More

    ಕೊನೆಗೂ ಅಂಗೀಕೃತಗೊಂಡಿತು ಕೃಷಿ ಮಸೂದೆ: ರಾಷ್ಟ್ರಪತಿ ಅಂಕಿತವೊಂದೇ ಬಾಕಿ

    ನವದೆಹಲಿ: ವಿರೋಧಪಕ್ಷಗಳ ತೀವ್ರ ವಿರೋಧ, ಪ್ರತಿಭಟನೆಗಳ ನಡುವೆಯೇ ಕೃಷಿಗೆ ಸಂಬಂಧಿಸಿದ ಎರಡು ಮಹತ್ವದ ಮಸೂದೆಗಳಿಗೆ ಅಂಗೀಕಾರ ಪಡೆಯುವುದರಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ.

    ಧ್ವನಿಮತದ ಮೂಲಕ ರೈತರು ಮತ್ತು ಬೆಳೆಗಳ ವ್ಯಾಪಾರ, ವಾಣಿಜ್ಯ ಮಸೂದೆ 2020 (ಪ್ರಚಾರ ಮತ್ತು ಸೌಲಭ್ಯ) ಮತ್ತು ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020ಗೆ ಅಂಗೀಕಾರ ದೊರೆತಿದೆ.

    ಇನ್ನು ಇದನ್ನು ರಾಷ್ಟ್ರಪತಿಗಳ ಮುಂದಿರಿಸಿ ಅಂಗೀಕೃತಗೊಳಿಸುವುದೊಂದೇ ಬಾಕಿ. ಹೀಗಾದಲ್ಲಿ ಈ ಮಸೂದೆಯು ಕಾನೂನು ರೂಪದಲ್ಲಿ ಜಾರಿಗೆ ಬರಲಿದೆ.

    ಮಸೂದೆಗೆ ವೈಎಸ್​ಆರ್​ ಕಾಂಗ್ರೆಸ್​ ಬೆಂಬಲ ನೀಡಿದೆ. ಆದರೆ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಮಸೂದೆಯನ್ನು ವಿರೋಧಿಸಿ ತೀವ್ರ ಪ್ರತಿಭಟನೆ ನಡೆಸಿದವು. ಟಿಎಂಸಿ ಸಂಸದ ಡೆರೆಕ್​ ಬ್ರೈನ್​ ಅವರು ಇದೇ ಸಂದರ್ಭದಲ್ಲಿ ಮೈಕ್​ ಒಡೆದು ಹಾಕಿರುವ ಘಟನೆಯೂ ನಡೆದಿದೆ. ಈ ಮಸೂದೆಗಳನ್ನು ರೈತರ ಡೆತ್ ವಾರೆಂಟ್, ಅದಕ್ಕೆ ಸಹಿ ಹಾಕುವುದಿಲ್ಲ ಎಂದು ಕಾಂಗ್ರೆಸ್ ಹೇಳಿದ್ದರೆ, ದೇಶದ ಒಟ್ಟು ಜಿಡಿಪಿಗೆ ಕನಿಷ್ಠ ಶೇ. 20ರಷ್ಟು ಕೊಡುಗೆ ನೀಡುವ ರೈತರನ್ನು ಈ ಮಸೂದೆಗಳು ಗುಲಾಮರನ್ನಾಗಿ ಮಾಡುತ್ತವೆ ಎಂದು ಡಿಎಂಕೆ ಪಕ್ಷ ಹೇಳಿದೆ.

    ಇದನ್ನೂ ಓದಿ: ಕೃಷಿ ಮಸೂದೆ: ಚಳಿಯಲ್ಲಿಯೂ ರಾಜ್ಯಸಭೆಯಲ್ಲಿ ಏರಿದ ಕಾವು- ನಡೆಯುತಿದೆ ವಾಗ್ಯುದ್ಧ!

    ಈ ಮಸೂದೆಗಳಿಂದ ಅದಾನಿ ಮತ್ತು ಅಂಬಾನಿಯಂತಹ ಕಾರ್ಪೊರೇಟ್ ಸಂಸ್ಥೆಗಳಿಗೆ ಲಾಭವಾಗಲಿದ್ದು, ರೈತರು ಇದನ್ನು ಎಂದಿಗೂ ಒಪ್ಪುವುದಿಲ್ಲ ಎಂದು ಕಾಂಗ್ರೆಸ್ ಸಂಸದ ಪ್ರತಾಪ್ ಸಿಂಗ್ ಬಜ್ವಾ ಕಿಡಿಕಾರಿದರು. ಅಮೆರಿಕದಲ್ಲಿ ಇಂಥ ಗುತ್ತಿಗೆ ಕೃಷಿ ಭೂಮಿ ಕಾರ್ಪೊರೇಟ್ ಸ್ವಾಧೀನಕ್ಕೆ ಕಾರಣವಾಯಿತು ಎಂದರು. ಈ ಮಸೂದೆಯಿಂದ ಯಾರಿಗೆ ಲಾಭ ಸಿಗುತ್ತದೆ ಎಂದು ಸರ್ಕಾರ ಹೇಳುತ್ತಿದೆಯೋ ಅವರು ಬೀದಿಯಲ್ಲಿದ್ದಾರೆ. ಹಾಗಿದ್ದ ಮೇಲೆ ಇದರ ಲಾಭ ಯಾರಿಗೆ ಎಂದು ಪ್ರಶ್ನಿಸಿದರು.

    ವಿರೋಧಪಕ್ಷಗಳ ಗದ್ದಲದ ಹಿನ್ನೆಲೆಯಲ್ಲಿ ರಾಜ್ಯಸಭೆಯ ಕಲಾಪವನ್ನು ಸೋಮವಾರ ಬೆಳಿಗ್ಗೆ 9 ಗಂಟೆವರೆಗೆ ಮುಂದೂಡಲಾಗಿದೆ.

    ಈ ಮಸೂದೆ ರೈತರಿಗೆ ಬಹಳ ರೀತಿಯಲ್ಲಿ ಅನುಕೂಲಕರ ಆಗಲಿದೆ. ಮಧ್ಯವರ್ತಿಗಳು ಹಾಗೂ ವಿವಿಧ ಸಮಸ್ಯೆಗಳಿಂದ ರೈತರು ಹಾಗೂ ಕೃಷಿ ಕ್ಷೇತ್ರಕ್ಕೆ ಮುಕ್ತಿ ನೀಡಲಿವೆ. ಈಗ ಚಾಲ್ತಿಯಲ್ಲಿರುವ ಕನಿಷ್ಠ ಬೆಂಬಲ ಬೆಲೆ, ಸರ್ಕಾರವೇ ಕೃಷಿ ಉತ್ಪನ್ನಗಳ ಖರೀದಿಯಂತಹ ವ್ಯವಸ್ಥೆ ಮುಂದುವರಿಯಲಿವೆ. ಈ ಮಸೂದೆಗಳ ಪರಿಣಾಮ ರೈತರಿಗೆ ಇನ್ನೂ ಹಲವಾರು ಸೌಲಭ್ಯಗಳು, ಅನುಕೂಲಗಳು ದೊರೆಯಲಿವೆ ಎಂದು ಇದಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಸ್ಪಷ್ಟಪಡಿಸಿದ್ದಾರೆ.

    ಈ ಮಸೂದೆ ರೈತರಿಗೆ ನೂತನ ಸ್ವಾತಂತ್ರ್ಯ ನೀಡುತ್ತದೆ. ಅವರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚಿನ ಆಯ್ಕೆಗಳು ಮತ್ತು ಅವಕಾಶಗಳನ್ನು ನೀಡುತ್ತದೆ. ಈ ಹಿನ್ನೆಲೆಯಲ್ಲಿ ರೈತರ ದಾರಿ ತಪ್ಪಿಸುವ ಪ್ರತಿಪಕ್ಷಗಳ ಮಾತುಗಳಿಗೆ ಕಿವಿಕೊಡಬೇಕಿ ಎಂದಿದ್ದಾರೆ ಪ್ರಧಾನಿ.

    ಐಸಿಸ್​ ಉಗ್ರರಾಗಲು ಹೊರಟ 500 ಯುವಕರ ಮನ ಪರಿವರ್ತನೆ: ಪೊಲೀಸರ ಸಾಹಸಗಾಥೆ

    ಪಾಕ್​ ಗಡಿಯಿಂದ ಭಾರತಕ್ಕೆ ನುಸುಳಿತು ಡ್ರಗ್ಸ್​! ವಶಕ್ಕೆ ಪಡೆದ ಯೋಧರು

    ಟ್ರಂಪ್​ ಹೆಸರಲ್ಲಿ ಬಂದ ಪತ್ರದಲ್ಲಿ ಪ್ರಾಣಘಾತಕ ವಿಷ: ಕಳಿಸಿದ್ಯಾರು? ಆತಂಕದಲ್ಲಿ ಶ್ವೇತಭವನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts