More

    ಕೃಷಿ ಮಸೂದೆ: ಚಳಿಯಲ್ಲಿಯೂ ರಾಜ್ಯಸಭೆಯಲ್ಲಿ ಏರಿದ ಕಾವು- ನಡೆಯುತಿದೆ ವಾಗ್ಯುದ್ಧ!

    ನವದೆಹಲಿ: ರಾಜ್ಯಸಭೆಯಲ್ಲಿ ಎರಡು ಕೃಷಿ ಮಸೂದೆಗಳು ಭಾರಿ ವಿರೋಧದ ನಡುವೆಯೂ ಇಂದು ಬೆಳಗ್ಗೆ ಮಂಡನೆಯಾಗಿದೆ. ರೈತರು ಮತ್ತು ಬೆಳೆಗಳ ವ್ಯಾಪಾರ, ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ, 2020 ಮತ್ತು ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020 ಎಂಬ ಎರಡು ಮಸೂದೆಗಳು ಮಂಡನೆಯಾಗಿವೆ.

    ಆದರೆ ಇದೀಗ ಈ ಮಸೂದೆ ರಾಜ್ಯಸಭೆಯಲ್ಲಿ ವಾಗ್ಯುದ್ಧಕ್ಕೆ ಎಡೆ ಮಾಡಿಕೊಟ್ಟಿದ್ದು, ಮಾತಿನ ಚಕಮಕಿ ಶುರುವಾಗಿದೆ.

    ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತವಿಲ್ಲ. ಈ ಮಸೂದೆಯನ್ನು ಅಂಗೀಕರಿಸಲು ಸರ್ಕಾರ ಶಿವಸೇನೆ ಮತ್ತು ಎನ್‌ಸಿಪಿಯಿಂದ ಬೆಂಬಲ ಕೋರಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎರಡೂ ಪಕ್ಷಗಳ ಮುಖ್ಯಸ್ಥರನ್ನು ಸಂಪರ್ಕಿಸಿ ಬೆಂಬಲ ಕೋರಿದ್ದಾರೆ.

    ಇದನ್ನೂ ಓದಿ: ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಮಂಡನೆ: ಮುಕ್ತ ವ್ಯಾಪಾರಕ್ಕಿದು ಅವಕಾಶ ಎಂದ ಕೇಂದ್ರ

    ಚರ್ಚೆಯ ಸಮಯದಲ್ಲಿ, ವೈಎಸ್ಆರ್ ಕಾಂಗ್ರೆಸ್ ಸಂಸದರ ಹೇಳಿಕೆಯಿಂದ ಅಧಿವೇಶನದಲ್ಲಿ ಭಾರಿ ಕೋಲಾಹಲವೆದ್ದಿತು. ಈ ಮಸೂದೆಯಿಂದ ಯಾರಿಗೆ ಲಾಭ ಸಿಗುತ್ತದೆ ಎಂದು ಸರ್ಕಾರ ಹೇಳುತ್ತಿದೆಯೋ ಅವರು ಬೀದಿಯಲ್ಲಿದ್ದಾರೆ. ಹಾಗಿದ್ದ ಮೇಲೆ ಇದರ ಲಾಭ ಯಾರಿಗೆ ಎಂದು ಕೇಳಿದರು. ಈ ಮಸೂದೆಗಳಿಂದ ಅದಾನಿ ಮತ್ತು ಅಂಬಾನಿಯಂತಹ ಕಾರ್ಪೊರೇಟ್ ಸಂಸ್ಥೆಗಳಿಗೆ ಲಾಭವಾಗಲಿದ್ದು, ರೈತರು ಇದನ್ನು ಎಂದಿಗೂ ಒಪ್ಪುವುದಿಲ್ಲ ಎಂದು ಕಾಂಗ್ರೆಸ್ ಸಂಸದ ಪ್ರತಾಪ್ ಸಿಂಗ್ ಬಜ್ವಾ ಹೇಳಿದ್ದಾರೆ. ಅಮೆರಿಕದಲ್ಲಿ ಇಂಥ ಗುತ್ತಿಗೆ ಕೃಷಿ ಭೂಮಿ ಕಾರ್ಪೊರೇಟ್ ಸ್ವಾಧೀನಕ್ಕೆ ಕಾರಣವಾಯಿತು ಎಂದರು.

    ಅದೇ ಸಮಯದಲ್ಲಿ ಬಿಜೆಪಿ ಮುಖಂಡ ಭೂಪೇಂದ್ರ ಯಾದವ್ ಅವರು ಕಾಂಗ್ರೆಸ್ ಚಿಂತನೆ ಇನ್ನೂ ಹಳೆಯದ್ದಾಗಿದೆ ಎಂದರೆ, ಎಸ್‌ಪಿ ಸಂಸದ ರಾಮ್ ಗೋಪಾಲ್ ಯಾದವ್ ಅವರು ಡಿಜಿಟಲ್ ಕೃಷಿಯ ಬಗ್ಗೆ ಮಾತನಾಡುತ್ತಿದ್ದೀರಿ, ಆದರೆ ಡಿಜಿಟಲ್ ವಂಚನೆಯನ್ನು ಹೇಗೆ ತಡೆಯಬೇಕು ಎಂಬುದನ್ನು ಸರ್ಕಾರ ವಿವರಿಸಬೇಕು ಎಂದು ಕಿಡಿ ಕಾರಿದರು.

    ಇದನ್ನೂ ಓದಿ: ವಿರೋಧದ ನಡುವೆ ಮಂಡನೆಯಾಯ್ತು ಕೃಷಿ ಮಸೂದೆ: ಗಾಳಿಸುದ್ದಿಗಳಿಗೆ ಕಿವಿಕೊಡಬೇಡಿ ಎಂದ ಪ್ರಧಾನಿ

    ಸಮಾಜವಾದಿ ಪಕ್ಷದ ಸಂಸದ ರಾಮ್ ಗೋಪಾಲ್ ಯಾದವ್ ಮಾತನಾಡಿ, ಮಂಡಿಗಳು ಕಾರ್ಪೊರೇಟ್ ಸಂಸ್ಥೆಗಳ ವಿರುದ್ಧ ಸ್ಪರ್ಧಿಸಲು ಹೇಗೆ ಸಾಧ್ಯ? ಇದು ಹೇಗಿದೆಯೆಂದರೆ ಬಿಎಸ್ಎನ್ಎಲ್ ಸಂಸ್ಥೆಯು ಜಿಯೋ ಮುಂದೆ ಸ್ಪರ್ಧಿಸುತ್ತಿದ್ದಂತಿದೆ ಎಂದರು.

    ಜಗನ್ಮೋಹನ್ ರೆಡ್ಡಿ ಅವರ ಪಕ್ಷ ವೈಎಸ್ಆರ್ ಕಾಂಗ್ರೆಸ್ ಮತ್ತು ನವೀನ್ ಪಟ್ನಾಯಕ್ ಅವರ ಪಕ್ಷ ಬಿಜೆಡಿಯ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ರಾಜ್ಯಸಭೆಯಲ್ಲಿ ಉಪ ಸ್ಪೀಕರ್ ಚುನಾವಣೆಯಂತೆ ಉಭಯ ಪಕ್ಷಗಳ ಬೆಂಬಲವೂ ಸಿಗುತ್ತದೆ ಎಂದು ಪಕ್ಷ ಆಶಿಸಿದೆ. ಈ ಎರಡೂ ಪಕ್ಷಗಳು ಸರ್ಕಾರವನ್ನು ಬೆಂಬಲಿಸಿದರೆ ಮಸೂದೆಯನ್ನು ರಾಜ್ಯಸಭೆ ಅಂಗೀಕರಿಸಲಿದೆ ಎಂದು ಹೇಳಲಾಗುತ್ತಿದೆ.

    ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸೋ ಬಿದಿರಿನ ಕುಕೀಸ್- ಯುವಕರಿಗೆ ಉದ್ಯೋಗದ ಮಹಾಪೂರ

    ‘ಮಕಾಟ್​’ ವಿವಿ ಪಠ್ಯದಲ್ಲಿ ಸುಶಾಂತ್​, ಶ್ರೀದೇವಿ ಸಾವಿನ ಅಧ್ಯಯನ

    ‘ವಡಾ ಪಾವನ್ನು ಸೋಲಿಸಲಿದೆ ಇಡ್ಲಿ’: ಜಾಲತಾಣದಲ್ಲಿ ಸದ್ದು ಮಾಡುತ್ತಿದೆ ಸೆಹ್ವಾಗ್​ ಟ್ವೀಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts