More

    ‘ಲವ್​ ಜಿಹಾದ್’​ ತಡೆಗಟ್ಟಲು ಮತಾಂತರ ವಿರೋಧಿ ಕಾನೂನು ಅಂಗೀಕಾರ

    ಭೋಪಾಲ್: ಅನ್ಯಧರ್ಮೀಯ ವ್ಯಕ್ತಿಯನ್ನು ಮದುವೆಯಾದ ಕಾರಣಕ್ಕೆ ಅಥವಾ ಇನ್ಯಾವುದೇ ಮೋಸದ ವಿಧಾನಗಳಿಂದ ಮತಾಂತರ ಮಾಡುವುದನ್ನು ತಡೆಗಟ್ಟುವ ಕಾನೂನನ್ನು ಮಧ್ಯಪ್ರದೇಶ ಸರ್ಕಾರವು ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ರಾಜ್ಯ ವಿಧಾನಸಭೆಯು ಧಾರ್ಮಿಕ ಸ್ವಾತಂತ್ರ್ಯ ಮಸೂದೆ(ಫ್ರೀಡಮ್​ ಟು ರಿಲಿಜಿಯನ್ ಬಿಲ್​, 2021)ಯನ್ನು ಸೋಮವಾರ ಅಂಗೀಕರಿಸಿದೆ.

    ಈ ಕಾನೂನಿನ ಕೆಳಗೆ ವಿವಾಹದ ಕಾರಣ ಒಡ್ಡಿ ಅಥವಾ ಬೇರೆ ಮೋಸದ ವಿಧಾನಗಳಿಂದ ಮತ ಪರಿವರ್ತನೆ ಮಾಡುವುದು ಅಪರಾಧವಾಗಲಿದೆ. ತಪ್ಪಿತಸ್ಥರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸುವ ಅವಕಾಶವಿದೆ. ಇಂದು ವಿಧಾನಸಭೆಯಲ್ಲಿ ಈ ಬಗ್ಗೆ ನಡೆದ ಚರ್ಚೆಯ ನಂತರ, ಮೌಖಿಕ ಮತ ಚಲಾವಣೆಯ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು.

    ಇದನ್ನೂ ಓದಿ: ಎಲ್ಲೆಲ್ಲೂ ಮಹಿಳೆಯರೇ: ನೈಋತ್ಯ ರೈಲ್ವೇಯಿಂದ ಸಂಪೂರ್ಣ ಸ್ತ್ರೀಮಯ ಮಹಿಳಾ ದಿನಾಚರಣೆ

    ವಿಧಾನಸಭೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಧ್ಯಪ್ರದೇಶದ ಗೃಹ ಮಂತ್ರಿ ನರೋತ್ತಮ ಮಿಶ್ರ, “ನಮ್ಮ ಹೆಣ್ಣುಮಕ್ಕಳನ್ನು ಅಪಾಯಕ್ಕೆ ತಳ್ಳುವ, ನಮ್ಮ ಭಾವನೆಗಳಿಗೆ ಧಕ್ಕೆ ತರುವ, ‘ಜಿಹಾದ್​’ಗೆ ಮಾರ್ಗ ಕಲ್ಪಿಸುವ ಯಾವುದೇ ರೂಪದ ಪ್ರೀತಿಗೆ ನಮ್ಮ ವಿರೋಧವಿದೆ” ಎಂದರು.

    ಈ ಮುನ್ನ ಇದೇ ರೀತಿ ಮತಾಂತರ ವಿರೋಧಿ ಸುಗ್ರೀವಾಜ್ಞೆಯನ್ನು ರಾಜ್ಯ ಸರ್ಕಾರ ಹೊರಡಿಸಿತ್ತು. ಜನವರಿ 9 ರಂದು ಮಧ್ಯಪ್ರದೇಶ ಫ್ರೀಡಂ ಆಫ್​ ರಿಲಿಜಿಯನ್ ಆರ್ಡಿನೆನ್ಸ್​, 2020 ಕ್ಕೆ ರಾಜ್ಯಪಾಲರಾದ ಆನಂದಿಬೇನ್ ಪಟೇಲ್ ಅನುಮೋದನೆ ನೀಡಿದ್ದರು. ಸುಗ್ರೀವಾಜ್ಞೆ ಜಾರಿಗೆ ಬಂದ ಒಂದೇ ತಿಂಗಳಲ್ಲಿ 23 ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗಿದೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ದೂರು ನೀಡಲು ಹೋದ ಮಹಿಳೆಯ ರೇಪ್ ! ಪೊಲೀಸ್​ ಕಾಂಪೌಂಡಲ್ಲೇ ಅಪರಾಧ ?!

    “ಟಿಎಂಸಿ ಸೃಷ್ಟಿ ಮಾಡಿರುವ ಕೊಚ್ಚೆಯಿಂದಾಗಿ ಕಮಲ ಅರಳಲಿದೆ” : ಕೊಲ್ಕತಾದಲ್ಲಿ ಮೋದಿ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts