More

    ಸಂಸತ್ತಿನಲ್ಲಿ ಸರಾಸರಿ 7 ನಿಮಿಷಗಳ ಚರ್ಚೆಯೊಂದಿಗೆ 12 ಮಸೂದೆಗಳ ಅಂಗೀಕಾರ!

    ನವದೆಹಲಿ : ವಿರೋಧ ಪಕ್ಷಗಳ ಗದ್ದಲದ ನಡುವೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕಲಾಪಗಳು ಮತ್ತೆ ಮತ್ತೆ ಮುಂದೂಡಲ್ಪಡುತ್ತಾ ಸಾಗುತ್ತಿವೆ. ಹೀಗಿರುವಾಗ, ಕೇಂದ್ರ ಸರ್ಕಾರ ಸಂಸತ್ತಿನಲ್ಲಿ 12 ಮಸೂದೆಗಳನ್ನು ಸರಾಸರಿ 7 ನಿಮಿಷಕ್ಕಿಂತ ಕಡಿಮೆ ಚರ್ಚೆಯೊಂದಿಗೆ ಅಂಗೀಕರಿಸಿದೆ ಎಂದು ಟಿಎಂಸಿ ಸಂಸದ ಡೆರೆಕ್​ ಒ ಬ್ರೇನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಬಂಗಾಳದ ಸಂಸದ ಡೆರೆಕ್​ ಅವರು, “ಕಳೆದ 10 ದಿನಗಳಲ್ಲಿ ಮೋದಿ-ಷಾ 12 ಮಸೂದೆಗಳನ್ನು 7 ನಿಮಿಷಕ್ಕಿಂತ ಕಡಿಮೆ ಚರ್ಚೆ ನಡೆಸಿ, ತರಾತುರಿಯಲ್ಲಿ ಪಾಸ್​ ಮಾಡಿಸಿದ್ದಾರೆ” ಎಂದಿದ್ದಾರೆ. “ಕಾನೂನು ಮಾಡುತ್ತಿದ್ದಾರಾ? ಇಲ್ಲಾ ಪಾಪ್ಡಿ ಚ್ಯಾಟ್​ ಮಾಡುತ್ತಿದ್ದಾರಾ?” ಎಂದು ಪ್ರಶ್ನಿಸಿ ವ್ಯಂಗ್ಯವಾಡಿದ್ದಾರೆ.

    ತಮ್ಮ ಈ ಟ್ವೀಟ್​ನಲ್ಲಿ ವಿವಿಧ ಮಸೂದೆಗಳನ್ನು ಅಂಗೀಕರಿಸಲು ಸಂಸತ್ತಿನಲ್ಲಿ ನಡೆದ ಚರ್ಚೆಯ ಅವಧಿಗಳ ವಿವರವನ್ನು ಡೆರೆಕ್​ ಅಡಕಗೊಳಿಸಿದ್ದಾರೆ. ಇದರಲ್ಲಿ ಕೊಕೊನಟ್​ ಡೆವಲೆಪ್​ಮೆಂಟ್​ ಬೋರ್ಡ್​ ಬಿಲ್​​ಅನ್ನು ಒಂದು ನಿಮಿಷ ಚರ್ಚೆ ಮಾಡಿದ ನಂತರ ಅಂಗೀಕರಿಸಲಾಯಿತು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

    ‘ಸತ್ಯಮೇವ ಜಯತೇ’! ಪತಿಯ ಬಂಧನದ ನಂತರ ಅಧಿಕೃತ ಹೇಳಿಕೆ ನೀಡಿದ ಶಿಲ್ಪಾ ಶೆಟ್ಟಿ – ಏನೆಂದರು?!

    ಭಾರತ ಹಾಕಿ ತಂಡವನ್ನು ಅಭಿನಂದಿಸಿದ ಆಸ್ಟ್ರೇಲಿಯಾ ಹೈಕಮಿಷನರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts