More

    ‘ಜೊತೆಜೊತೆಯಲಿ’ ತಂಡದ ಜತೆಗಿನ ಕಿರಿಕ್​ ಬಳಿಕ ಬಿಗ್​ಬಾಸ್​-9 ಮನೆಯೊಳಕ್ಕೆ ಅನಿರುದ್ಧ್​?

    ಬೆಂಗಳೂರು: ಬಿಗ್ ಬಾಸ್ ಕನ್ನಡ ಓಟಿಟಿ-1 ಅಂತಿಮ ಹಂತ ತಲುಪಿದ್ದು, ಇದೇ ವಾರ ಮುಗಿಯಲಿದೆ. ಇದರ ಬೆನ್ನಲ್ಲೇ ಬಿಗ್​ಬಾಸ್ ಸೀಸನ್- 9 ಶುರುವಾಗುವ ಎಲ್ಲಾ ಸಾಧ್ಯತೆಗಳೂ ದಟ್ಟವಾಗಿದೆ. ಇದಕ್ಕೆ ಈಗಾಗಲೇ ತಯಾರಿ ನಡೆಸಲಾಗುತ್ತಿದೆ ಎಂದೂ ಹೇಳಲಾಗುತ್ತಿದೆ.

    ಈಗಾಗಲೇ ಕಲರ್ಸ್‌ ಕನ್ನಡ ವಾಹಿನಿಯು ಬಿಗ್‌ಬಾಸ್‌ ಸೀನಸ್‌ 9 ರ ಪ್ರೊಮೊ ಬಿಡುಗಡೆ ಮಾಡಿದ್ದು, ಯಾರೆಲ್ಲಾ ಇಲ್ಲಿ ಹೋಗಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಬಿಗ್​ಬಾಸ್​ನ ಓಟಿಟಿಯಿಂದ ಕೆಲವು ಸ್ಪರ್ಧಿಗಳು ಬಿಗ್‌ ಬಾಸ್‌ ಮೇನ್‌ ಸೀಸನ್​ಗೆ ಹೋಗಲಿದ್ದಾರೆ ಎಂದೂ ಹೇಳಲಾಗುತ್ತಿದೆ.

    ಇದರ ನಡುವೆಯೇ ಇದೀಗ ‘ಜೊತೆಜೊತೆಯಲಿ’ ಧಾರಾವಾಹಿಯ ನಾಯಕರಾಗಿದ್ದ ಅನಿರುದ್ಧ್​ ಅವರ ಹೆಸರು ಮುನ್ನೆಲೆಗೆ ಬಂದಿದೆ.

    ‘ಜೊತೆಜೊತೆಯಲಿ’ ಧಾರಾವಾಹಿಯ ತಂಡದಲ್ಲಿ ಶುರುವಾದ ಗಲಾಟೆಯಿಂದಾಗಿ ಅನಿರುದ್ಧ್​ ಇದಾಗಲೇ ಧಾರಾವಾಹಿ ತಂಡದಿಂದ ಹೊರಕ್ಕೆ ಬಂದಿದ್ದಾರೆ. ಅವರ ಜಾಗದಲ್ಲಿ ನಾಯಕನಟನಾಗಿ ತಾವು ಬೇರೆಯವರನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ, ಅವರೇ ವಾಪಸ್​ ಬರಬೇಕು ಎಂದು ಪ್ರತಿಭಟನೆಗಳು ನಡೆಯುತ್ತಿದ್ದರೂ, ಇದಾಗಲೇ ಧಾರಾವಾಹಿಯ ಕಥೆಯನ್ನೇ ಬದಲಿಸಲಾಗಿದೆ. ಈಗ ನಡೆಯುತ್ತಿರುವ ಧಾರಾವಾಹಿ ಕಥೆಯನ್ನು ಗಮನಿಸಿದರೆ, ಅನಿರುದ್ಧ್​ ಪುನಃ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಾರರು ಎಂಬುದು ಬಹುತೇಕ ಖಚಿತವಾಗಿದೆ.

    ಇಷ್ಟೇ ಅಲ್ಲದೇ, ಧಾರಾವಾಹಿ ಮತ್ತು ಯಾವುದೇ ರಿಯಾಲಿಟಿ ಷೋಗಳಲ್ಲಿ ಅನಿರುದ್ಧ ಅವರನ್ನು ಬಳಸಿಕೊಳ್ಳಬೇಡಿ ಎಂದು ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಅಂಗ ಸಂಸ್ಥೆಯಾದ ಟೆಲಿವಿಷನ್ ನಿರ್ದೇಶಕರ ಸಂಘ ಈಗಾಗಲೇ ಕನ್ನಡದ ಅಷ್ಟೂ ಮನರಂಜನಾ ವಾಹಿನಿಗಳಿಗೆ ಮನವಿ ಮಾಡಿವೆ. ಇದರ ಹೊರತಾಗಿಯೂ ಅನಿರುದ್ಧ್​ ಅವರು ಬಿಗ್​ಬಾಸ್​ ಮನೆಗೆ ಹೋಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

    ಬಿಗ್ ಬಾಸ್ ಸೀಸನ್ 9ಕ್ಕೆ ಅನಿರುದ್ಧ್​ ಕೂಡ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಕುರಿತು ವಾಹಿನಿಯಾಗಲಿ ಅಥವಾ ಅನಿರುದ್ಧ್​ ಆಗಲಿ ಖಚಿತ ಪಡಿಸಿಲ್ಲ. ಈ ಎಲ್ಲ ಊಹಾಪೋಹಗಳಿಗೂ ಇನ್ನೇನೂ ಕೆಲವು ದಿನಗಳಲ್ಲಿ ಇದೆಲ್ಲದಕ್ಕೂ ಉತ್ತರ ಸಿಗಲಿದೆ.

    ಲವ್ವಲ್ಲಿ ಏನಿದೆ? ಸಖತ್ ಆಗಿರೋ 24 ವರ್ಷದ ಹುಡುಗನನ್ನ ಕಳಿಸಿಕೊಡಪ್ಪಾ ದೇವ್ರೆ ಎಂದ ಸೋನು ಗೌಡ!

    ಆಪರೇಷನ್​ ಒತ್ತುವರಿ: 30 ಐಟಿ, ಬಿಟಿಗೂ ಬಂತು ಕಂಟಕ- ಮುಲಾಜೇ ಇಲ್ಲ… ದೊಡ್ಡವರನ್ನೂ ಬಿಡಲ್ಲ ಎಂದ ಸಿಎಂ

    ನಮ್​ ಇಲಾಖೆಯಲ್ಲಿ ಹಲವಾರು ಕಳ್ಳರಿದ್ದಾರೆ, ನಾನೇ ಅವರ ನಾಯಕ! ಸಚಿವನ ಮಾತಿಗೆ ಸಿಎಂ ನಿತೀಶ್​ ಕಕ್ಕಾಬಿಕ್ಕಿ

    ನಿತೀಶ್​ಕುಮಾರ್​ಗೆ ಬಿಗ್​ ಶಾಕ್​: ಭ್ರಷ್ಟರಿಗೆ ಸಾಥ್​ ನೀಡಿದ್ದು ಸಹಿಸಲ್ಲ ಎಂದು ಕಮಲದ ಕೈಹಿಡಿದ 15 ಮಂದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts