More

    ಐಸಿಸ್​ ಉಗ್ರರಾಗಲು ಹೊರಟ 500 ಯುವಕರ ಮನ ಪರಿವರ್ತನೆ: ಪೊಲೀಸರ ಸಾಹಸಗಾಥೆ

    ಕೊಚ್ಚಿ: ಉಗ್ರ ಸಂಘಟನೆ ಐಸಿಸ್‌ಗೆ ಭಾರಿ ಪ್ರಮಾಣದಲ್ಲಿ ನೇಮಕ ಪ್ರಕ್ರಿಯೆ ನಡೆಯುತ್ತಿದ್ದಂತೆಯೇ ಕೇರಳ ಪೊಲೀಸರು ಸದ್ದಿಲ್ಲದೆ ಐಸಿಸ್‌ ನಿರ್ನಾಮಕ್ಕೆ ಕಾರ್ಯತಂತ್ರ ರೂಪಿಸಿ ಐಸಿಸ್‌ ಸೇರಲಿದ್ದ 500 ಯುವಕರನ್ನು ರಕ್ಷಿಸಿದ್ದಾರೆ.

    ಕೇರಳದ ಉತ್ತರ ಭಾಗದಲ್ಲಿ ಐಸಿಸ್‌ನತ್ತ ಆಕರ್ಷಣೆಯಾಗಿ ಸೇರ್ಪಡೆಗೊಳ್ಳುವ ಯುವಕರ ಸಂಖ್ಯೆ ಹೆಚ್ಚುತ್ತಿರುವುದು 2016ರಲ್ಲಿ ಬೆಳಕಿಗೆ ಬಂದಿತ್ತು. ನಂತರ ರಹಸ್ಯ ಕಾರ್ಯತಂತ್ರ ರೂಪಿಸಿದ ಕೇರಳ ಪೊಲೀಸರು ‘ಆಪರೇಷನ್ ಪಿಜನ್’ ಹೆಸರಿನಲ್ಲಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಉಗ್ರ ಸಂಘಟನೆ ಮೇಲೆ ಆಕರ್ಷಿತರಾಗಿದ್ದ ಯುವಕರ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಪಡೆದು, ಅಂತಹ ಯುವಕರನ್ನು ಕೌನ್ಸೆಲಿಂಗ್ ಮೂಲಕ ಉಗ್ರ ಸಂಘಟನೆ ಸೇರುವುದನ್ನು ತಪ್ಪಿಸಿದ್ದಾರೆ.

    ಐಸಿಸ್‌ ಅನ್ನು ಮಟ್ಟ ಹಾಕಲೆಂದು ಕೇರಳ ಪೊಲೀಸರು ‘ಆಪರೇಷನ್‌ ಪಿಜನ್‌’ ಮೂಲಕ ಕಾಸರಗೋಡಿನ ನಿರ್ದಿಷ್ಟ ಪ್ರದೇಶಗಳನ್ನು ಗುರುಯಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಕಾರ್ಯಾಚರಣೆಗೆ ಸೋಷಿಯಲ್‌ ಮೀಡಿಯಾಗಳ ಜತೆ ಇತರ ಏಜೆನ್ಸಿಗಳ ನೆರವನ್ನೂ ಪಡೆದುಕೊಳ್ಳುತ್ತಿದ್ದಾರೆ.

    ಇವರಲ್ಲಿ ಹೆಚ್ಚಿನವರು ಕಣ್ಣೂರು, ಮಲಪ್ಪುರಂ, ಕಾಸರಗೋಡು, ಕೋಝಿಕ್ಕೋಡ್‌, ಪಾಲಕ್ಕಾಡ್‌ನ ಯುವಕರು ಎಂದು ಪೊಲೀಸ್​ ಮೂಲಗಳು ಹೇಳಿವೆ. ಇವರು ಉಗ್ರಸಂಘಟನೆ ಸೇರಲು ಹವಣಿಸುತ್ತಿದ್ದುದರ ಕುರಿತು ಗುಪ್ತದಳ ಸಂಸ್ಥೆಯ ಮೂಲಕ ಮಾಹಿತಿ ಪಡೆದ ನಂತರ ಕಾರ್ಯಾಚರಣೆ ನಡೆಸಲಾಗಿದೆ.

    ಇದನ್ನೂ ಓದಿ: ಕೃಷಿ ಮಸೂದೆ: ಚಳಿಯಲ್ಲಿಯೂ ರಾಜ್ಯಸಭೆಯಲ್ಲಿ ಏರಿದ ಕಾವು- ನಡೆಯುತಿದೆ ವಾಗ್ಯುದ್ಧ!

    ಇಲ್ಲಿಯವರೆಗೆ ಕೇರಳ ಪೊಲೀಸರ ಜತೆ ಗುಪ್ತದಳ ಸಿಬ್ಬಂದಿ, ವಿಶೇಷ ತನಿಖಾ ತಂಡಗಳು ಸೇರಿ ಯುವಕರು, ಅವರ ಪೋಷಕರು, ಧಾರ್ಮಿಕ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಶಿಷ್ಟ ರೀತಿಯಲ್ಲಿ ಈ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿವೆ.

    ಈ ಎಲ್ಲ ಯುವಕರು ಇಪ್ಪತ್ತು ವರ್ಷ ಆಸುಪಾಸಿನವರಾಗಿದ್ದು, ಹೆಚ್ಚಿನವರು ವೈದ್ಯಕೀಯ ಇಲ್ಲವೇ ಇಂಜಿನಿಯರಿಂಗ್‌ ಅಧ್ಯಯನ ಆಸಕ್ತರಾಗಿದ್ದವರು. ಯಾರೂ ಶಿಕ್ಷಣ ಇಲ್ಲದವರು ಆಗಿಲ್ಲ ಎಂಬುದು ಗಮನಾರ್ಹ ಎಂದು ಡಿಜಿಪಿ ಮೊಹಮ್ಮದ್‌ ಯಾಸಿನ್‌ ಈ ಹಿಂದೆ ಹೇಳಿದ್ದರು.

    ಇವರಿಗೆ ಕೌನ್ಸೆಲಿಂಗ್​ ಮೂಲಕ ಮಾತ್ರವಲ್ಲದೇ ಮಸೀದಿಗಳ ಮೂಲಕ ತಿಳಿವಳಿಕೆ ನೀಡುವ ಕಾರ್ಯಕ್ರಮಗಳನ್ನೂ ನಡೆಸುತ್ತಿದ್ದೇವೆ. ಅವರ ಮನಸ್ಸನ್ನು ಪರಿವರ್ತನೆ ಮಾಡಲು ಎಲ್ಲಾ ರೀತಿಯ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದೇವೆ. ಇದಕ್ಕಾಗಿ ಕೆಲವು ಮುಸ್ಲಿಂ ಸಂಘಟನೆಗಳ ಸಹಾಯವನ್ನೂ ಕೋರುತ್ತೇವೆ. ಅಗತ್ಯ ಕಂಡುಬಂದರೆ ಪ್ರತಿಯೊಬ್ಬ ಯುವಕರಿಗೆ ಪ್ರತ್ಯೇಕವಾಗಿ ಕೌನ್ಸೆಲಿಂಗ್​ ನಡೆಸುತ್ತೇವೆ ಎನ್ನುತ್ತಾರೆ ಪೊಲೀಸ್​ ಅಧಿಕಾರಿಗಳು.

    ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸೋ ಬಿದಿರಿನ ಕುಕೀಸ್- ಯುವಕರಿಗೆ ಉದ್ಯೋಗದ ಮಹಾಪೂರ

    ‘ವಡಾ ಪಾವನ್ನು ಸೋಲಿಸಲಿದೆ ಇಡ್ಲಿ’: ಜಾಲತಾಣದಲ್ಲಿ ಸದ್ದು ಮಾಡುತ್ತಿದೆ ಸೆಹ್ವಾಗ್​ ಟ್ವೀಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts