿಲ್ಲ ಎಂದು ಅವರು ವರದಿ ನೀಡುತ್ತಿದ್ದಂತೆಯೇ ಆಂಧ್ರ ಸರ್ಕಾರ ಔಷಧ ತಯಾರಿಕೆ ಮುಂದುವರೆಸಲು ಅನುಮತಿ ನೀಡಿತು.

    ಈ ಸುದ್ದಿ ಕಾಳ್ಗಿಚ್ಚಿನಂತೆ ದೇಶದಲ್ಲಿ ಮಾತ್ರವಲ್ಲದೇ ಭಾರತದ ಸಾಂಪ್ರದಾಯಿಕ ಪದ್ಧತಿಯತ್ತ ದೃಷ್ಟಿಬೀರುತ್ತಿರುವ ವಿದೇಶದವರೆಗೂ ಹರಡಿಬಿಟ್ಟಿದೆ. ಇದೀಗ ಎಲ್ಲೆಡೆಯಿಂದ ಈ ಔಷಧಕ್ಕೆ ಭಾರಿ ಡಿಮಾಂಡ್‌ ಶುರುವಾಗಿದ್ದು, ತಮಗೂ ಔಷಧ ನೀಡುವಂತೆ ಹೇಳುತ್ತಿದ್ದಾರೆ.

    ಈ ನಡುವೆಯೇ, ಇವರ ಔಷಧಕ್ಕೆ ದೇಶದ ಮೂಲೆಮೂಲೆಗಳಿಂದ ಜನರು ಕೃಷ್ಣಪಟ್ಟಣಂನತ್ತ ಧಾವಿಸಲು ತೊಡಗಿದ್ದಾರೆ. ಅದೇ ಇನ್ನೊಂದೆಡೆ, ಆನಂದಯ್ಯನವರ ಜೀವಕ್ಕೂ ಅಪಾಯ ಎದುರಾಗಬಹುದು ಎಂದು ಸರ್ಕಾರ ಅಂದುಕೊಂಡಿದೆ. ಇದೇ ಕಾರಣಕ್ಕೆ ಅವರ ಭದ್ರತೆಗೆ ಮುಂದಾಗಿರುವ ಸರ್ಕಾರ, ಅವರನ್ನು ಅವರ ಹಳ್ಳಿ ಮರೀನಾ ಕೃಷ್ಣಪಟ್ಟಣಂನಿಂದ ಪೋರ್ಟ್‌ಗೆ (ಬಂದರು) ಶಿಫ್ಟ್‌ ಮಾಡಿದೆ. ಇಲ್ಲಿ ನಿನ್ನೆಯಿಂದ ಔಷಧ ತಯಾರಿಕೆ ಕಾರ್ಯ ಶುರುವಾಗಿದೆ. ಇದಾಗಲೇ ಅದಕ್ಕೆ ಬೇಕಾಗಿರುವ ಪದಾರ್ಥಗಳನ್ನು ತರಿಸಿಕೊಳ್ಳಲಾಗಿದ್ದು, ಇನ್ನು ನಾಲ್ಕು ದಿನಗಳಲ್ಲಿ ಔಷಧ ರೆಡಿಯಾಗಲಿದೆ ಎಂದು ಮೂಲಗಳು ಹೇಳಿವೆ.

    ಹಳ್ಳಿಯಲ್ಲಿ ಆನಂದಯ್ಯವರು ಸುರಕ್ಷಿತವಾಗಿಲ್ಲ. ಆದ್ದರಿಂದ ಅವರನ್ನು ಬಂದರ್‌ಗೆ ಶಿಫ್ಟ‌ ಮಾಡುವಂತೆ ಸರ್ಕಾರ ಆದೇಶಿಸಿದೆ. ದೇಶ ಮಾತ್ರವಲ್ಲದೇ ವಿದೇಶಗಳಿಂದಲೂ ಇವರ ಔಷಧಿಗೆ ಬೇಡಿಕೆ ಬಂದಿದ್ದು, ನಾಲ್ಕು ದಿನಗಳಲ್ಲಿ ಔಷಧ ರೆಡಿಯಾಗಲಿದೆ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.

    ಆಂಧ್ರಪ್ರದೇಶದ ಪ್ರತಿ ಜಿಲ್ಲೆಗೂ ಆರಂಭಿಕವಾಗಿ ವಿತರಿಸಲು 5000 ಪ್ಯಾಕ್‌ಗಳನ್ನು ಸಿದ್ಧಪಡಿಸಿರುವ ಆನಂದಯ್ಯನವರು, ಈ ಕುರಿತು ಮುಖ್ಯಮಂತ್ರಿ ಜಗನ್‌ ರೆಡ್ಡಿ ಅವರಿಗೆ ಪತ್ರ ಬರೆದಿದ್ದಾರೆ. ಪ್ರತಿ ಜಿಲ್ಲೆಗೆ ಐದು ಸಾವಿರ ಪ್ಯಾಕ್‌ ಕೊಡಲು ಎಲ್ಲವೂ ಸಿದ್ಧವಾಗಿದೆ. ಇದನ್ನು ಸರ್ಕಾರದ ಮೂಲಕ ವಿತರಿಸಿದರೆ ತುಂಬಾ ಒಳ್ಳೆಯದಾಗುತ್ತದೆ ಎಂದು ಅವರು ಪತ್ರದಲ್ಲಿ ಕೋರಿಕೊಂಡಿದ್ದಾರೆ.

    ಇದರ ನಡುವೆಯೇ ಇವರ ಔಷಧವನ್ನು ಸ್ವಯಂಸೇವಕರು ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಇದು ಸದ್ಯ ಆಂಧ್ರಪ್ರದೇಶದಲ್ಲಿ ಮಾತ್ರ ನಡೆಯುತ್ತಿದೆ. ಈ ಔಷಧಕ್ಕೆ ಇಷ್ಟು ಪರಿಯಲ್ಲಿ ಡಿಮಾಂಡ್‌ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಆಂಧ್ರದ ಸರ್ಕಾರ, ವಿವಿಧ ಭಾಗಗಳಲ್ಲಿಯೂ ಈ ಔಷಧ ಪೂರೈಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ. ಟಿಟಿಡಿ (ತಿರುಪತಿ ತಿರುಮಲ ಟ್ರಸ್ಟ್‌) ಮೂಲಕ ಇದನ್ನು ವಿತರಣೆ ಮಾಡಲು ಸಾಧ್ಯವೇ ಎಂದು ನೋಡುತ್ತಿದೆ. ದೇಶಾದ್ಯಂತ ಟಿಟಿಡಿಯ ಘಟಕಗಳು ಹಾಗೂ ಟಿಕೆಟ್‌ ಬುಕಿಂಗ್‌ ಕೇಂದ್ರಗಳು ಇರುವ ಹಿನ್ನೆಲೆಯಲ್ಲಿ ಇದರ ಮೂಲಕ ಪೂರೈಕೆಯ ಸಾಧ್ಯತೆಗಳನ್ನು ಸರ್ಕಾರ ಪರಿಶೀಲಿಸುತ್ತಿದೆ. ಜತೆಗೆ ಆನ್‌ಲೈನ್‌ ಮೂಲಕವೂ ಇದರ ವಿತರಣೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

    ಮನೆಬಾಗಿಲಿಗೆ ಆನಂದಯ್ಯನವರ ಆಯುರ್ವೇದ ಔಷಧ: ಟಿಟಿಡಿಯಿಂದ ದೇಶಾದ್ಯಂತ ಪೂರೈಕೆಗೆ ಮುಂದಾದ ಸರ್ಕಾರ

    ಆನಂದಯ್ಯನವರ ಆಯುರ್ವೇದ ಕೋವಿಡ್‌ ಔಷಧಕ್ಕೆ ಕೊನೆಗೂ ಸಂದಿತು ಜಯ- ಸಿಕ್ಕಿತು ಗ್ರೀನ್‌ ಸಿಗ್ನಲ್‌

    ಸೈಡ್‌ ಎಫೆಕ್ಟು ಇಲ್ದೇ ಸಹಸ್ರಾರು ಮಂದಿ ಜೀವ ಉಳಿಸಿರೋ ಔಷಧಿಗೆ ಏಕೆ ಅಡ್ಡಗಾಲು? ಜಾಲತಾಣದಲ್ಲಿ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts