More

    ಡಿಪ್ಲೋಮಾ ಕಲಿತವರಿಗೆ ಗುಡ್‌ನ್ಯೂಸ್‌: ಇಂಡಿಯನ್ ಆಯಿಲ್​ನಲ್ಲಿ 300 ಅಪ್ರೆಂಟೀಸ್‌ ತರಬೇತಿಗೆ ಆಹ್ವಾನ

    ಇಂಡಿಯನ್ ಆಯಿಲ್ ಕಾರ್ಪೆರೇಷನ್ ಲಿಮಿಟೆಡ್ (ಐಒಸಿಎಲ್) ದೇಶದ ಅತಿದೊಡ್ಡ ವಾಣಿಜ್ಯ ಉದ್ಯಮವಾಗಿದ್ದು, ರಾಷ್ಟ್ರಕ್ಕಾಗಿ ಯುವಕರಲ್ಲಿ ಕೌಶಲ ನಿರ್ಮಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತ ವಲಯಗಳಿಗೆ ಅಪ್ರೆಂಟೀಸ್​ಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಪ್ರೆಂಟೀಸ್ ಆಕ್ಟ್ 1961ರ ಪ್ರಕಾರ ಈ ನೇಮಕಾತಿ ನಡೆಯಲಿದೆ. ಟೆಕ್ನಿಕಲ್ ಹಾಗೂ ನಾನ್ ಟೆಕ್ನಿಕಲ್ ಟ್ರೇಡ್ ಅಪ್ರೆಂಟೀಸ್ ತರಬೇತಿಯು 12 ತಿಂಗಳಿಂದ 15 ತಿಂಗಳು ಇರಲಿದೆ ಎಂದು ತಿಳಿಸಲಾಗಿದೆ.

    ಒಟ್ಟು ಹುದ್ದೆಗಳು: 300

    ಎಲ್ಲೆಲ್ಲಿ ನೇಮಕಾತಿ?: ಕರ್ನಾಟಕ-52, ತಮಿಳುನಾಡು ಮತ್ತು ಪುದುಚೇರಿ – 84, ಕೇರಳ-49, ಆಂಧ್ರಪ್ರದೇಶ-55, ತೆಲಂಗಾಣ- 60 ಸ್ಥಾನಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
    ಕರ್ನಾಟಕದ ವಿವರ – ಒಟ್ಟು – 52

    – ಟ್ರೇಡ್ ಅಪ್ರೆಂಟೀಸ್ – 10

    * ಫಿಟ್ಟರ್ * ಎಲೆಕ್ಟ್ರಿಷಿಯನ್ * ಎಲೆಕ್ಟ್ರಾನಿಕ್ಸ್ ಮೆಕಾನಿಕ್ * ಇನ್​ಸ್ಟ್ರುಮೆಂಟ್ ಮೆಕಾನಿಕ್ * ಮಷಿನಿಸ್ಟ್

    – ಟೆಕ್ನಿಕಲ್ ಅಪ್ರೆಂಟೀಸ್ – 10

    * ಮೆಕಾನಿಕಲ್ * ಎಲೆಕ್ಟ್ರಿಕಲ್ * ಇನ್​ಸ್ಟ್ರುಮೆಂಟೇಷನ್ * ಸಿವಿಲ್ * ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ * ಎಲೆಕ್ಟ್ರಾನಿಕ್ಸ್

    – ಟ್ರೇಡ್ ಅಪ್ರೆಂಟೀಸ್ ಅಕೌಂಟ್ – 28

    – ಡಾಟಾ ಎಂಟ್ರಿ ಆಪರೇಟರ್ (ಫ್ರೆಷರ್, ಕೌಶಲ ಪ್ರಮಾಣಪತ್ರ ಹೊಂದಿದವರು) – 2

    – ರೀಟೇಲ್ ಸೇಲ್ಸ್ ಅಸೋಸಿಯೇಟ್ (ಫ್ರೆಷರ್, ಕೌಶಲ ಪ್ರಮಾಣಪತ್ರ ಹೊಂದಿದವರು) – 2

    ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 168 ಸ್ಥಾನ, ಎಸ್ಸಿಗೆ 36, ಎಸ್ಟಿಗೆ 6, ಇತರ ಹಿಂದುಳಿದ ವರ್ಗಕ್ಕೆ 67, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 23 ಸ್ಥಾನ ಮೀಸಲಿರಿಸಿದ್ದು, ಅಂಗವಿಕಲರಿಗೆ 12 ಸ್ಥಾನ ಕಾಯ್ದಿರಿಸಲಾಗಿದೆ.

    ವಿದ್ಯಾರ್ಹತೆ: ಫಿಟ್ಟರ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕಾನಿಕ್, ಇನ್​ಸ್ಟ್ರುಮೆಂಟ್ ಮೆಕಾನಿಕ್, ಮಷಿನಿಸ್ಟ್​ನಲ್ಲಿ ಐಟಿಐ ಕೋರ್ಸ್, ಮೆಕಾನಿಕಲ್, ಎಲೆಕ್ಟ್ರಿಕಲ್, ಇನ್​ಸ್ಟ್ರುಮೆಂಟೇಷನ್, ಸಿವಿಲ್, ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್​ನಲ್ಲಿ 3 ವರ್ಷದ ಡಿಪ್ಲೊಮಾ, ದ್ವಿತೀಯ ಪಿಯುಸಿ, ಯಾವುದೇ ಪದವಿ ಪಡೆದಿರಬೇಕು. ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳು ಶೇ. 45 ಅಂಕ, ಇತರ ಅಭ್ಯರ್ಥಿಗಳು ಶೇ. 50 ಅಂಕ ಪಡೆದಿರಬೇಕು.

    ವಯೋಮಿತಿ: 30.11.2021ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ, ಗರಿಷ್ಠ 24 ವರ್ಷ ವಯೋಮಿತಿ ನಿಗದಿಪಡಿಸಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

    ಆಯ್ಕೆ ಪ್ರಕ್ರಿಯೆ: ಜನರಲ್ ಆಪ್ಟಿಟ್ಯೂಡ್ ಆಂಡ್ ರೀಸನಿಂಗ್, ಸಾಮಾನ್ಯ ಇಂಗ್ಲಿಷ್, ನ್ಯೂಮರಿಕಲ್ ಆಪ್ಟಿಟ್ಯೂಡ್ ಮತ್ತು ಸಾಮಾನ್ಯ ಜ್ಞಾನದ ಕುರಿತು 100 ಅಂಕಗಳ ಬಹುಆಯ್ಕೆ ಮಾದರಿಯ ಪ್ರಶ್ನೆಗಳ ಲಿಖಿತ ಪರೀಕ್ಷೆ ನಡೆಸಿ ಇದರಲ್ಲಿ ಆಯ್ಕೆಯಾದವರನ್ನು ಅಂತಿಮ ಆಯ್ಕೆ ಪ್ರಕ್ರಿಯೆಗೆ ಆಹ್ವಾನಿಸಲಾಗುವುದು. ಹಿಂದಿ ಮತ್ತು ಇಂಗ್ಲಿಷ್​ನಲ್ಲಿ ಪ್ರಶ್ನೆಪತ್ರಿಕೆ ಇರಲಿದೆ.

    2022ರ ಜನವರಿ 9ರಂದು ಬೆಂಗಳೂರು, ಚೆನ್ನೈ, ಕೊಚ್ಚಿ, ವಿಜಯವಾಡ, ಹೈದರಾಬಾದ್​ನಲ್ಲಿ ನಡೆಸಲಾಗುವುದು. ಪ್ರವೇಶಪತ್ರದಲ್ಲಿ ಸಂಪೂರ್ಣ ಮಾಹಿತಿ ಹಾಗೂ ಪರೀಕ್ಷಾ ಕೇಂದ್ರದ ಮಾಹಿತಿ ನೀಡಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 27.12.2021

    ಅಧಿಸೂಚನೆಗೆ: https://bit.ly/3EXKqNP

    ಮಾಹಿತಿಗೆ: http://iocl.com

    ಕೇಂದ್ರೀಯ ವಿವಿಯಲ್ಲಿದೆ 71 ಬೋಧಕ ಹುದ್ದೆಗಳು: 1.45 ಲಕ್ಷ ರೂ.ವರೆಗೆ ಸಂಬಳ, ಕೆಲವೇ ದಿನ ಬಾಕಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts