ತಿಮ್ಮಪ್ಪನ ದರ್ಶನ ಪಡೆದು ಬರುತ್ತಿದ್ದ ವೇಳೆ ಹಾವೇರಿಯಲ್ಲಿ ಅಪಘಾತ: ರಕ್ಷಣಾಸಿಬ್ಬಂದಿ ಹರಸಾಹಸ

accident
Published on

ಹಾವೇರಿ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಾಪಸ್ ಊರಿಗೆ ತೆರಳುತ್ತಿದ್ದ ಭಕ್ತರು ಇದ್ದ ವಾಹನ ನಿಂತಿದ್ದ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿರುವ ಘಟನೆ ಹಾವೇರಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಡೆದಿದೆ.

ನಿಂತಿದ್ದ ಕ್ಯಾಂಟರ್ ವಾಹನಕ್ಕೆ ಕ್ರೂಸರ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿರುವುದಾಗಿ ವರದಿಯಾಗಿದೆ. ಅಪಘಾತ ನಡೆದ ತಕ್ಷಣ ಸತೀಶ್ ಕಾಸರಕರ ಎಂಬ ವ್ಯಕ್ತಿ ಕ್ರೂಸರ್‌ನಲ್ಲಿ ಸಿಕ್ಕು ಹೊರಕ್ಕೆ ಬರಲಾರದೇ ಪರದಾಡಿದ್ದಾರೆ.

ಸತೀಶ್‌ ಅವರ ಕಾಲು ಕ್ರೂಸರ್‌ನಲ್ಲಿಯೇ ಸಿಲುಕಿಬಿಟ್ಟಿದೆ. ಅವರನ್ನು ಹೊರಕ್ಕೆ ತೆಗೆಯಬೇಕಾದರೆ ಕಾಲು ಮಾತ್ರ ಸಿಲುಕಿ ಹಾಕಿಕೊಂಡಿದ್ದರಿಂದ ಅವರನ್ನು ಹೊರಕ್ಕೆ ತೆಗೆಯಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಈ ಅಪಘಾತದಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಪಡೆಯಲು ಹೋಗಿದ್ದ ಇವರೆಲ್ಲರೂ ಮಹಾರಾಷ್ಟ್ರದವರು ಎನ್ನಲಾಗಿದೆ. ಕ್ರೂಸರ್‌ನಲ್ಲಿ ಇವರು ಊರಿಗೆ ವಾಪಸಾಗುತ್ತಿದ್ದರು. ಅಲ್ಲಿಯೇ ಕ್ಯಾಂಟರ್‌ ನಿಂತಿತ್ತು. ಆದರೆ ವೇಗದಲ್ಲಿ ಬರುತ್ತಿದ್ದ ಕ್ರೂಸರ್‌ ಚಾಲಕನಿಗೆ ತಕ್ಷಣ ಬ್ರೇಕ್‌ ಹಾಕಲು ಸಾಧ್ಯವಾಗದೇ ನಿಂತ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿರುವುದಾಗಿ ಪ್ರಾಥಮಿಕ ವರದಿಗಳು ಹೇಳುತ್ತಿವೆ.

ಹಾವೇರಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net