More

    ಎಸ್‌ಐಟಿಯಿಂದ ನಿಷ್ಪಕ್ಷಪಾತ ತನಿಖೆ ನಡೆಯುತ್ತಿಲ್ಲ:ಮಾಜಿ ಶಾಸಕ ಕೆ.ಎಸ್ ಲಿಂಗೇಶ್

    ಹಾಸನ: ಅಶ್ಲೀಲ ವಿಡಿಯೋ ಮತ್ತು ಪೆನ್ ಡ್ರೈವ್ ಹಂಚಿಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೇಮಿಸಿರುವ ಎಸ್‌ಐಟಿ ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತಿಲ್ಲ. ಆದ್ದರಿಂದ ಸತ್ಯಾಸತ್ಯತೆ ಹೊರಬರಬೇಕಾದರೆ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎಸ್ ಲಿಂಗೇಶ್ ಒತ್ತಾಯಿಸಿದರು.
    ಪೆನ್ ಡ್ರೈವ್ ಹಂಚಿಕೆ ಸಂಬಂದ ನಮ್ಮ ಪಕ್ಷದಿಂದ ಐದು ಜನರ ಮೇಲೆ ದೂರು ನೀಡಲಾಗಿದೆ. ಆದರೆ ಇದುವರೆಗೂ ಕೂಡ ಅವರನ್ನು ಬಂಧಿಸಿ ವಿಚಾರಣೆಗೆ ಹಾಜರುಪಡಿಸಿಲ್ಲ. ಆದರೆ ಎಸ್‌ಐಟಿ ತನಿಖೆ ದಿಕ್ಕು ತಪ್ಪುವ ಸಾಧ್ಯತೆಗಳು ಹೆಚ್ಚಾಗಿದ್ದು, ಮುಖ್ಯಮಂತ್ರಿಗಳು ತಕ್ಷಣವೇ ಈ ಪ್ರಕರಣದ ತನ್ನ ಸಿಬಿಐಗೆ ವಹಿಸುವಂತೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
    ಎಸ್‌ಐಟಿ ಬಗ್ಗೆ ಸಾಕಷ್ಟು ಅನುಮಾನಗಳು ಮೂಡ ತೊಡಗಿದೆ. ನಮಗೆ ಕರ್ನಾಟಕದ ಪೊಲೀಸರ ಬಗ್ಗೆ ಗೌರವ ಇದೆ . ಅಲ್ಲದೆ ಬಿ.ಕೆ. ಸಿಂಗ್ ಅವರ ಬಗ್ಗೆ ಕೂಡ ಅಪಾರ ಗೌರವವಿದೆ. ಆದರೆ ಎಸ್‌ಐಟಿ ರಾಜ್ಯ ಸರ್ಕಾರದ ಆಡಳಿತಕ್ಕೆ ಒಳಪಟ್ಟಿರುವುದರಿಂದ ಅಲ್ಲಿನ ಪ್ರಭಾವಿಗಳ
    ಒತ್ತಡಕ್ಕೆ ಮಣಿದು ಕೆಲಸ ಮಾಡುವಂತಹ ಸಾಧ್ಯತೆಗಳು ಹೆಚ್ಚಾಗಿದೆ ಎಂದು ದೂರಿದರು.
    ಮೊಬೈಲ್‌ನಿಂದ ವಿಡಿಯೋ ಮತ್ತು ಫೋಟೋಗಳನ್ನು ಕದ್ದಿರುವ ಕಾರ್ತಿಕ್‌ಗೌಡರನ್ನ ಇದುವರೆಗೂ ಬಂಧಿಸಿಲ್ಲ. ಆತ ಎಸ್‌ಐಟಿಗೆ ಏಕೆ ಸಿಗುತ್ತಿಲ್ಲ ಎಸ್‌ಐಟಿ ಅವರೇ ಕಾರ್ತಿಕನನ್ನ ಸೇಫ್‌ಗಾರ್ಡ್ ಮಾಡಿ ಅವರ ಬಳಿ ಇಟ್ಟುಕೊಂಡು ಆರೋಪ ಮಾಡಿಸಲು ಹುನ್ನಾರ ಮಾಡುತ್ತಿದ್ದಾರೆ ಎಂದು ದೂರಿದರು.
    ಇದೇ ತಿಂಗಳು 30ರಂದು ವಿವಿಧ ಪ್ರಗತಿಪರ ಸಂಘಟನೆಗಳು, ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಆದರೆ ಅವರು ವಿನಾಕಾರಣ ನಮ್ಮ ಪಕ್ಷದ ನಾಯಕರಾದ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ದೇವೇಗೌಡರು ಹಾಗೂ ರೇವಣ್ಣ ಅವರ ಮೇಲೆ ಆರೋಪ ಮಾಡಿಬಾರದು. ಅಲ್ಲದೆ ಈ ಪ್ರತಿಭಟನೆಯ ಎಲ್ಲಾ ಸೂತ್ರಧಾರಿ ಸರ್ಕಾರದಿಂದಲೇ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಡಿಕೆಶಿ ರಾಜೀನಾಮೆಗೆ ಆಗ್ರಹ:
    ಈಗಾಗಲೇ ಸಾಕ್ಷ್ಯಾಧಾರಗಳು ಡಿ.ಕೆ. ಶಿವಕುಮಾರ್ ಅವರೇ ಪೆನ್‌ಡ್ರೈವ್ ರೂವಾರಿ, ಈ ಬಗ್ಗೆ ಈಗಾಗಲೇ ಸಾಕ್ಷಾಧಾರಗಳಿದ್ದರೂ ಕೂಡ ಎಸ್‌ಐಟಿ ಅವರನ್ನು ವಿಚಾರಣೆಗೆ ಕರೆದಿಲ್ಲ, ಮತ್ತು ಎಸ್‌ಐಟಿ ಇವರ ಅಣತಿಯಂತೆ ನಡೆಯುತ್ತಿದೆ ಆದ್ದರಿಂದ ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಕೆಶಿ ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.
    ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಡಿಕೆಶಿ ಜೊತೆ ಮಾತನಾಡಿರುವ ಆಡಿಯೋ ಈಗಾಗಲೇ ಬಹಿರಂಗಗೊಂಡಿದೆ ಡಿಕೆ ಶಿವಕುಮಾರ್ ಅವರು ಈ ಪ್ರಕರಣದಲ್ಲಿ ವಿನಾಕಾರಣ ನಮ್ಮ ನಾಯಕರನ್ನ ತೇಜೋಧೆ ಮಾಡಲು ಹೊರಟಿದ್ದಾರೆ, ಅವರು ಡಿಕೆ ಶಿವಕುಮಾರ್ ಅಲ್ಲ ಸಿಡಿ ಶಿವಣ್ಣ ಆಗಿ ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts